ಬಾಗ್ದಾದ್:ಇರಾಕ್ ರಾಜಧಾನಿ ಬಾಗ್ದಾದ್‌ನಲ್ಲಿ ಇತ್ತೀಚೆಗೆ ನಡೆದ ಅವಳಿ ಭಯೋತ್ಪಾದಕ ದಾಳಿ ಸಂಬಂಧ ಹಲವಾರು ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಇರಾಕ್ ಸಂಸತ್ತಿನ ರಕ್ಷಣಾ ಮತ್ತು ಭದ್ರತಾ ಸಮಿತಿಯ ಸದಸ್ಯ ತಿಳಿಸಿದ್ದಾರೆ.
ಈ ಬಗ್ಗೆ ಐಎನ್‌ಎ ಸುದ್ದಿ ಸಂಸ್ಥೆ ಉಲ್ಲೇಖಿಸಿದ್ದು, "ದಾಳಿಯ ದುಷ್ಕರ್ಮಿಗಳಲ್ಲಿ ಒಬ್ಬರು ವಿದೇಶಿಯರು" ಎಂದು ಬದ್ರ್ ಜಿಯಾಡಿ ಹೇಳಿದರು.
ಕಳೆದ ವಾರ, ಇಬ್ಬರು ಆತ್ಮಾಹುತಿ ದಾಳಿಕೋರರು ಬಾಗ್ದಾದ್‌ನ ಬಾಬ್ ಅಲ್ ಶಾರ್ಕಿ ಪ್ರದೇಶದಲ್ಲಿ ಬಾಂಬ್ ದಾಳಿ ನಡೆಸಿದ್ದರು. ಘಟನೆಯ ನಂತರ, ಇರಾಕಿನ ಕಮಾಂಡರ್-ಇನ್-ಚೀಫ್ ವಕ್ತಾರರು ಮಾತನಾಡಿ, ಘಟನೆಗೆ ಸಂಬಂಧಿಸಿದಂತೆ ದೇಶದ ಭದ್ರತಾ ಪಡೆ ದಾಳಿಕೋರರ ಜಾಡನ್ನು ಪತ್ತೆ ಹಚ್ಚುತ್ತಿದೆ ಎಂದು ಹೇಳಿದ್ದಾರೆ.
ಮಾಧ್ಯಮಗಳು ನೀಡಿದ ಇತ್ತೀಚಿನ ಮಾಹಿತಿಯ ಪ್ರಕಾರ ಘಟನೆಯಲ್ಲಿ 32 ಜನರು ಸಾವನ್ನಪ್ಪಿದ್ದು, 110 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿತ್ತು. ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಗುಂಪು ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ ಎಂದು ವರದಿಯಾಗಿದೆ.
ಇಸ್ಲಾಮಿಕ್ ಸ್ಟೇಟ್ ಗುಂಪಿನ ಚಟುವಟಿಕೆಗಳಿಂದಾಗಿ ಇರಾಕ್ನ ಪರಿಸ್ಥಿತಿ ಹಲವು ವರ್ಷಗಳಿಂದ ಅಸ್ಥಿರವಾಗಿದೆ.