ವಾಷಿಂಗ್ಟನ್:ಉಕ್ರೇನ್ ಮೇಲಿನ ಯುದ್ಧ ಖಂಡಿಸಿ ರಷ್ಯಾ ಮೇಲಿನ ನಿರ್ಬಂಧಗಳು ಮತ್ತಷ್ಟು ಹೆಚ್ಚಾಗುತ್ತಿವೆ. ಇದೀಗ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳು ರಷ್ಯಾ ಬ್ಯಾಂಕ್ಗಳನ್ನು ಸ್ವಿಫ್ಟ್ (SWIFT ಅಂದ್ರೆ ಸೊಸೈಟಿ ಆಫ್ ವರ್ಲ್ಡ್ವೈಡ್ ಇಂಟರ್ಬ್ಯಾಂಕ್ ಫೈನಾನ್ಶಿಯಲ್ ಟೆಲಿಕಮ್ಯುನಿಕೇಷನ್) ವ್ಯವಸ್ಥೆಯಿಂದ ಹೊರಹಾಕುವುದಾಗಿ ಘೋಷಿಸಿವೆ. ಸ್ವಿಫ್ಟ್ ಮೆಸೇಜಿಂಗ್ ರಷ್ಯಾದ ಪ್ರಮುಖ ಆದಾಯ ಮೂಲಗಳಲ್ಲಿ ಒಂದು.
ಆಯ್ದ ರಷ್ಯಾ ಬ್ಯಾಂಕ್ಗಳನ್ನು ಸ್ವಿಫ್ಟ್ನಿಂದ ಹೊರ ಹಾಕುವುದಾಗಿ ನಿರ್ಧರಿಸಿದ್ದೇವೆ. ಇದರಿಂದ ಈ ಬ್ಯಾಂಕ್ಗಳು ಅಂತಾರಾಷ್ಟ್ರೀಯ ಹಣಕಾಸು ವ್ಯವಹಾರ ಸಂಪರ್ಕ ಕಡಿದುಕೊಳ್ಳಲಿವೆ ಎಂದು ಯುರೋಪ್ ಕಮಿಷನ್, ಫ್ರಾನ್ಸ್, ಜರ್ಮನಿ, ಇಟಲಿ, ಯುಕೆ, ಕೆನಡಾ ಮತ್ತು ಅಮೆರಿಕ ಜಂಟಿ ಪ್ರಕಟಣೆಯಲ್ಲಿ ತಿಳಿಸಿವೆ.
ರಷ್ಯಾ ಬ್ಯಾಂಕುಗಳ ವ್ಯವಹಾರ ಮತ್ತು ಆಸ್ತಿಯನ್ನು ಫ್ರೀಜ್ ಮಾಡುತ್ತೇವೆ. ಈ ಮೂಲಕ ರಷ್ಯಾದ ಕೇಂದ್ರ ಬ್ಯಾಂಕುಗಳನ್ನು ದುರ್ಬಲಗೊಳಿಸಲು ಒಪ್ಪಿಕೊಂಡಿದ್ದೇವೆ. ಹಾಗೆಯೇ ಯುಕ್ರೇನ್ನಲ್ಲಿನ ರಷ್ಯಾದ ಯುದ್ಧಕ್ಕೆ ಸಹಾಯ ಮಾಡುವ ವ್ಯಕ್ತಿ ಮತ್ತು ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದೇವೆ. ಹಾಗೆಯೇ ರಷ್ಯಾದ ಸಿರಿವಂತರಿಗೆ ಕೊಡುತ್ತಿದ್ದ ಗೋಲ್ಡನ್ ಪಾಸ್ಪೋರ್ಟ್ ಮೇಲೂ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದು ಯುರೋಪ್ ಕಮಿಷನ್ನ ಅಧ್ಯಕ್ಷ ಉರ್ಸುಲಾ ವನ್ ಡರ್ ಲೆಯೆನ್ ಹೇಳಿದ್ದಾರೆ.
ಸ್ವಿಫ್ಟ್ ಮೂಲಕ ಜಗತ್ತಿನ ಯಾವುದೇ ಬ್ಯಾಂಕ್ ಜೊತೆಗೂ ವ್ಯವಹಾರ ಮಾಡಬಹುದು. ಸ್ವಿಫ್ಟ್ನಿಂದ ಕೂಡ ರಷ್ಯಾಗೆ ಉತ್ತಮ ಆದಾಯ ಸಿಗುತ್ತಿದೆ.
ಇದನ್ನೂ ಓದಿ: ಉಕ್ರೇನ್‌ನ ಗ್ಯಾಸ್ ಪೈಪ್‌ಲೈನ್ ಸ್ಫೋಟಿಸಿದ ರಷ್ಯಾ; ಶಸ್ತ್ರಾಸ್ತ್ರ ಪೂರೈಕೆಗೆ ಮುಂದಾದ ಜರ್ಮನಿ