ಹೈದರಾಬಾದ್ : ಇಸ್ರೇಲ್ ತನ್ನ 9 ಮಿಲಿಯನ್ ದೇಶವಾಸಿಗಳಿಗೆ 2020ರ ಡಿಸೆಂಬರ್ 19ರಂದು ಕೋವಿಡ್ ಲಸಿಕೆ ಹಾಕಲು ಪ್ರಾರಂಭಿಸಿತು. ಅಂದಿನಿಂದ, ಜಾಗತಿಕವಾಗಿ ಅತೀ ಹೆಚ್ಚು ಕೋವಿಡ್ ಲಸಿಕೆ ನೀಡಿದ ದೇಶಗಳ ಪೈಕಿ ಇಸ್ರೇಲ್ ಮುಂಚೂಣಿಯಲ್ಲಿದೆ.
ಲಸಿಕೆ ನೀಡಲು ಸರ್ಕಾರದಿಂದ ಕ್ರಿಯಾ ಯೋಜನೆ :ಸಂಭಾವ್ಯ ಕೋವಿಡ್ ಲಸಿಕೆಗಾಗಿ ಉತ್ಪಾದನಾ ಕಂಪನಿಗಳೊಂದಿಗೆ ಇಸ್ರೇಲ್ ಆರಂಭದಲ್ಲೇ ಮಾತುಕತೆ ನಡೆಸಿತ್ತು. ಜೊತೆಗೆ ನವೆಂಬರ್ 2020ರ ಎರಡನೇ ವಾರದಲ್ಲಿ ಫೈಝರ್ ಕಂಪನಿಯೊಂದಿಗೆ 8 ಮಿಲಿಯನ್ಗೆ ಲಸಿಕೆಗಾಗಿ ಒಪ್ಪಂದ ಮಾಡಿಕೊಂಡಿತ್ತು.
ಇಸ್ರೇಲ್ ಕೋವಿಡ್ ಗೆದ್ದ ಕಥೆ :
- ಲಸಿಕೆ ಹಾಕಲು ಪ್ರಾರಂಭಿಸಿದ ಬಳಿಕ 10 ತಿಂಗಳಲ್ಲಿ ಮೊದಲ ಬಾರಿಗೆ ಇಸ್ರೇಲ್ನಲ್ಲಿ ಕೋವಿಡ್ ಸೋಂಕಿನಿಂದ ಯಾವುದೇ ದೈನಂದಿನ ಸಾವು ವರದಿಯಾಗಿಲ್ಲ.
- ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಮತ್ತು ಇಸ್ರೇಲ್ ಸರ್ಕಾರ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಮಾರ್ಚ್ 2021ರಲ್ಲಿ ಇಸ್ರೇಲ್ನಲ್ಲಿ 10ಕ್ಕಿಂತ ಕಡಿಮೆ ಕೋವಿಡ್ ಸಾವು ಸಂಭವಿಸಿವೆ. ಜನವರಿಯಲ್ಲಿ 70ಕ್ಕೂ ಹೆಚ್ಚು ದೈನಂದಿನ ಸಾವು ಸಂಭವಿಸುತ್ತಿದ್ದ ಗರಿಷ್ಠ ಮಟ್ಟದಿಂದ ಮಾರ್ಚ್ ಹೊತ್ತಿಗೆ ಸಾವಿನ ಪ್ರಮಾಣ ತುಂಬಾ ಕಡಿಮೆಯಾಗಿದೆ.
- ಲಸಿಕೆ ಹಾಕಿದ ಪರಿಣಾಮ ಸದ್ಯ, ಇಸ್ರೇಲ್ನಲ್ಲಿ ದಿನಕ್ಕೆ 120 ಹೊಸ ಕೋವಿಡ್ ಪ್ರಕರಣ ದಾಖಲಾಗುತ್ತಿವೆ. ಜನವರಿ ಮಧ್ಯದಲ್ಲಿ ದಿನಕ್ಕೆ 8,000ಕ್ಕೂ ಹೆಚ್ಚು ಪ್ರಕರಣ ವರದಿಯಾಗುತ್ತಿವೆ.
- ಅಂತಾರಾಷ್ಟ್ರೀಯ ಮಾನದಂಡಗಳಿಗೆ ಹೋಲಿಸಿದರೆ, ಇಸ್ರೇಲ್ನಲ್ಲಿ ಸೋಂಕಿನ ಪ್ರಮಾಣ ಇನ್ನೂ ಕಡಿಮೆಯಾಗಿದೆ. ದೇಶದಲ್ಲಿ ಪ್ರತಿ ಮಿಲಿಯನ್ ಜನಸಂಖ್ಯೆಯಲ್ಲಿ 15 ಹೊಸ ದೈನಂದಿನ ಪ್ರಕರಣ ವರದಿಯಾಗುತ್ತಿವೆ.
- ಇಸ್ರೇಲ್ನಲ್ಲಿ ಕೋವಿಡ್ ಲಸಿಕೆ ಪಡೆದವರ ಪೈಕಿ ಶೇ. 99.1ರಷ್ಟು 90 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರ ಪಾಲಿದೆ.
- ಲಸಿಕೆ ಪಡೆದ 60 ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನವರ ಪ್ರಮಾಣ ಶೇ.90ರಷ್ಟಿದೆ. ಇದು ಜಾಗತಿಕವಾಗಿ ಕೋವಿಡ್ ಸಾವಿನ ಪ್ರಮಾಣವನ್ನು ತಡೆಗಟ್ಟಲು ಸಹಕಾರಿಯಾಗಿದೆ.
ಇಸ್ರೇಲ್ನಲ್ಲಿ ಬಳಕೆಯಾಗುತ್ತಿರುವ ಲಸಿಕೆ ಇದು
- ಫೈಝರ್ ಮತ್ತು ಬಯೋಟೆಕ್ ಅಭಿವೃದ್ಧಿಪಡಿಸಿದ ಲಸಿಕೆಗಳನ್ನು ಮಾತ್ರ ಇಸ್ರೇಲ್ನಲ್ಲಿ ಇದುವರೆಗೆ ಬಳಸುತ್ತಿದೆ.
- ಫೈಝರ್ ಲಸಿಕೆ ಪಡೆದ ಶೇ.95.8ರಷ್ಟು ಜನರಲ್ಲಿ ಕೋವಿಡ್ ವೈರಸ್ನಿಂದ ಉಂಟಾಗುವ ಅನಾರೋಗ್ಯಗಳು ಕಡಿಮೆಯಾಗಿವೆ ಎಂದು ಫೆಬ್ರವರಿ 2021ರಲ್ಲಿ ಇಸ್ರೇಲ್ ಆರೋಗ್ಯ ಸಚಿವಾಲಯ ನಡೆಸಿದ ಅಧ್ಯಯನ ತಿಳಿಸಿದೆ.