ಟೆಲ್ ಅವಿವ್, ಇಸ್ರೇಲ್:ಅಮೆರಿಕ, ಯುಎಇ ಮತ್ತು ಇಸ್ರೇಲ್‌ನ ವಿದೇಶಾಂಗ ಮಂತ್ರಿಗಳೊಂದಿಗಿನ ತನ್ನ ಮೊದಲ ಸಭೆ ಫಲಪ್ರದವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು ಇಸ್ರೇಲ್‌ನ ಯೈರ್ ಲ್ಯಾಪಿಡ್, ಯುಎಇ ವಿದೇಶಾಂಗ ಸಚಿವ ಅಬ್ದುಲ್ಲಾ ಬಿನ್ ಜಾಯೆದ್ ಮತ್ತು ಅಮೆರಿಕದ ಆಂಟನಿ ಬ್ಲಿಂಕನ್ ಅವರೊಂದಿಗೆ ನಡೆಸಿರುವ ಸಭೆ ಫಲಪ್ರದವಾಗಿದೆ ಎಂದಿದ್ದಾರೆ.
ಜೊತೆಗೆ ಆರ್ಥಿಕ ಬೆಳವಣಿಗೆ ಮತ್ತು ಜಾಗತಿಕ ಸಮಸ್ಯೆಗಳ ಕುರಿತು ಹೆಚ್ಚು ನಿಕಟವಾಗಿ ಕೆಲಸ ಮಾಡುವ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಜೈಶಂಕರ್ ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ.