ಕರ್ನಾಟಕ

karnataka

ETV Bharat / international

ಇಂಗ್ಲೆಂಡ್​ ಆರೋಗ್ಯ ಸಚಿವೆಯನ್ನೂ ಬಿಡದ ಕೊರೊನಾ! - ಇಂಗ್ಲೆಡ್​ ಆರೋಗ್ಯ ಸಚಿವೆಗೆ ಕೊರೊನಾ

ಇಂಗ್ಲೆಡ್​ ಆರೋಗ್ಯ ಸಚಿವೆ ನಾಡಿನ್ ಡೋರಿಸ್ ಮಾರಣಾಂತಿಕ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಇತ್ತೀಚೆಗೆ ಅವರನ್ನು ಪರೀಕ್ಷೇ ಒಳಪಡಿಸಿದಾಗ ಕೊರೊನಾ ಪಾಸಿಟಿವ್ ಬಂದಿರುವುದಾಗಿ ಪ್ರಕಟಣೆ ತಿಳಿಸಿದೆ.

Nadine Dorries
ಇಂಗ್ಲೆಡ್​ ಆರೋಗ್ಯ ಸಚಿವೆ

By

Published : Mar 11, 2020, 1:24 PM IST

ಲಂಡನ್: ಇಂಗ್ಲೆಡ್​ ಆರೋಗ್ಯ ಸಚಿವೆ ನಾಡಿನ್ ಡೋರಿಸ್ ಮಾರಣಾಂತಿಕ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಇತ್ತೀಚೆಗೆ ಅವರನ್ನು ಪರೀಕ್ಷೇ ಒಳಪಡಿಸಿದಾಗ ಕೊರೊನಾ ಪಾಸಿಟಿವ್ ಬಂದಿರುವುದಾಗಿ ಪ್ರಕಟನೆ ತಿಳಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು " ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ. ಇದರಿಂದ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ, ನಾನು ಸ್ವಯಂ ಪ್ರತ್ಯೇಕವಾಗಿದ್ದೇನೆ ಎಂದು ಹೇಳಿದ್ದಾರೆ. ಸಚಿವೆ ಓಡಾಡಿದ ಪ್ರದೇಶಗಳಲ್ಲಿ ಮತ್ತು ಸಂಪರ್ಕಿಸಿದ ವ್ಯಕ್ತಿಗಳ ಬಗ್ಗೆ ಈಗಾಗಲೇ ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಸಚಿವೆ ಡೋರಿಸ್​, ಕೊರೊನಾ ವಿರುದ್ಧ ಕ್ರಮಕೈಗೊಳ್ಳಲು ಮುತುವರ್ಜಿ ವಹಿಸಿದವರಲ್ಲಿ ಮೊದಲಿಗರಾಗಿದ್ದರು. ಸದ್ಯ ಕೊರೊನಾ ಭಾದಿತ ಮೊದಲ ಬ್ರಿಟಿಷ್ ರಾಜಕಾರಣಿ ಕೂಡ ಅವರೇ ಆಗಿದ್ದಾರೆ. ಮಾಹಿತಿ ಪ್ರಕಾರ ಕೊರೊನಾ ಭಾದಿತ ಸಚಿವೆ, ಪ್ರಧಾನಿ ಬೋರಿಸ್​ ಜಾನ್ಸನ್ ಸೇರಿದಂತೆ ಈಗಾಗಲೇ ನೂರಾರು ಜನರೊಂದಿಗೆ ಸಂಪರ್ಕ ಸಾಧಿಸಿದ್ದಾರೆ.

ABOUT THE AUTHOR

...view details