ಕರ್ನಾಟಕ

karnataka

ETV Bharat / international

ಅಮೆರಿಕದ ವೈಮಾನಿಕ ದಾಳಿಯಲ್ಲಿ ಐಸಿಸ್​​ ನಾಯಕ ಅಬು ಯಾಸರ್​ ಹತ್ಯೆ

ಇರಾಕ್​ ಹಾಗೂ ಅಮೆರಿಕ ಸೇನೆ ಜಂಟಿಯಾಗಿ ಕೈಗೊಂಡಿದ್ದ ಕಾರ್ಯಾಚರಣೆಯಲ್ಲಿ ಐಸಿಸ್​ ನಾಯಕ ಜಬ್ಬರ್ ಸಲ್ಮಾನ್ ಅಲಿ ಫರ್ಹಾನ್ ಅಲ್​​​​​-ಇಸ್ಸಾವಿ ಅಲಿಯಾಸ್ ಅಬು ಯಾಸರ್​ (43)ನನ್ನು ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.

us-airstrike-in-iraq-kills-top-isis-leader
ಅಮೆರಿಕದ ವೈಮಾನಿಕ ದಾಳಿಯಲ್ಲಿ ಐಸಿಸ್​​ ನಾಯಕ ಅಬು ಯಾಸರ್​ ಹತ್ಯೆ

By

Published : Jan 30, 2021, 4:09 PM IST

ಬಾಗ್ದಾದ್ (ಇರಾಕ್): ಐಸಿಸ್​​​​​​​​​ ಉಗ್ರ ಸಂಘಟನೆಯ ವಿರುದ್ಧ ಕಿರ್ಕುಕ್​​​​ನಲ್ಲಿ ಅಮೆರಿಕ ಸೇನೆ ನಡೆಸಿದ ವೈಮಾನಿಕ ದಾಳಿಯಲ್ಲಿ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ ಸಂಘಟನೆಯ (ISIS) ನಾಯಕನನ್ನು ಹೊಡೆದುರುಳಿಸಲಾಗಿದೆ ಎಂದು ದಿ ಹಿಲ್​ ಎಂಬ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇರಾಕ್​ ಹಾಗೂ ಅಮೆರಿಕ ಸೇನೆ ಜಂಟಿಯಾಗಿ ಕೈಗೊಂಡಿದ್ದ ಕಾರ್ಯಾಚರಣೆಯಲ್ಲಿ ಐಸಿಸ್​ ನಾಯಕ ಜಬ್ಬರ್ ಸಲ್ಮಾನ್ ಅಲಿ ಫರ್ಹಾನ್ ಅಲ್​​​​​-ಇಸ್ಸಾವಿ ಅಲಿಯಾಸ್ ಅಬು ಯಾಸರ್​ (43) ಹತ್ಯೆ ಮಾಡಲಾಗಿದೆ.

ಈ ತಿಂಗಳಲ್ಲಿ ಬಾಗ್ದಾದ್​​ನಲ್ಲಿ ನಡೆದಿದ್ದ ಎರಡು ಆತ್ಮಹುತಿ ಬಾಂಬ್ ದಾಳಿಯ ನಂತರ ಉಗ್ರರ ಅಡುಗುದಾಣಗಳ ಮೇಲೆ ವೈಮಾನಿಕ ದಾಳಿ ನಡೆಸಲಾಗಿತ್ತು.

ಕಳೆದ ವಾರ ಬಾಗ್ದಾದ್​ನಲ್ಲಿ ಸಂಭವಿಸಿದ ಎರಡು ಆತ್ಮಹುತಿ ಬಾಂಬ್ ದಾಳಿಯ ಹೊಣೆಯನ್ನು ಐಸಿಸ್ ಸಂಘಟನೆ ಹೊತ್ತುಕೊಂಡಿತ್ತು. ಈ ದಾಳಿಯಲ್ಲಿ 32 ಮಂದಿ ಸಾವಿಗೀಡಾಗಿ ಹಲವರು ಗಾಯಗೊಂಡಿದ್ದರು.

ಇರಾಕ್​ನಲ್ಲಿ ಅಮೆರಿಕ ಹಾಗೂ ಇರಾಕ್ ಸೇನೆಗಳು ಜಂಟಿ ಕಾರ್ಯಾಚರಣೆ ಮುಂದುವರಿಸಿದ್ದು, ಐಸಿಸ್​ನ ಇನ್ನೋರ್ವ ನಾಯಕ ಅಬು ಇಬ್ರಾಹಿಂ ಅಲ್​​ ಹಶ್ಮಿ ಅಲ್ ​ - ಖುರೇಶಿಯ ಪತ್ತೆಯಲ್ಲಿ ನಿರತರಾಗಿದ್ದು, ಆತನ ಬಗ್ಗೆ ಇನ್ನೂ ಸುಳಿವು ಪತ್ತೆಯಾಗಿಲ್ಲ. 2019ರ ಯುಎಸ್​ ದಾಳಿ ವೇಳೆ ಸಾವನಪ್ಪಿದ ಐಸಿಸ್​ ನಾಯಕ ಅಬೂಬಕರ್ ಅಲ್- ಬಾಗ್ದಾದಿಯ ನಂತರ ಅಲ್-ಖುರೇಶಿಯನ್ನು ಐಸಿಸ್​​​ನ ಖಲೀಫ್ ಎಂದು ಕರೆಯಲಾಗುತ್ತಿದ್ದು, ಈತನ ಹುಡುಕಾಟ ಮುಂದುವರಿದಿದೆ.

ಇದನ್ನೂ ಓದಿ:ಟೆಸ್ಟ್​ ಫ್ಲೈ ನಡೆಸುವಾಗ ಸ್ಫೋಟಗೊಂಡ ಸ್ಪೇಸ್ ‌ಎಕ್ಸ್‌ನ ಸ್ಟಾರ್‌ಶಿಪ್​ ಪರಿಶೀಲಿಸುತ್ತಿರುವ ಯುಎಸ್

ABOUT THE AUTHOR

...view details