ದೋಹುಕ್(ಇರಾಕ್): ಕೊರೊನಾ ಸಾಂಕ್ರಾಮಿಕದಿಂದ ಲಾಕ್ಡೌನ್ ಘೋಷಣೆ ಮಾಡಲಾಗಿದ್ದು, ವ್ಯಕ್ತಿಯೊಬ್ಬ ತಾನು ಸಾಕಿದ್ದ ಸಿಂಹಕ್ಕೆ ಆಹಾರ ಒದಗಿಸಲು ಸಾಧ್ಯವಾಗದೇ ಪ್ರಾಣಿಯನ್ನು ಮೃಗಾಲಯಕ್ಕೆ ನೀಡಿದ್ದಾನೆ.
ಆಹಾರ ಒದಗಿಸಲಾಗದೇ ಸಾಕಿದ ಸಿಂಹ ಮೃಗಾಲಯಕ್ಕೆ ನೀಡಿದ ಮಾಲೀಕ - ಲಾಕ್ಡೌನ್ ಎಫೆಕ್ಟ್ ಲೇಟೆಸ್ಟ್ ನ್ಯೂಸ್
ಲಾಕ್ಡೌನ್ ಕಾರಣ ತಾನು ಸಾಕಿದ್ದ ಸಿಂಹಕ್ಕೆ ಆಹಾರ ಒದಗಿಸಲು ಸಾಧ್ಯವಾಗದೇ ವ್ಯಕ್ತಿಯೊಬ್ಬ ಮೃಗಾಲಯಕ್ಕೆ ನೀಡಿದ್ದಾನೆ.
ಇರಾಕ್ನ ದೋಹುಕ್ನಲ್ಲಿ ಕೊರೊನಾ ಸೋಂಕಿನ ಪರಿಣಾಮ ಲಾಕ್ಡೌನ್ ಘೋಷಣೆ ಮಾಡಲಾಗಿತ್ತು. ಈ ವೇಳೆ, ಸಿಂಹಕ್ಕೆ ಆಹಾರ ಒದಗಿಸುವುದು ಕಷ್ಟವಾಗಿತ್ತು. ಹೀಗಾಗಿ ನನ್ನ ಕುಟುಂಬ ಮತ್ತು ಸಿಂಹದ ಆರೋಗ್ಯದ ದೃಷ್ಟಿಯಿಂದ ಮೃಗಾಲಯಕ್ಕೆ ನೀಡಬೇಕಾಯಿತು ಎಂದು ಸಿಂಹದ ಮಾಲೀಕ ಮೊಹಮ್ಮದ್ ಅಬ್ದುಲ್ ಹಮೀದ್ ಹೇಳಿದ್ದಾರೆ.
11 ತಿಂಗಳು ವಯಸ್ಸಿನ ಸಿಂಹಕ್ಕೆ ಸುಲ್ತಾನ್ ಎಂದು ಹೆಸರಿಟ್ಟಿದ್ದು, ತುಂಬಾ ಚಿಕ್ಕ ಮರಿಯಾಗಿದ್ದಾಗ ಸಿಂಹವನ್ನು ಇರಾಕ್ನಿಂದ ಖರೀದಿಸಿ ತಂದಿದ್ದಾಗಿ ತಿಳಿಸಿದ್ದಾರೆ. ಸದ್ಯ ದೋಹುಕ್ನಲ್ಲಿ ಕೊರೊನಾ ಸೋಂಕು ಕಡಿಮೆಯಾಗಿದ್ದು, ಲಾಕ್ಡೌನ್ ತೆರವು ಮಾಡಲಾಗಿದೆ. ಆದರೂ ಸಿಂಹ ಇನ್ನೂ ಮೃಗಾಲಯದಲ್ಲೇ ಇದೆ. ವಾರಕ್ಕೆ 2 ಬಾರಿ ಮೃಗಾಲಯಕ್ಕೆ ಭೇಟಿ ನೀಡಿ ಸುಲ್ತಾನ್ನನ್ನು ಕಂಡು ಹೋಗುತ್ತೇನೆ ಎಂದು ಅಬ್ದುಲ್ ಹಮೀದ್ ಹೇಳಿದ್ದಾರೆ.