ಬಾಗ್ದಾದ್ (ಇರಾಕ್) : ರಾಯಭಾರ ಕಚೇರಿ ಮತ್ತು ಸರ್ಕಾರಿ ಕಟ್ಟಡಗಳಿರುವ ಬಾಗ್ದಾದ್‌ನ ಹಸಿರು ವಲಯದ ಮೇಲೆ ರಾಕೆಟ್ ದಾಳಿ ನಡೆದಿದೆ. ಘಟನೆಯಲ್ಲಿ ಮಗುವೊಂದು ಸಾವನ್ನಪ್ಪಿ, ಐವರು ಗಾಯಗೊಂಡಿದ್ದಾರೆ ಎಂದು ಇರಾಕಿ ಭದ್ರತಾ ಸಂಸ್ಥೆಗಳು ತಿಳಿಸಿವೆ.
ಬಾಗ್ದಾದ್‌ನಲ್ಲಿ ರಾಕೆಟ್ ದಾಳಿ : ಮಗು ಸಾವು, ಐವರಿಗೆ ಗಾಯ -
ಬಾಗ್ದಾದ್‌ನ ಹಸಿರು ವಲಯದ ಮೇಲೆ ರಾಕೆಟ್ ದಾಳಿ ನಡೆದಿದೆ. ದಾಳಿಯಿಂದ ಮಗುವೊಂದು ಸಾವನ್ನಪ್ಪಿ, ಐವರು ಗಾಯಗೊಂಡಿದ್ದಾರೆ.

ರಾಕೆಟ್ ದಾಳಿ
ಹಸಿರು ವಲಯ ಮತ್ತು ಅದರ ಸುತ್ತಮುತ್ತ ಏಳು ರಾಕೆಟ್‌ಗಳು ಅಪ್ಪಳಿಸಿವೆ. ಏಳು ರಾಕೆಟ್‌ಗಳಲ್ಲಿ, ನಾಲ್ಕು ಹಸಿರು ವಲಯದಲ್ಲಿ ಬಿದ್ದಿವೆ. ಅದರಲ್ಲಿ ಮೂರು ಹಸಿರು ವಲಯದ ಹೊರಗೆ, ಒಂದು ಗಾಳಿಯಲ್ಲಿ ಸ್ಫೋಟಗೊಂಡಿದೆ. ದಾಳಿಯ ಪರಿಣಾಮ ಮಗು ಸಾವನ್ನಪ್ಪಿದ್ದು, ಇತರ ಐವರು ನಾಗರಿಕರು ಗಾಯಗೊಂಡಿದ್ದಾರೆ ತಿಳಿದುಬಂದಿದೆ.
ಇರಾಕ್ ರಾಜಧಾನಿಯ ಪೂರ್ವದಲ್ಲಿರುವ ಅಮೀನ್-2 ಪ್ರದೇಶದಿಂದ ರಾಕೆಟ್‌ಗಳನ್ನು ಉಡಾಯಿಸಲಾಗಿದೆ ಎಂದು ಭದ್ರತಾ ಸಂಸ್ಥೆಗಳು ತಿಳಿಸಿವೆ.