ಬಾಗ್ದಾದ್: ಇರಾಕ್ ರಾಜಧಾನಿ ಬಾಗ್ದಾದ್ ಬಳಿಯ ಅಮೆರಿಕಾ ಪಡೆ ಹಾಗೂ ಇತರೆ ವಿದೇಶಿ ಸೇನಾ ಪಡೆಯ ತಾಜಿ ಸೇನಾ ಶಿಬಿರದ ಮೇಲೆ ಮಂಗಳವಾರ ರಾಕೆಟ್ ದಾಳಿಯಾಗಿದೆ. ಆದ್ರೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.
ಅಮೆರಿಕಾ ಪಡೆ ನೆಲೆಸಿರುವ ಶಿಬಿರದ ಮೇಲೆ ರಾಕೆಟ್ ದಾಳಿ - ಅಮೆರಿಕಾ-ಇರಾನ್ ಉದ್ವಿಗ್ನ
ಅಮೆರಿಕಾ-ಇರಾನ್ ನಡುವೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿರುವ ಮಧ್ಯೆ ಬಾಗ್ದಾದ್ ಬಳಿಯ ತಾಜಿ ಸೇನಾ ನೆಲೆಯ ಮೇಲೆ ರಾಕೆಟ್ ದಾಳಿಯಾಗಿದೆ. ಇಲ್ಲಿ ಅಮೆರಿಕಾ ಸೇರಿದಂತೆ ವಿದೇಶಿ ಸೇನಾ ಪಡೆ ನೆಲೆಸಿದ್ದವು.
ಅಮೆರಿಕಾ ಪಡೆ ನೆಲೆಸಿರುವ ಶಿಬಿರದ ಮೇಲೆ ರಾಕೆಟ್ ದಾಳಿ
ಕಮಾಂಡರ್ ಖಾಸೀಮ್ ಸುಲೇಮಾನಿ ಹತ್ಯೆಯ ಬಳಿಕ ಅಮೆರಿಕಾ-ಇರಾನ್ ನಡುವೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ಮಂಗಳವಾರ ಇಲ್ಲಿನ ಸೇನಾ ನೆಲೆಯ ಮೇಲೆ ಕತ್ಯುಶ ರಾಕೆಟ್ ದಾಳಿಯಾಗಿದೆ. ಇರಾನ್ ಬೆಂಬಲಿತ ಪಡೆಗಳೇ ಈ ದಾಳಿ ನಡೆಸಿವೆ ಎನ್ನಲಾಗುತ್ತಿದೆ. ಆದ್ರೆ ಯಾರೂ ಕೂಡ ದಾಳಿಯ ಹೊಣೆ ಹೊತ್ತುಕೊಂಡಿಲ್ಲ ಎಂದು ವರದಿಯಾಗಿದೆ.
ಎರಡು ರಾಕೆಟ್ಗಳು ಅಪ್ಪಳಿಸಿವೆ ಎಂದು ಇರಾಕ್ ಸೇನಾ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.