ಕರ್ನಾಟಕ

karnataka

ETV Bharat / international

ದಿನಕ್ಕೊಂದು ರೂಲ್ಸ್.. ಇನ್ಮೇಲೆ ಅಫ್ಘಾನಿಸ್ತಾನದಲ್ಲಿ ಗಡ್ಡದ ಶೇವ್​, ಟ್ರಿಮ್​ ಮಾಡುವುದು ನಿಷಿದ್ಧ.. - ತಾಲಿಬಾನ್​​ನಲ್ಲಿ ಹೇರ್ ಕಟಿಂಗ್​​

ಈ ಹಿಂದೆ 1996ರಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಸರ್ಕಾರ ಆಡಳಿತಕ್ಕೆ ಬಂದಾಗಲೂ ಈ ರೀತಿಯ ನಿಷೇಧ ಹೇರಲಾಗಿತ್ತು. ಅಫ್ಘಾನಿಸ್ತಾನದಲ್ಲಿ ಈಗಾಗಲೇ ಮಹಿಳೆಯರಿಗೆ ಕ್ರಿಕೆಟ್​ ಸೇರಿದಂತೆ ವಿವಿಧ ಕ್ರೀಡೆ ಆಡಲು ನಿಷೇಧ ಹೇರಲಾಗಿದೆ. ಐಪಿಎಲ್​ ವೀಕ್ಷಣೆ ಮಾಡಲು ಸಹ ನಿರ್ಬಂಧವಿದೆ..

Taliban
Taliban

By

Published : Sep 27, 2021, 7:17 PM IST

ಕಾಬೂಲ್ ​:ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಸರ್ಕಾರ ರಚನೆಯಾದಾಗಿನಿಂದಲೂ ಪ್ರತಿದಿನ ಒಂದಿಲ್ಲೊಂದು ಹೊಸ ರೂಲ್ಸ್​ ಜಾರಿಯಾಗುತ್ತಿವೆ. ಇದೀಗ ಮತ್ತೊಂದು ನಿಯಮ ಜಾರಿಗೆ ಬಂದಿದೆ. ಇದರ ಪ್ರಕಾರ ಗಡ್ಡದ ಶೇವ್​​ ಅಥವಾ ಟ್ರಿಮ್​ ಮಾಡುವುದನ್ನ ಸಂಪೂರ್ಣ ನಿಷೇಧ ಮಾಡಲಾಗಿದೆ.

ತಾಲಿಬಾನ್​ನಲ್ಲಿ ಗಡ್ಡದ ಶೇವ್​​,ಟ್ರಿಮ್​ ನಿಷೇಧ

ಇಸ್ಲಾಮಿಕ್​ ಕಾನೂನಿನ ಪ್ರಕಾರ ಇದು ತಪ್ಪು ಎನ್ನಲಾಗಿದೆ. ಈ ನಿಯಮ ಉಲ್ಲಂಘನೆ ಮಾಡುವವರನ್ನ ಶಿಕ್ಷಿಸಲಾಗುವುದು ಎಂದು ತಾಲಿಬಾನ್​ ಹೇಳಿಕೊಂಡಿದೆ. ನಮಗೂ ಈ ರೀತಿಯ ಬೆದರಿಕೆ ಬಂದಿವೆ ಎಂದು ಕಾಬೂಲ್​ನ ಕೆಲ ಕ್ಷೌರಿಕರು ಈಗಾಗಲೇ ಹೇಳಿಕೊಂಡಿದ್ದಾರೆ.

ಇದನ್ನೂ ಓದಿರಿ:15 ಬೌಂಡರಿ,7 ಸಿಕ್ಸರ್.. 69 ಎಸೆತಗಳಲ್ಲಿ 132 ರನ್​ ಚಚ್ಚಿದ ಉನ್ಮುಕ್ತ್ 'ಚಾಂದ್'​ಸಿ-ತಾರೆ..

ಪ್ರಮುಖವಾಗಿ ಅಫ್ಘಾನಿಸ್ತಾನದ ಹೆಲ್ಮಾಂಡ್​ ಪ್ರದೇಶದಲ್ಲಿ ಈ ನಿಯಮ ಅತಿ ಹೆಚ್ಚು ಜಾರಿಯಲ್ಲಿದೆ. ಈಗಾಗಲೇ ಅಲ್ಲಿನ ಹೇರ್ ಸಲೂನ್​ಗಳಿಗೆ ನೋಟಿಸ್​ ಸಹ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಈ ಹಿಂದೆ 1996ರಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಸರ್ಕಾರ ಆಡಳಿತಕ್ಕೆ ಬಂದಾಗಲೂ ಈ ರೀತಿಯ ನಿಷೇಧ ಹೇರಲಾಗಿತ್ತು. ಅಫ್ಘಾನಿಸ್ತಾನದಲ್ಲಿ ಈಗಾಗಲೇ ಮಹಿಳೆಯರಿಗೆ ಕ್ರಿಕೆಟ್​ ಸೇರಿದಂತೆ ವಿವಿಧ ಕ್ರೀಡೆ ಆಡಲು ನಿಷೇಧ ಹೇರಲಾಗಿದೆ. ಐಪಿಎಲ್​ ವೀಕ್ಷಣೆ ಮಾಡಲು ಸಹ ನಿರ್ಬಂಧವಿದೆ.

ABOUT THE AUTHOR

...view details