ಟೆಹ್ರಾನ್(ಇರಾನ್):ಹದಿನಾರು ವರ್ಷದ ಬಾಲಕ ಎಸಗಿದ ತಪ್ಪಿಗೆ ಆತನಿಗೆ ಘೋರ ಮರಣದಂಡನೆ ವಿಧಿಸಿದ ಇರಾನ್ ದೇಶದ ನಡೆಯನ್ನು ವಿಶ್ವಸಂಸ್ಥೆ ಖಂಡಿಸಿದೆ.
ಇರಾನ್ನಲ್ಲಿ ಬಾಲಾಪರಾಧಿಗೆ ಮರಣದಂಡನೆ ಶಿಕ್ಷೆ: ವಿಶ್ವಸಂಸ್ಥೆ ತೀವ್ರ ಕಳವಳ - ಯುಎನ್ 'ಬಾಲಾಪರಾಧಿ ಮರಣದಂಡನೆ' ಕುರಿತು ಪ್ರತಿಕ್ರಿಯೆ
16 ವರ್ಷದ ಬಾಲಕ ಮಾಡಿದ ಅಪರಾಧಕ್ಕಾಗಿ ಆತನಿಗೆ ಇರಾನ್ ದೇಶ ಮರಣದಂಡನೆ ವಿಧಿಸಿದ್ದನ್ನು ವಿಶ್ವಸಂಸ್ಥೆ ಖಂಡಿಸಿದೆ.
![ಇರಾನ್ನಲ್ಲಿ ಬಾಲಾಪರಾಧಿಗೆ ಮರಣದಂಡನೆ ಶಿಕ್ಷೆ: ವಿಶ್ವಸಂಸ್ಥೆ ತೀವ್ರ ಕಳವಳ UN condemns Iran over 'juvenile execution'](https://etvbharatimages.akamaized.net/etvbharat/prod-images/768-512-10084487-431-10084487-1609506220562.jpg)
UN
2007 ರಲ್ಲಿ ವ್ಯಕ್ತಿಯೊಬ್ಬನನ್ನು ಮಾರಣಾಂತಿಕವಾಗಿ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕನನ್ನು ಬಂಧಿಸಲಾಗಿತ್ತು. ಬಳಿಕ ನಡೆದ ವಿದ್ಯಮಾನದಲ್ಲಿ ಬಲವಂತದ ತಪ್ಪೊಪ್ಪಿಗೆಯ ಮೇಲೆ ಆತನಿಗೆ ಘೋರ ಶಿಕ್ಷೆ ವಿಧಿಸಲಾಗಿದೆ ಎಂದು ಆರೋಪಿಸಲಾಗಿದೆ.
ಈ ರೀತಿ ಶಿಕ್ಷೆ ವಿಧಿಸುವುದು "ಮಕ್ಕಳ ಹಕ್ಕುಗಳ ಮೇಲೆ ಅಸಹ್ಯಕರ ಆಕ್ರಮಣ" ಎಂದು ಜಾಗತಿಕ ಸಂಸ್ಥೆ ಕಿಡಿ ಕಾರಿದೆ.