ಕರ್ನಾಟಕ

karnataka

ETV Bharat / international

ಶೇಕ್​ ಹ್ಯಾಂಡ್​ ಬಿಡಿ 'ನಮಸ್ತೆ' ಮಾಡಿ, ಇಸ್ರೇಲಿಗರಿಗೆ ಪ್ರಧಾನಿ ಕರೆ - ಇಸ್ರೇಲ್​ ಪ್ರಧಾನಿ ಬೆಂಜಮಿನ್​ ನೆತಾನ್ಯಹು

ಇಸ್ರೇಲ್​ ಪ್ರಧಾನಿ ಬೆಂಜಮಿನ್​ ನೆತಾನ್ಯಹು, ತಮ್ಮ ದೇಶದ ಜನರಿಗೆ ವಿಶೇಷ ಕಿವಿಮಾತೊಂದನ್ನು ಹೇಳಿದ್ದಾರೆ. ಶುಭಾಶಯ ವಿನಿಮಯಕ್ಕೆ ತಮ್ಮ ದೇಶದ ಶೇಕ್​ ಹ್ಯಾಂಡ್ ಸಂಪ್ರದಾಯನ್ನು ಬಿಟ್ಟು ಭಾರತದ 'ನಮಸ್ತೆ' ಸಂಪ್ರದಾಯವನ್ನು ಅನುಸರಿಸಿ ಎಂದು ಹೇಳಿದ್ದಾರೆ. ಈ ಮೂಲಕ ಮಾರಕ ವೈರಸ್​ ತಡೆಗಟ್ಟುವ ಕ್ರಮವನ್ನು ಅನುಸರಿಸಲು ಇಸ್ರೇಲ್​ ಪ್ರಧಾನಿ ತಿಳಿಸಿದ್ದಾರೆ.

Netanyahu
ಬೆಂಜಮಿನ್​ ನೆತಾನ್ಯಹು

By

Published : Mar 5, 2020, 12:35 PM IST

ಜೆರುಸಲೇಂ( ಇಸ್ರೇಲ್​): ಜಗತ್ತು ಕೊರೊನಾ ವೈರಸ್​ನಿದಾಗಿ ಭೀತಿಗೊಳಗಾಗಿದೆ. ಈ ನಡುವೆ ವೈರಸ್​ ಹರಡದಂತೆ ವಿವಿಧ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಈ ನಡುವೆ ಇಸ್ರೇಲ್​ ಪ್ರಧಾನಿ ಬೆಂಜಮಿನ್​ ನೆತಾನ್ಯಹು, ತಮ್ಮ ದೇಶದ ಜನರಿಗೆ ವಿಶೇಷ ಕಿವಿಮಾತೊಂದನ್ನು ಹೇಳಿದ್ದಾರೆ. ಶುಭಾಶಯ ವಿನಿಮಯಕ್ಕೆ ತಮ್ಮ ದೇಶದ ಶೇಕ್​ ಹ್ಯಾಂಡ್ ಸಂಪ್ರದಾಯನ್ನು ಬಿಟ್ಟು ಭಾರತದ 'ನಮಸ್ತೆ' ಸಂಪ್ರದಾಯವನ್ನು ಅನುಸರಿಸಿ ಎಂದು ಹೇಳಿದ್ದಾರೆ. ಈ ಮೂಲಕ ಮಾರಕ ವೈರಸ್​ ತಡೆಗಟ್ಟುವ ಕ್ರಮವನ್ನು ಅನುಸರಿಸಲು ಇಸ್ರೇಲ್​ ಪ್ರಧಾನಿ ತಿಳಿಸಿದ್ದಾರೆ.

ಶೇಕ್​ ಹ್ಯಾಂಡ್​ ಬಿಡಿ 'ನಮಸ್ತೆ' ಮಾಡಿ

ಇಸ್ರೇಲ್​ ಆರೋಗ್ಯ ಸಚಿವಾಲಯದ ಪ್ರಕಾರ, ದೇಶದಲ್ಲಿ ಪ್ರಸ್ತುತ ಕನಿಷ್ಠ 15 ಶಂಕಿತ ಕೊರೊನಾ ಪ್ರಕರಣಗಳು ಪತ್ತೆಯಾಗಿದೆ. ದೇಶದಲ್ಲಿ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಹಲವಾರು ಕ್ರಮಗಳನ್ನು ಘೋಷಿಸಲಾಗುವುದು ಎಂದು ನೆತಾನ್ಯಹು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ABOUT THE AUTHOR

...view details