ವಾಷಿಂಗ್ಟನ್:ಸಿರಿಯಾದಲ್ಲಿ ಅಮೆರಿಕ ನಡೆಸಿದ ಡ್ರೋನ್ ವೈಮಾನಿಕ ದಾಳಿಯಲ್ಲಿ ಅಲ್-ಖೈದಾ ಹಿರಿಯ ನಾಯಕ ಹತನಾಗಿದ್ದಾನೆ ಎಂದು ಅಮೆರಿಕದ ರಕ್ಷಣಾ ಅಧಿಕಾರಿ ಉಲ್ಲೇಖಿಸಿ ಫಾಕ್ಸ್ ನ್ಯೂಸ್ ವರದಿ ಮಾಡಿದೆ.
ಡ್ರೋನ್ ದಾಳಿಯಲ್ಲಿ ಅಲ್ಖೈದಾ ಟಾಪ್ ಮೋಸ್ಟ್ ಉಗ್ರ ಹತ: ವರದಿ - ಅಬು ಬಕ್ರ ಅಲ್ ಬಗ್ದಾದಿ
ಸಿರಿಯಾದಲ್ಲಿ ಅಮೆರಿಕ ನಡೆಸಿದ ಡ್ರೋನ್ ದಾಳಿಯಲ್ಲಿ ಅಲ್ಖೈದಾದ ಹಿರಿಯ ನಾಯಕ ಸಲೀಂ ಅಬು ಅಹಮ್ಮದ್ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ. ಅಮೆರಿಕ ಸೇನೆ ಸಿರಿಯಾದ ಇದ್ಲಿಬ್ ಮೇಲೆ ನಡೆಸಿದ ಡ್ರೋನ್ ದಾಳಿ ಸಮಯದಲ್ಲಿ ಆತ ಹತನಾಗಿದ್ದಾರೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ.
![ಡ್ರೋನ್ ದಾಳಿಯಲ್ಲಿ ಅಲ್ಖೈದಾ ಟಾಪ್ ಮೋಸ್ಟ್ ಉಗ್ರ ಹತ: ವರದಿ senior-al-qaeda-leader-killed-in-drone-strike-in-syria-report](https://etvbharatimages.akamaized.net/etvbharat/prod-images/768-512-13225648-854-13225648-1633055420026.jpg)
ಸೆಪ್ಟೆಂಬರ್ 20 ರಂದು, ಸಿರಿಯಾದ ಇದ್ಲಿಬ್ ಬಳಿ ಅಮೆರಿಕ ವಾಯುದಾಳಿಯಲ್ಲಿ ಸಲೀಂ ಅಬು-ಅಹ್ಮದ್ ಮೃತಪಟ್ಟಿದ್ದಾರೆ ಎಂದು ವರದಿ ಹೇಳಿದೆ. ಫಾಕ್ಸ್ ನ್ಯೂಸ್ ಪ್ರಕಾರ ಸಲೀಂ ಅಮೆರಿಕ ಟಾರ್ಗೆಟ್ ಮಾಡುವ ಪೂರ್ವದಲ್ಲಿ ಆತ ಪ್ರಾದೇಶಿಕವಾಗಿ ದಾಳಿ ಮಾಡುವುದು, ಐಸಿಸ್ಗೆ ಧನಸಹಾಯ ಮಾಡುವುದು ಸೇರಿದಂತೆ ಭಯೋತ್ಪಾದಕ ಕೃತ್ಯಗಳಿಗೆ ಬೆಂಬಲ ನೀಡುವ ಕೆಲಸವನ್ನ ನಿರ್ವಹಿಸುತ್ತಿದ್ದ.
ಅಮೆರಿಕ ರಕ್ಷಣಾ ಅಧಿಕಾರಿಗಳು ಈ ಬಗ್ಗೆ ಮಾತನಾಡಿದ್ದು, ಈ ದಾಳಿ ವೇಳೆ ನಾಗರಿಕರಿಗೆ ಯಾವುದೇ ಅಪಾಯ ಆಗಿಲ್ಲ. ಅಬು ಬಕ್ರ ಅಲ್ ಬಗ್ದಾದಿ ಪೂರ್ವ ಸಿರಿಯಾದಿಂದ ಪಲಾಯನ ಮಾಡಿದ ನಂತರ ಪ್ರಾಂತ್ಯವೊಂದರಲ್ಲಿ ಅಡಗಿದ್ದ. ಅವರೊಂದಿಗೆ ಆತನ ಸಹಚರರು ಇದ್ರು. ಅವರನ್ನು ಗುರಿಯಾಗಿಸಿಕೊಂಡು ಸೆಪ್ಟೆಂಬರ್ 13 ರಂದು ಅಮೆರಿಕ ಸೇನೆ ದಾಳಿ ನಡೆಸಿತ್ತು ಎಂಬ ಮಾಹಿತಿ ನೀಡಿದ್ದಾರೆ. ಈ ನಡುವೆ "ಇರಾಕ್ ಮತ್ತು ಸಿರಿಯಾ ಗಡಿಯಲ್ಲಿ ಎರಡು ಕಾರುಗಳು ವೈಮಾನಿಕ ದಾಳಿಗೆ ತುತ್ತಾಗಿವೆ" ಎಂದು ಮೂಲಗಳು ತಿಳಿಸಿವೆ.