ಬ್ಯಾಂಕಾಕ್: ಕೊರೊನಾ ಸೋಂಕು ಕಾರಣದಿಂದಾಗಿ ಥೈಲ್ಯಾಂಡ್ನಲ್ಲಿ ಭಾರೀ ನಿರುದ್ಯೋಗ ಸಮಸ್ಯೆ ಉದ್ಭವಿಸಿದೆ. ಮನುಷ್ಯರಿಗಷ್ಟೇ ಅಲ್ಲ, ಆನೆಗಳಿಗೂ ಈ ಕೊರೊನಾ ಬಿಸಿ ತಟ್ಟಿದೆ. ತಮ್ಮ ಹಸಿವನ್ನು ನೀಗಿಸಿಕೊಳ್ಳಲು ಪ್ರವಾಸಿಗರನ್ನು ಅವಲಂಬಿಸಿರುವ ಆನೆಗಳು ಈಗ ಹಸಿವಿನಿಂದ ತೊಂದರೆಗೊಳಗಾಗಿವೆ. ಈ ಹಿನ್ನೆಲೆ ಅವುಗಳನ್ನು ಮತ್ತೇ ತಮ್ಮ ನೈಸರ್ಗಿಕ ವಾಸಸ್ಥಳಗಳಿಗೆ ಕಳುಹಿಸಲಾಗುತ್ತಿದೆ.
ಆಹಾರವೂ ಇಲ್ಲದೆ, ಕೆಲಸವೂ ಇಲ್ಲದೆ ಮೂಲಸ್ಥಾನ ಸೇರುತ್ತಿವೆ ಆನೆಗಳು 100ಕ್ಕೂ ಹೆಚ್ಚು ಪ್ರಾಣಿಗಳನ್ನು 150 ಕಿ.ಮೀ(95 ಮೈಲಿ) ದೂರದ ತಮ್ಮ ಮೂಲ ಸ್ಥಳಗಳಿಗೆ ಕಳುಹಿಸಲಾಗುತ್ತಿದೆ. ಉತ್ತರ ಪ್ರಾಂತ್ಯದ ಚಿಯಾಂಗ್ ಮಾಯ್‌ನಲ್ಲಿರುವ ಸೇವ್ ಎಲಿಫೆಂಟ್ ಫೌಂಡೇಶನ್ ಆನೆಗಳ ಈ ಸ್ಥಿತಿ ಕಂಡು ಈ ನಿರ್ಧಾರ ಮಾಡಲಾಗಿದೆ. ಪ್ರವಾಸಿ ಉದ್ಯಾನವನಗಳಲ್ಲಿರುವ ಈ ಪ್ರಾಣಿಗಳಿಗೆ ಆಹಾರದ ಕೊರತೆ ಉಂಟಾಗಿದ್ದರಿಂದ ಅವುಗಳನ್ನು ನೈಸರ್ಗಿಕ ಅವಾಸಸ್ಥಾನಕ್ಕೆ ಕಳುಹಿಸಿವುದು ಒಳ್ಳೆಯದು ಎಂಬ ನಿರ್ಧಾರವನ್ನು ಮಾಡಿದೆ.
ಆನೆಗಳಿಗೂ ತಟ್ಟಿದ ಲಾಕ್ಡೌನ್ ಎಫೆಕ್ಟ್ ಆನೆಗಳ ಮಾಲೀಕರು ಆನೆಗಳಿಗೆ ಸರಿಯಾದ ಆಹಾರವನ್ನು ಒದಗಿಸಲು ಆಗದ ಹಿನ್ನೆಲೆ 2,000 ಪಳಗಿದ ಆನೆಗಳು ಹಸಿವಿನಿಂದ ಬಳಲುತ್ತಿವೆ ಎಂದು ಲಂಡನ್ ಮೂಲದ ವರ್ಲ್ಡ್ ಅನಿಮಲ್ ಪ್ರೊಟೆಕ್ಷನ್ ಸಂಸ್ಥೆ ಹೇಳಿದೆ. ಕಳೆದ ತಿಂಗಳಿನಿಂದ 100ಕ್ಕೂ ಹೆಚ್ಚು ಆನೆಗಳು ಚಿಯಾಂಗ್ ಮಾಯ್‌ನ ಹಲವು ಕಡೆಯಿಂದ ತಮ್ಮ ಆವಾಸಸ್ಥಾನಗಳಿಗೆ ತೆರಳಿವೆ. ಈ ಕರೆನ್ ಪ್ರದೇಶ ಸಾಂಪ್ರದಾಯಿಕವಾಗಿ ಆನೆಗಳನ್ನು ಸಾಕುವ ಹಳ್ಳಿಗಳಿಂದ ಕೂಡಿದೆ. ಆನೆಗಳ ಮಾಲೀಕರ ಮನವಿ ಹಿನ್ನೆಲೆ ಆನೆಗಳನ್ನು ತಮ್ಮ ಮೂಲ ಸ್ಥಳಗಳಿಗೆ ಕರೆತರುವ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ಸೇವ್ ಎಲಿಫೆಂಟ್ ಸಂಸ್ಥಾಪಕ ಸಾಂಗ್ಡ್ಯೂನ್ ಚೈಲರ್ಟ್ ಹೇಳಿದ್ದಾರೆ.
ಉದ್ಯಾನವನಗಳಿಂದ 150 ಕಿ.ಮೀ(95-ಮೈಲಿ) ನಡೆಸಿಕೊಂಡೇ ಆನೆಗಳನ್ನು ಮೂಲ ಸ್ಥಳಗಳಿಗೆ ಸೇರಿಸಲಾಗುತ್ತಿದೆ. ಕಾರಣ ಸಣ್ಣ ಉದ್ಯಾನವನಗಳ ಮಾಲೀಕರಿಗೆ ಪ್ರಾಣಿಗಳನ್ನು ಟ್ರಕ್‌ನಲ್ಲಿ ಸಾಗಿಸುವುದು ದೊಡ್ಡ ಸಾಹಸವೇ ಸರಿ. ಇನ್ನು, ಈ ಆನೆಗಳು ಪ್ರತಿ ಗಂಟೆಗೆ 7.25 ಕಿ.ಮೀ ಪ್ರಯಾಣ ಬೆಳೆಸುತ್ತವೆ.