ಕರ್ನಾಟಕ

karnataka

ETV Bharat / international

ಕೋವಿಡ್​​ನಿಂದ ಸಂಪೂರ್ಣವಾಗಿ ಹೊರಬಂದ ಕಿವೀಸ್ ದೇಶ, ಇಂದು '0' ಕೇಸ್​ - ಕೊರೊನಾ ವೈರಸ್​

ಮಹಾಮಾರಿ ಕೊರೊನಾ ವಿರುದ್ಧ ಇಡೀ ವಿಶ್ವವೇ ಹೋರಾಟ ನಡೆಸುತ್ತಿದೆ. ಪ್ರಾಣಕ್ಕೆ ಮಾರಕವಾಗಿರುವ ರೋಗಾಣು ಹರಡುತ್ತಿರುವ ವೇಗಕ್ಕೆ ಜಗತ್ತಿನ ಅನೇಕ ರಾಷ್ಟ್ರಗಳು ಸಂಪೂರ್ಣವಾಗಿ ಬೆಚ್ಚಿ ಬಿದ್ದಿವೆ. ಈ ನಡುವೆ ನ್ಯೂಜಿಲ್ಯಾಂಡ್​ ಕೊರೊನಾದಿಂದ ಸಂಪೂರ್ಣವಾಗಿ ಹೊರಬಂದಿದೆ.

No new cases in N Zealand
No new cases in N Zealand

By

Published : May 4, 2020, 10:40 AM IST

ವೆಲ್ಲಿಂಗ್ಟನ್​:ನ್ಯೂಜಿಲ್ಯಾಂಡ್​ನಲ್ಲಿ ಇಂದು ಯಾವುದೇ ಕೋವಿಡ್​-19 ಕೇಸ್​ ಕಾಣಿಸಿಕೊಂಡಿಲ್ಲ. ಮಾರ್ಚ್​ ತಿಂಗಳಿಂದ ಈ ದೇಶದಲ್ಲಿಯೂ ಕೋವಿಡ್​ ಆರ್ಭಟ ಜೋರಾಗಿತ್ತು. ಆದರೆ ಇದೇ ಮೊದಲ ಬಾರಿಗೆ ಅಲ್ಲಿ ಕೊರೊನಾ ಸೋಂಕಿತ ಪ್ರಕರಣ ಕಾಣಿಸಿಕೊಂಡಿಲ್ಲ.

ಅಲ್ಲಿನ ಆರೋಗ್ಯ ಸಚಿವ ಆಶ್ಲೇ ಬ್ಲೂಮ್‌ಫೀಲ್ಡ್ ಪ್ರತಿಕ್ರಿಯಿಸಿ​, ಇದು ನಿಜಕ್ಕೂ ಸಂಭ್ರಮಪಡುವ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ಯಾವುದೇ ಸೋಂಕು ಹರಡದಂತೆ ನಾವು ಎಚ್ಚರಿಕೆ ವಹಿಸುತ್ತೇವೆ ಎಂದು ವಿಶ್ವಾಸದಿಂದ ನುಡಿದಿದ್ದಾರೆ.

ದೇಶದಲ್ಲಿ ಕೊರೊನಾ ಕಾಣಿಸಿಕೊಳ್ಳುತ್ತಿದ್ದಂತೆ ಗಡಿಭಾಗವನ್ನು​ ಸಂಪೂರ್ಣವಾಗಿ ಬಂದ್​ ಮಾಡಿದ್ದ ನ್ಯೂಜಿಲ್ಯಾಂಡ್​, ಲಾಕ್​ಡೌನ್​ ಹೇರಿತ್ತು. ಕಳೆದ ವಾರ ಕೆಲ ನಿಯಮಗಳೊಂದಿಗೆ ಕರ್ಫ್ಯೂ ಸಡಿಲಿಸಿತ್ತು. ಆದರೂ ಇಲ್ಲಿಯವರೆಗೆ ಶಾಲಾ,ಕಾಲೇಜುಗಳು ಆರಂಭವಾಗಿಲ್ಲ.

ನ್ಯೂಜಿಲ್ಯಾಂಡ್​​ನಲ್ಲಿ 1,500 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, 20 ಜನರು ಸಾವನ್ನಪ್ಪಿದ್ದಾರೆ.

ABOUT THE AUTHOR

...view details