ಕರ್ನಾಟಕ

karnataka

By

Published : Mar 13, 2022, 1:33 PM IST

ETV Bharat / international

ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿದ್ದ 81 ಮಂದಿಗೆ ಸೌದಿಯಲ್ಲಿ ಏಕಕಾಲಕ್ಕೆ ಮರಣದಂಡನೆ

ಇಸ್ಲಾಂ ಧರ್ಮಕ್ಕೆ ಸೇರಿದ ಪವಿತ್ರ ಸ್ಥಳಗಳ ಮೇಲೆ ದಾಳಿ ನಡೆಸುವುದನ್ನು ಉಗ್ರಗಾಮಿ ಕೃತ್ಯ ಎಂದೇ ಸೌದಿಯಲ್ಲಿ ಗುರ್ತಿಸಲಾಗಿದೆ. ಇತ್ತೀಚೆಗೆ ಹೆಚ್ಚು ಹೆಚ್ಚು ಸಾಮೂಹಿಕ ಮರಣದಂಡನೆಗಳನ್ನು ಜಾರಿಗೊಳಿಸಲಾಗಿದೆ ಎಂಬುದು ಗಮನಿಸಬೇಕಾದ ವಿಚಾರ..

Saudi Arabia death sentence to largest mass for terrorism
ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿದ್ದ 81 ಮಂದಿಗೆ ಸೌದಿಯಲ್ಲಿ ಏಕಕಾಲಕ್ಕೆ ಮರಣದಂಡನೆ

ರಿಯಾದ್, ಸೌದಿ ಅರೇಬಿಯಾ :ಹತ್ಯೆಗಳು, ಪ್ರಾರ್ಥನೆ ಸ್ಥಳಗಳ ಮೇಲಿನ ದಾಳಿಗಳು ಮುಂತಾದ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ 81 ಅಪರಾಧಿಗಳಿಗೆ ಒಂದೇ ದಿನ ಮರಣದಂಡನೆ ಶಿಕ್ಷೆಯನ್ನು ವಿಧಿಸಲಾಗಿದೆ. ಗಲ್ಫ್ ರಾಷ್ಟ್ರಗಳ ಇತಿಹಾಸದಲ್ಲಿ ಇಷ್ಟು ಮಂದಿಗೆ ಇದೇ ಮೊದಲ ಬಾರಿಗೆ ಗಲ್ಲು ಶಿಕ್ಷೆಯನ್ನು ಜಾರಿಗೊಳಿಸಲಾಗಿದೆ.

ಗಲ್ಲು ಶಿಕ್ಷೆಗೆ ಒಳಗಾದವರಲ್ಲಿ 81 ಮಂದಿಯಲ್ಲಿ 73 ಮಂದಿ ಸೌದಿ ಸೇರಿದವರು. ಯೆಮನ್​​​ಗೆ ಸೇರಿದ ಏಳು ಮಂದಿ ಮತ್ತು ಸಿರಿಯಾಗೆ ಸೇರಿದ ಒಬ್ಬರಿದ್ದಾರೆ. ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಅವರಿಗೆ ಶನಿವಾರ ಶಿಕ್ಷೆ ನೀಡಲಾಗಿದೆ.

ಇದನ್ನೂ ಓದಿ:ಉಕ್ರೇನ್​ ಮೇಯರ್ ಬಂಧಿಸಿ, ಹೊಸ ಮೇಯರ್ ನೇಮಿಸಿದ ರಷ್ಯಾ : ಇಸ್ರೇಲ್ ಸಹಾಯ ಕೋರಿದ ಝೆಲೆನ್ಸ್ಕಿ

1979ರಲ್ಲಿ ಮೆಕ್ಕಾದಲ್ಲಿನ ಪವಿತ್ರ ಮಸೀದಿಯನ್ನು ವಶಕ್ಕೆ ಪಡೆದುಕೊಂಡ ಕಾರಣಕ್ಕೆ 63 ಮಂದಿಗೆ ಗಲ್ಲು ಶಿಕ್ಷೆ ಘೋಷಿಸಿದ್ದು, ಅವರಿಗೆ 1980ರ ಜನವರಿಯಲ್ಲಿ ಸಾಮೂಹಿಕ ಮರಣದಂಡನೆಯನ್ನು ವಿಧಿಸಲಾಗಿತ್ತು.

ಇಸ್ಲಾಂ ಧರ್ಮಕ್ಕೆ ಸೇರಿದ ಪವಿತ್ರ ಸ್ಥಳಗಳ ಮೇಲೆ ದಾಳಿ ನಡೆಸುವುದನ್ನು ಉಗ್ರಗಾಮಿ ಕೃತ್ಯ ಎಂದೇ ಸೌದಿಯಲ್ಲಿ ಗುರ್ತಿಸಲಾಗಿದೆ. ಇತ್ತೀಚೆಗೆ ಹೆಚ್ಚು ಹೆಚ್ಚು ಸಾಮೂಹಿಕ ಮರಣದಂಡನೆಗಳನ್ನು ಜಾರಿಗೊಳಿಸಲಾಗಿದೆ ಎಂಬುದು ಗಮನಿಸಬೇಕಾದ ವಿಚಾರ.

ಸರ್ಕಾರಿ ಸ್ವಾಮ್ಯದ ಸೌದಿ ಪ್ರೆಸ್ ಏಜೆನ್ಸಿ ಈ ಕುರಿತು ವರದಿ ಮಾಡಿದ್ದು, ಮರಣದಂಡನೆಗೆ ಒಳಗಾದವರಲ್ಲಿ ಅಲ್ ಖೈದಾ, ಇಸ್ಲಾಮಿಕ್ ಸ್ಟೇಟ್ ಗುಂಪಿನ ಭಯೋತ್ಪಾದಕರೂ ಸೇರಿದ್ದಾರೆ. ಈಗ 81 ಮಂದಿಯನ್ನು ಎಲ್ಲಿ ನೇಣಿಗೆ ಏರಿಸಲಾಯಿತು ಎಂಬ ವಿವರಗಳನ್ನು ಬಹಿರಂಗಪಡಿಸಿಲ್ಲ.

ABOUT THE AUTHOR

...view details