ಟೋಕಿಯೋ: ಡೆಡ್ಲಿ ವೈರಸ್‌ನಿಂದಾಗಿ 2020ರ ಟೋಕಿಯೋ ಒಲಿಂಪಿಕ್ಸ್ ಮುಂದೂಡಿಕೆಯಾಗಿದ್ದು, ಇದೀಗ ಹೊಸ ದಿನಾಂಕ ಘೋಷಣೆ ಮಾಡಿ ಒಲಿಂಪಿಕ್ ಸಮಿತಿ ಹಾಗೂ ಜಪಾನ್ ಪ್ರಧಾನಿ ಕಚೇರಿ ಖಚಿತಪಡಿಸಿದೆ.
ಟೋಕಿಯೋ ಒಲಿಂಪಿಕ್ಸ್ಗಾಗಿ ಹೊಸ ದಿನಾಂಕ ಘೋಷಣೆ ಟೋಕಿಯೊ ಸಂಘಟನಾ ಸಮಿತಿಯ ಅಧ್ಯಕ್ಷ ಯೋಶಿರೋ ಮೋರಿ ಹಾಗೂ ಸಿಇಒ ತೋಶಿರೊ ಮುಟೊ ಈ ಬಗ್ಗೆ ಮಾಹಿತಿ ನೀಡಿದ್ದು, ಟೋಕಿಯೋ ಒಲಿಂಪಿಕ್ಸ್ ಮುಂದಿನ ವರ್ಷ 2021ರ ಜುಲೈ 23 ಆಗಸ್ಟ್ 8ರವರೆಗೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ. ಇನ್ನು ಪ್ಯಾರಾ ಒಲಿಂಪಿಕ್ಸ್ ಆಗಸ್ಟ್ 24 2021 ರಿಂದ ಸೆಪ್ಟೆಂಬರ್ 5 ವರೆಗೆ ನಡೆಯಲಿದೆ ಎಂದು ಒಲಿಂಪಿಕ್ ಸಮಿತಿ ತಿಳಿಸಿದೆ.
ಟೋಕಿಯೊ ಸಂಘಟನಾ ಸಮಿತಿಯ ಅಧ್ಯಕ್ಷ ಯೋಶಿರೋ ಮೋರಿ ಟೋಕಿಯೋ ಒಲಿಂಪಿಕ್ಸ್ ಇದೇ ವರ್ಷ ಜುಲೈ 24ರಿಂದ ಆಗಸ್ಟ್ 9ರವರೆಗೆ ನಡೆಸಲು ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಇದೀಗ ಮುಂದಿನ ವರ್ಷ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ. ಕಳೆದ ವಾರ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ಜಪಾನ್ ಪ್ರಧಾನಿ ಕೊರೊನಾ ವೈರಸ್ ವಿರುದ್ಧದ ಹೋರಾಟ ನಡೆಸುವ ಉದ್ದೇಶದಿಂದ ಒಲಿಂಪಿಕ್ಸ್ ಮುಂದೂಡಿಕೆ ಮಾಡಿ ಆದೇಶ ಹೊರಡಿಸಲಾಗುತ್ತಿದೆ ಎಂದು ಹೇಳಿದ್ದರು. ಇದಕ್ಕೆ ಎಲ್ಲ ದೇಶಗಳಿಂದ ಸ್ವಾಗತಾರ್ಹ ಎಂದಿದ್ದವು.
ಒಲಿಂಪಿಕ್ಸ್ ಆಯೋಜನೆಗೊಂಡು ಇದೀಗ ಮತ್ತೊಮ್ಮೆ ಮುಂದೂಡಿಕೆಯಾಗಿರುವ ಕಾರಣ ಅತಿ ಹೆಚ್ಚು ಹಣ ವ್ಯಯವಾಗಲಿದ್ದು, ಇದು ದೊಡ್ಡ ಸವಾಲಿನ ಕೆಲಸ ಎಂದು ಜಪಾನ್ ಪ್ರಧಾನಿ ಶಿಂಜೊ ಅಬೆ ಹೇಳಿದ್ದಾರೆ.