ಸಿಯೋಲ್:ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರು ಜೀವಂತ ಶವವಾಗಿದ್ದಾರೆ ಎಂಬ ಊಹಾಪೋಹಗಳ ನಡುವೆ ಸಾರ್ವಜನಿಕ ಸಭೆವೊಂದರಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಕಿಮ್ ಜಾಂಗ್ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ... ಜೀವಂತ ಶವವಾದ್ರಾ ಸರ್ವಾಧಿಕಾರಿ?
ಕಳೆದ ವಾರ ಹೃದಯ ಶಸ್ತ್ರಚಿಕಿತ್ಸೆಗೊಳಗಾದ ನಂತರ ಎಲ್ಲಿಯೂ ಅವರು ಕಾಣಿಸಿಕೊಳ್ಳದ ಕಾರಣ ಅನೇಕ ಊಹಾಪೋಹ ಉದ್ಭವವಾಗಿದ್ದವು. ಜತೆಗೆ ಅವರು ಜೀವಂತ ಶವವಾಗಿದ್ದಾರೆ ಎಂದು ಅನೇಕ ಮಾಧ್ಯಮಗಳು ವರದಿ ಬಿತ್ತರಿಸಿದ್ದವು. ಆದರೆ ಉತ್ತರ ಕೊರೊಯಾ ಮಾತ್ರ ಈ ಬಗ್ಗೆ ಯಾವುದೇ ರೀತಿಯ ಅಧಿಕೃತ ಮಾಹಿತಿ ಹೊರಹಾಕಿರಲಿಲ್ಲ. ಇನ್ನು 20 ದಿನಗಳ ಬಳಿಕ ಸಾರ್ವಜನಿಕ ಸಭೆಯಲ್ಲಿ ಅವರು ಕಾಣಿಸಿಕೊಂಡಿದ್ದು, ಉತ್ತರ ಕೊರಿಯಾ ಅಧಿಕೃತ ಮಾಹಿತಿ ಹೊರಹಾಕಿದೆ.
ನಿನ್ನೆ ನಡೆದ ಕೆಮಿಕಲ್ ಕಾರ್ಖಾನೆ ಉದ್ಘಾಟನೆಯಲ್ಲಿ ಕಿಮ್ ಜಾಂಗ್ ಭಾಗಿಯಾಗಿದ್ದಾರೆ. ಕಾರ್ಮಿಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವವರು ತಾವು ಆರೋಗ್ಯವಾಗಿರುವುದಾಗಿ ತಿಳಿಸಿದ್ದಾರೆ.