ಕಾಬೂಲ್, ಅಫ್ಘಾನಿಸ್ತಾನ:ತಾಲಿಬಾನ್ ಆಫ್ಘಾನಿಸ್ತಾವನ್ನು ವಶಕ್ಕೆ ಪಡೆದಿರುವುದು ಮಧ್ಯಪ್ರಾಚ್ಯದ ವಿವಿಧ ಭಯೋತ್ಪಾದಕ ಸಂಘಟನೆಗಳಿಗೆ ಮತ್ತಷ್ಟು ಧೈರ್ಯವನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಭಯೋತ್ಪಾದಕ ಸಂಘಟನೆಗಳಲ್ಲಿ ಈ ಬೆಳವಣಿಗೆಯಿಂದ ಹೊಸ ಒಕ್ಕೂಟಗಳು ಸೃಷ್ಟಿಯಾಗಲಿದ್ದು, ವಿವಿಧ ದೇಶಗಳ ಮೇಲೆ ಭಯೋತ್ಪಾದಕ ದಾಳಿಯ ಅಪಾಯವನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂಬ ಅಂತಾರಾಷ್ಟ್ರೀಯ ರಾಜಕಾರಣದ ವಿಶ್ಲೇಷಣೆಯೊಂದು ನಡೆಯುತ್ತಿದೆ.
ಇಸ್ಲಾಮಿಕ್ ಸ್ಟೇಟ್ಸ್, ಅಲ್-ಖೈದಾ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಇತರ ಸಣ್ಣ ಭಯೋತ್ಪಾದಕ ಸಂಘಟನೆಗಳು ಬಲಗೊಳ್ಳುತ್ತವೆ ಎಂದು ಭಯೋತ್ಪಾದನಾ ತಜ್ಞ ಮತ್ತು ಸಂಶೋಧಕ ಗೈಡೊ ಸ್ಟೈನ್‌ಬರ್ಗ್ ಆತಂಕ ವ್ಯಕ್ತಪಡಿಸಿದ್ದಾರೆ.
ತಾಲಿಬಾನಿಗಳು ಈಗ ಅಮೆರಿಕನ್ನು ಸೋಲಿಸಿದ್ದು, ಜಿಹಾದಿಗಳು, ಸಲಫಿಸ್ಟರು ಮತ್ತು ಇತರ ಗುಂಪುಗಳೂ ಕೂಡಾ ಅಮೆರಿಕರನ್ನು ಸೋಲಿಸಬಹುದು ಎಂಬ ಮನೋಭಾವನೆ ಭಯೋತ್ಪಾದನಾ ಸಂಘಟನೆಗಳಲ್ಲಿ ಬರಲಿದೆ ಎಂದು ಅವರು ತಿಳಿಸಿದ್ದಾರೆ.