ಸಿಡ್ನಿ: ನೌಕರರ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡದ ಸಂಸ್ಥೆಗಳಲ್ಲಿ ಕೆಲಸ ಮಾಡುವುದರಿಂದ ಖಿನ್ನತೆಯಿಂದ ಬಳಲುವ ಅಪಾಯ ಪ್ರತಿಶತ ಮೂರು ಪಟ್ಟು ಹೆಚ್ಚಾಗಲಿದೆ ಎಂದು ಅಧ್ಯಯನವೊಂದು ಕಂಡು ಕೊಂಡಿದೆ. ಹೆಚ್ಚು ಸಮಯ ಕೆಲಸ ಮಾಡುವಾಗ ಹೃದಯ ಸಂಬಂಧಿ ಕಾಯಿಲೆಯಿಂದ ಸಾಯುವುದು ಅಥವಾ ಪಾರ್ಶ್ವವಾಯು(stroke) ಉಂಟಾಗುವುದು ಅಪಾಯಕಾರಿ ಅಂಶವಾಗಿದೆ. ಕಳಪೆ ನಿರ್ವಹಣಾ ಕ್ರಮಗಳು ಖಿನ್ನತೆಗೆ ಹೆಚ್ಚಿನ ಅಪಾಯವನ್ನುಂಟು ಮಾಡುತ್ತವೆ ಎಂದು ದಕ್ಷಿಣ ಆಸ್ಟ್ರೇಲಿಯಾ ವಿಶ್ವವಿದ್ಯಾಲಯದ ಸಂಶೋಧಕರು ಪತ್ತೆ ಹಚ್ಚಿದ್ದಾರೆ.
ತಮ್ಮ ಉದ್ಯೋಗಿಗಳ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ನೀಡಲು ವಿಫಲವಾದ ಕಂಪನಿಗಳು, ತನ್ನ ಕಾರ್ಮಿಕರಿಗೆ ಇಲ್ಲಸಲ್ಲದ ಬೇಡಿಕೆಗಳನ್ನು ಮುಂದಿಟ್ಟು ಮಾನಸಿಕ ಕಿರುಕುಳ ನೀಡುವುದು ಮತ್ತು ಅವರಿಗೆ ಸ್ವಾಯತ್ತತೆಯನ್ನು ನೀಡದಿರುವ ಕಂಪನಿಗಳು ತಮ್ಮ ಸಿಬ್ಬಂದಿಯನ್ನು ಖಿನ್ನತೆಯ ಹೆಚ್ಚಿನ ಅಪಾಯಕ್ಕೆ ಸಿಲುಕಿಸುತ್ತಿವೆ ಎಂದು ಪುರಾವೆಗಳು ತೋರಿಸುತ್ತವೆ ಎಂದು ಸಂಶೋಧಕ ಜಡೊವ್ ಹೇಳಿದ್ದಾರೆ.
ಉತ್ಸಾಹಿ ಉದ್ಯೋಗಿಗಳು ಮತ್ತು ಬದ್ಧತೆಯುಳ್ಳ ಕಾರ್ಮಿಕರು ಮೌಲ್ಯಯುತವಾಗಿದ್ದರೂ, ಹೆಚ್ಚು ಸಮಯ ಕೆಲಸ ಮಾಡುವುದು ಅವರ ಖಿನ್ನತೆಗೆ ಕಾರಣವಾಗಬಹುದು, ಇದು ವಿಶ್ವಾದ್ಯಂತ ಅಂದಾಜು 300 ಮಿಲಿಯನ್ ಜನರ ಮೇಲೆ ಪರಿಣಾಮ ಬೀರುತ್ತದೆ. ಪುರುಷರು ತಮ್ಮ ಕೆಲಸದ ಮಧ್ಯೆ ಅವರ ಮಾನಸಿಕ ಆರೋಗ್ಯದ ಬಗ್ಗೆ ಕಡಿಮೆ ಗಮನ ಹರಿಸಿದರೆ ಖಿನ್ನತೆಗೆ ಒಳಗಾಗುವ ಸಾಧ್ಯತೆಯಿದೆ.