ಟೊರಾಂಟೋ: ಕೊರೊನಾ ವೈರಸ್ನಂತಹ ಸಾಂಕ್ರಾಮಿಕ ರೋಗಗಳು ಹರಡಲು ಬೀದಿ ನಾಯಿಗಳೂ ಪ್ರಮುಖ ಪಾತ್ರವಹಿಸುತ್ತವೆ. ಅದು ನಿರ್ದಿಷ್ಟವಾಗಿ ನಾಯಿ ಕರಳಿನಿಂದ ಹರಡುವ ಸಾಧ್ಯತೆ ಇದೆ ಎಂದು ಅಧ್ಯಯನವೊಂದು ಹೇಳಿದೆ.
ಮೊಲಿಕ್ಯುಲರ್ ಬಯೋಲಜಿ ಮತ್ತು ಎವಲ್ಯೂಷನ್ ಪತ್ರಿಕೆಯಲ್ಲಿ ವಿಜ್ಞಾನಿಗಳು ಅಧ್ಯಯನ ನಡೆಸಿದ ಕುರಿತು ಪ್ರಕಟವಾಗಿದೆ. ಹಾವುಗಳಿಂದ ಪ್ರಾರಂಭವಾಗಿ ಮಧ್ಯಂತರದಲ್ಲಿ ಪ್ಯಾಂಗೊಲಿನ್, ಇತ್ತೀಚೆಗೆ ಬಾವಲಿಗಳಿಂದ ಸಾರ್ಸ್-ಕೋವ್-2 ಎಂಬ ವೈರಸ್ ಮನುಷ್ಯರಿಗೆ ಹರಡಿದೆ ಎಂದು ಅಧ್ಯಯನ ಹೇಳಿದೆ.
ವಿಶ್ವಾದ್ಯಂತ ನಾಯಿಗಳ ದತ್ತಾಂಶ ಪರಿಶೀಲಿಸಿದಾಗ ಅತಿ ಹೆಚ್ಚು ನಾಯಿಗಳು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿವೆ. ಅದರಲ್ಲಿ ಕರುಳಿನ ಕಾಯಿಲೆಗೆ ಹೆಚ್ಚು. ಕೊರೊನಾ, ಸಾರ್ಸ್-ಕೋವ್-2, ಬ್ಯಾಟ್ ಕೋವ್, ರ್ಯಾಟ್ ಟಿಜಿ-13 ವೈರಸ್ಗಳು ನಾಯಿಗೆ ಹರಡಿರುವ ರೋಗಗಳ ಲಕ್ಷಣಗಳಿಗೆ ಹೋಲುತ್ತವೆ ಎಂದು ಹೇಳಲಾಗಿದೆ.
ಏಕೆಂದರೆ ನಾಯಿಗಳು ಬಾವಲಿಗಳನ್ನು ತಿನ್ನುವ ಪರಿಣಾಮ ವೈರಸ್ ಬೇಗ ಹರಡುವ ಕಾರಣವಾಗುತ್ತದೆ. ಇತ್ತ ಬೀದಿನಾಯಿಗಳು ನಮ್ಮೊಟ್ಟಿಗೆ ಓಡಾಡುವಾಗ ವೈರಾಣುಗಳು ನಮಗೆ ಸೇರುತ್ತವೆ. ಅಲ್ಲದೇ, ಕ್ಯಾನಿಡ್ಗಳು ತಮ್ಮ ಗುದ ಮತ್ತು ಜನನಾಂಗವನ್ನು ಬಾಯಿಂದ ನೆಕ್ಕುತ್ತವೆ. ಆಗ ಆ ಜಾಗದಲ್ಲಿರುವ ಬ್ಯಾಕ್ಟೀರಿಯಾಗಳು ದೇಹದ ಒಳಹೊಕ್ಕುತ್ತವೆ.
ಕೆನಡಾದ ಒಟ್ಟಾವಾ ವಿಶ್ವವಿದ್ಯಾಲಯದ ಕ್ಸುಹುವಾ ಕ್ಸಿಯಾ ಅವರ ಪ್ರಕಾರ, ಈ ಪ್ರಾಣಿಗಳಿಂದ ಪ್ರತ್ಯೇಕಿಸಲ್ಪಟ್ಟ ವೈರಸ್ಗಳು ಸಾರ್ಸ್-ಕೋವ್-2ಕ್ಕೂ ತುಂಬಾ ಭಿನ್ನವಾಗಿವೆ. ಸಾರ್ಸ್-ಕೋವ್-2 ಮೂಲ ಮತ್ತು ಆರಂಭಿಕ ಪ್ರಸರಣ ಪತ್ತೆ ಹಚ್ಚಲು ಒಂದು ಕಲ್ಪನೆ ರಚನೆಗೆ ಅವಲೋಕನ ಮಾಡುತ್ತಿದ್ದೇವೆ ಎಂದು ಕ್ಸಿಯಾ ಹೇಳಿದ್ದಾರೆ.
ಬಾವಲಿಯ ಹತ್ತಿರ ಸಂಬಂಧಿಯಾದ ಕ್ಯಾನಿಡ್ ಪ್ರಾಣಿಗಳ ಕರುಳಿಗೆ ವೈರಸ್ ಸೋಂಕು ತಗುಲುತ್ತದೆ. ಇದರ ಪರಿಣಾಮ ಕ್ಯಾನಿಡ್ಗಳಲ್ಲಿ ವೈರಸ್ ವೇಗವಾಗಿ ವಿಕಸನಗೊಳ್ಳುತ್ತದೆ. ಅದು ಮತ್ತಷ್ಟು ವೇಗವಾಗಿ ಮಾನವನಿಗೆ ಜಿಗಿಯುತ್ತದೆ ಎಂದು ತಿಳಿಸಿದ್ದಾರೆ.
ಈಗ ಕೊರೊನಾ ವೈರಸ್ ಪ್ರಾಣಿಗಳಿಂದ ಮನುಷ್ಯರಿಗೆ ಹೇಗೆ ಹರಡುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಮತ್ತು ಪತ್ತೆ ಹಚ್ಚಲು ಜಗತ್ತಿನ ವಿಜ್ಞಾನಿಗಳು ಪರದಾಡುತ್ತಿದ್ದಾರೆ. ಅಲ್ಲದೆ, ಸಂಶೋಧಕರು ಕಾಡು ನಾಯಿಗಳಲ್ಲಿ ಸಾರ್ಸ್ ತರಹದ ವೈರಸ್ ಕಂಡು ಬರುತ್ತದೆಯೇ ಇಲ್ಲವೇ ಎಂಬುದರ ಕುರಿತು ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
ಮಾನವರು ಮತ್ತು ಸಸ್ತನಿಗಳು ಜ್ಯಾಪ್ (ZAP) ಎಂಬ ಪ್ರಮುಖ ಆಂಟಿವೈರಲ್ ಪ್ರೋಟೀನ್ ಅನ್ನು ಹೊಂದಿವೆ. ಈ ಅಂಶ ಯಾರಲ್ಲಿ ಕಡಿಮೆಯಾಗುತ್ತದೋ ಅವರಿಗೆ ವೈರಸ್ ಹರಡುತ್ತದೆ. ಆರ್ಎನ್ಎ ಜೀನೋಮ್ನೊಳಗೆ ಸಿಪಿಜಿ ಡೈನ್ಯೂಕ್ಲಿಯೊಟೈಡ್ಸ್ ಎಂದು ಕರೆಯಲ್ಪಡುವ ಒಂದು ಜೋಡಿ ರಾಸಾಯನಿಕವನ್ನು ಜ್ಯಾಪ್ ಮುಖ್ಯಗುರಿಯಾಗಿಸಿಕೊಂಡಿರುತ್ತದೆ. ವೈರಸ್ ಕೊಲ್ಲಲು ಜ್ಯಾಪ್ ರಕ್ಷಣಾ ಕವಚವಾಗಿ ನಿಲ್ಲುತ್ತದೆ ಎಂದು ಕ್ಸಿಯಾ ಹೇಳಿದರು.