ರಿಯಾದ್(ಸೌದಿ ಅರೇಬಿಯಾ): ಕೋವಿಡ್-19 ಕಾರಣದಿಂದಾಗಿ ಕೇವಲ ತನ್ನ ದೇಶದ ಜನರಿಗೆ ಹಜ್ ಯಾತ್ರೆಗೆ ಅವಕಾಶ ನೀಡುವುದಾಗಿ ಸೌದಿ ಅರೇಬಿಯಾ ಸರ್ಕಾರ ಘೋಷಿಸಿದೆ. ಈ ಬಾರಿ ಗರಿಷ್ಠ 60 ಸಾವಿರ ಮಂದಿಗೆ ಮಾತ್ರ ಧಾರ್ಮಿಕ ಯಾತ್ರೆಯನ್ನು ಸೀಮಿತಗೊಳಿಸುವುದಾಗಿ ಸರ್ಕಾರದ ಅಧಿಕೃತ ಪ್ರಕಟಣೆ ತಿಳಿಸಿದೆ.
ಹಜ್ ಯಾತ್ರೆ ಮಾಡಲು ಉದ್ದೇಶಿಸುವ ದೇಶದೊಳಗಿನ ನಾಗರಿಕರು ಮಾತ್ರ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಕೊರೊನಾ ವೈರಸ್ ಮತ್ತು ರೂಪಾಂತರಿ ಕೊರೊನಾ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹಜ್ ಮತ್ತು ಉಮ್ರಾ ಸಚಿವಾಲಯ ಹೇಳಿದೆ.
ಹಜ್ ಯಾತ್ರೆಗೆ ಸೌದಿ ಸರ್ಕಾರದ ನಿಯಮಗಳು:
1.ಈ ವರ್ಷ ಲಸಿಕೆ ಹಾಕಿಸಿಕೊಂಡ ಮತ್ತು ಕೊರೊನಾದಿಂದ ಚೇತರಿಸಿಕೊಂಡ ಮತ್ತು ದೀರ್ಘಕಾಲದ ಕಾಯಿಲೆಗಳನ್ನು ಹೊಂದಿರದ 18ರಿಂದ 65 ವರ್ಷದೊಳಗಿನ ವ್ಯಕ್ತಿಗಳಿಗೆ ಮಾತ್ರ ನೋಂದಣಿಗೆ ಅವಕಾಶ.