ಸಿಯೋಲ್ (ಉತ್ತರ ಕೊರಿಯಾ): ಸಾಂಕ್ರಾಮಿಕ ರೋಗ ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ನಡುವೆಯೇ ಉತ್ತರ ಕೊರಿಯಾದ ಪೂರ್ವ ಕರಾವಳಿಯಲ್ಲಿ ಎರಡು 'ಗುರುತ್ವಬಲ (ಬ್ಯಾಲಿಸ್ಟಿಕ್) ಕ್ಷಿಪಣಿಗಳನ್ನು ಹಾರಿಸಲಾಯಿತು. ಇದನ್ನು ಜಪಾನ್ ಸೇನಾಪಡೆ ದೃಢಪಡಿಸಿದೆ.
ವಿಶ್ವದ ಎಲ್ಲಾ ರಾಷ್ಟ್ರಗಳು ಕೊರೊನಾ ವೈರಸ್ ವಿರುದ್ಧ ಸಮರ ಸಾರಿವೆ. ಈಗಾಗಲೇ ವೈರಸ್ನಿಂದ 11 ಸಾವಿರಕ್ಕೂ ಹೆಚ್ಚು ಮಂದಿ ಪ್ರಾಣ ತೆತ್ತಿದ್ದಾರೆ. 2.50 ಲಕ್ಷಕ್ಕೂ ಹೆಚ್ಚು ಮಂದಿಯಲ್ಲಿ ಪ್ರಕರಣಗಳು ಕಂಡುಬಂದಿವೆ. ಇಂತಹ ಕಷ್ಟಕರ ಪರಿಸ್ಥಿತಿಯಲ್ಲೂ ಉತ್ತರ ಕೊರಿಯಾ ಸೇನಾಪಡೆ ಕ್ಷಿಪಣಿಗಳ ಉಡಾವಣೆ ಮಾಡಿರುವುದು ಖಂಡನೀಯ ಎಂದು ಕೆಲವು ರಾಷ್ಟ್ರಗಳು ಕೆಂಡಕಾರಿವೆ.
ಈವರೆಗೂ ಉತ್ತರ ಕೊರಿಯಾದಲ್ಲಿ ಯಾವುದೇ ಒಂದು ಕೊರೊನಾ ವೈರಸ್ ಪ್ರಕರಣ ಪತ್ತೆಯಾಗಿಲ್ಲ. ಕ್ಷಿಪಣಿ ಉಡಾವಣೆ ನಿಲ್ಲಿಸುವಂತೆ ಹಲವು ರಾಷ್ಟ್ರಗಳಿಂದ ಉತ್ತರ ಕೊರಿಯಾಗೆ ಒತ್ತಾಯವೂ ಬಂದಿತ್ತು. ಆದರೆ, ಯಾವುದಕ್ಕೂ ಉತ್ತರ ಕೊರಿಯಾ ಕಿವಿಗೊಡಲಿಲ್ಲ.
ಭದ್ರತೆಗಾಗಿ ಸೇನಾಪಡೆ ಅಭಿವೃದ್ಧಿ ಅಗತ್ಯ ಎಂದು ಪಿಯಾಗಾಂಗ್ ತಿಳಿಸಿದೆ. ಉತ್ತರ ಕೊರಿಯಾ ತನ್ನ ಪರಮಾಣು ಮತ್ತು ಕ್ಷಿಪಣಿಗಳ ಮೇಲೆ ವಿವಿಧ ಶಿಕ್ಷೆಯ ನಿರ್ಬಂಧಗಳ ಅಡಿಯಲ್ಲಿದೆ. ಅಲ್ಲದೆ, ಉತ್ತರ ಕೊರಿಯಾ ಸರ್ಕಾರವು ಜನತೆ ಅಭಿವೃದ್ಧಿಗೆ ಒಂದಿಷ್ಟು ಖರ್ಚು ಮಾಡದು. ಅದರ ಬದಲಿಗೆ ಪರಮಾಣು ಶಸ್ತ್ರಾಸ್ತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದೆ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೆ ಗುರಿಯಾಗಿದೆ.