ಯಾರೋ ಹೇಳಿದ್ದು, 'ಶಾಂತಿ ಎನ್ನುವುದು ಎರಡು ರಾಷ್ಟ್ರಗಳ ನಡುವಿನ ಮಧ್ಯಂತರ ವಿರಾಮ. ದುರದೃಷ್ಟವಶಾತ್, ಸಿರಿಯಾಗೆ ಈ ಅಲ್ಪಾವಧಿಯ ಶಾಂತಿ ಸಹ ಕಳೆದ ಎಂಟು ವರ್ಷಗಳಿಂದ ಕೈತಪ್ಪಿ ಹೋಗುತ್ತಿದೆ. ಇಲ್ಲಿ ನಡೆಯುತ್ತಿರುವ ಪ್ರಕ್ಷುಬ್ಧತೆ, ರಕ್ತದ ಓಕುಳಿ ಇತ್ಯಾದಿ... ದೊಡ್ಡಣ್ಣ ಅಮೆರಿಕ ಇಲ್ಲಿನ ಮಾನವ ಹಕ್ಕುಗಳನ್ನು ರಕ್ಷಿಸುವ ಜವಾಬ್ದಾರಿ ವಹಿಸಿಕೊಂಡ ನಂತರವೂ ಪರಿಸ್ಥಿತಿ ಯಥಾವತ್ತಾಗಿರುವುದು ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ (ಪ್ಯಾನ್ ಟು ಫೈರ್: ಧಗಿಸುವ ಬೆಂಕಿಗೆ ಪ್ಯಾನ್ ಹಿಡಿದಂತೆ) ಆಗಿದೆ. ಅಮೆರಿಕ ತನ್ನ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿಲ್ಲ ಎಂಬುದರ ಸಂಕೇತವಾಗಿದೆ.
ಜವಾಬ್ದಾರಿಯಿಂದ ನುಣಿಚಿಕೊಂಡ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕ ಪಡೆಗಳನ್ನು ಸಿರಿಯಾದಿಂದ ಹಿಂದಕ್ಕೆ ಕರೆಯಿಸಿಕೊಳ್ಳುವ ನಿರ್ಧಾರ ತೆಗೆದುಕೊಂಡಿದ್ದಾರೆ. ಜೊತೆಗೆ ಕುರ್ದಿಗಳನ್ನು ಅಸಹಾಯಕ ಪರಿಸ್ಥಿತಿಗೆ ದೂಡಿದ್ದಾರೆ. ಅವಕಾಶಕ್ಕಾಗಿ ಕಾಯುತ್ತಿರುವ ಟರ್ಕಿ ಕುರ್ದಿಗಳ ಮೇಲೆ ಭೀಕರ ದಾಳಿ ನಡೆಸಿ ಭಯಾನಕ ಪರಿಸ್ಥಿತಿಯನ್ನು ಸೃಷ್ಟಿಸಿ, ಹೊಸ ರಾಜಕೀಯ ಸಮೀಕರಣಕ್ಕೆ ಕಾರಣವಾಗಿದೆ. ಅಮೆರಿಕದ ಬೆಂಬಲದೊಂದಿಗೆ ಇತ್ತೀಚಿನವರೆಗೂ ಹೋರಾಡಿದ ಕುರ್ದಿಗಳು, ಈಗ ತಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಕರುಣಾಜನಕವಾದ ನಿರ್ಜನ ಪರಿಸ್ಥಿತಿಯಲ್ಲಿ ಕಂಗಾಲಾಗಿ ನಿಂತಿದ್ದಾರೆ. ತಮ್ಮ ಅಸ್ತಿತ್ವವನ್ನು ರಕ್ಷಿಸಲು ಮತ್ತು ಟರ್ಕಿ ದಾಳಿ ಹಿಮ್ಮೆಟ್ಟಿಸಲು ಕುರ್ದಿಗಳು ಸಿರಿಯಾದ ಆಡಳಿತಗಾರ ಅಸಾದ್ ಅವರೊಂದಿಗೆ ಒಪ್ಪಂದ ಮಾಡಿಕೊಂಡಿರುವುದು ಆಘಾತಕಾರಿ.
ಆರ್ಥಿಕ ನಿರ್ಬಂಧಗಳು ವಿಧಿಸುವುದಾಗಿ ಟ್ರಂಪ್, ಅಂಕಾರಾಗೆ (ಟರ್ಕಿ ರಾಜಧಾನಿ) ಬೆದರಿಕೆ ಹಾಕಿದ್ದರೂ ಅಮೆರಿಕದ ಪರದೆ ಹಿಂದಿನ ರಾಜಕೀಯವು 5 ದಿನಗಳ ಕದನ ವಿರಾಮಕ್ಕೆ ದಾರಿ ಮಾಡಿಕೊಟ್ಟಿದೆ. ಜೊತೆಗೆ ಕುರ್ದಿ ಉಗ್ರಗಾಮಿಗಳನ್ನು ಟರ್ಕಿ ತನ್ನ ಗಡಿಯಿಂದ ಹೊರ ದೂಡಬೇಕು. ಟರ್ಕಿಯ ದುರ್ಬಲ ಆರ್ಥಿಕತೆಯ ಮೇಲೆ ಯಾವುದೇ ಆರ್ಥಿಕ ನಿರ್ಬಂಧಗಳನ್ನು ವಿಧಿಸಬಾರದು ಎಂಬ ಷರತ್ತುಗಳೊಂದಿಗೆ ಟರ್ಕಿ- ಅಮೆರಿಕ ನಡುವೆ ಒಪ್ಪಂದ ಏರ್ಪಟ್ಟಿದೆ. ಸಿರಿಯಾದ ಎನ್ಡಿಎಫ್ನ (ನ್ಯಾಷನಲ್ ಡೆಮಾಕ್ರಟಿಕ್ ಫೋರ್ಸ್) ಸೈನ್ಯವನ್ನು ದಕ್ಷಿಣ ಸಿರಿಯಾ ಗಡಿಯಿಂದ 20 ಕಿ.ಮೀ ದೂರದಲ್ಲಿ ನಿಯೋಜನಗೊಳ್ಳುವಂತೆ ಆದೇಶಿಸಲಾಗಿದೆ. ಅಮೆರಿಕ ಈ ಷರತ್ತು ಹೇರಿದಕ್ಕೆ ಟರ್ಕಿ ಸಂತುಷ್ಟವಾಗಿದೆ. 'ಮಾನವೀಯತೆಯ ಮರುಸ್ಥಾಪನೆಗೆ ಇದು ಸರಿಯಾದ ಹೆಜ್ಜೆ' ಎಂದು ಟ್ರಂಪ್ ತಮ್ಮ ಬೆನನ್ನು ತಾವೇ ತಟ್ಟಿಕೊಂಡಿದ್ದರೂ. ವಾಸ್ತವದಲ್ಲಿ ಇದು ಇಸ್ಲಾಮಿಕ್ ಸ್ಟೇಟ್ನ ಪುನಃಸ್ಥಾಪನೆ ರೂಪದ ಗುಪ್ತ ಬೆದರಿಕೆ ಎಂಬ ವಿಶ್ಲೇಷಣೆ ಬಹುವಾಗಿ ಕೇಳಿ ಬರುತ್ತಿದೆ.
ಸಿರಿಯಾ ಏಳು ದಶಕಗಳ ಹಿಂದೆ ಫ್ರಾನ್ಸ್‌ನಿಂದ ಸ್ವಾತಂತ್ರ್ಯ ಪಡೆಯಿತು. ಸಿರಿಯಾವು ಕುರ್ದಿ, ಅರ್ಮೇನಿಯನ್ನರು, ಅಸಿರಿಯಾದವರು, ಕ್ರಿಶ್ಚಿಯನ್ನರು, ಶಿಯಾಗಳು, ಸುನ್ನಿಗಳ ಸಮುದಾಯದಂತಹ ಜನರು ವಾಸಿಸುತ್ತಿದ್ದಾರೆ. ಸಿರಿಯಾದ ಬಹುಸಂಖ್ಯಾತರಾದ ಕುರ್ದಿಗಳಿಗೆ ಪ್ರತ್ಯೇಕ ದೇಶವಿಲ್ಲ. ಇರಾನ್, ಟರ್ಕಿ, ಇರಾಕ್, ಸಿರಿಯಾ, ಅರ್ಮೇನಿಯಾದಲ್ಲಿ ಹೆಚ್ಚಾಗಿ ಹರಡಿರುವ ಸುಮಾರು 17 ಲಕ್ಷ ಜನರು ಉತ್ತರ ಸಿರಿಯಾದಲ್ಲಿ ನೆಲೆ ಕಂಡುಕೊಂಡಿದ್ದಾರೆ. 2011ರ ಅರಬ್ ಉದಯವು ಹಲವು ದೇಶಗಲ್ಲಿ ಜನಾಂದೋಲನಗಳನ್ನು ಬಡಿದೆಬ್ಬಿಸಿತ್ತು. ಇದು ಸಿರಿಯಾವನ್ನು ತೀವ್ರವಾಗಿ ಬೆಚ್ಚಿಬೀಳಿಸಿದಲ್ಲದೇ ಅಂತರ್ಯುದ್ಧ ಮತ್ತು ಹಿಂಸಾಚಾರಕ್ಕೆ ಕಾರಣವಾಯಿತು.