ಕರ್ನಾಟಕ

karnataka

ETV Bharat / international

ವರ್ಷದಲ್ಲಿ 3ನೇ ಬಾರಿ ಜನರಲ್​ ಎಲೆಕ್ಷನ್​​:  ಮತ್ತೆ ಹಕ್ಕು ಚಲಾವಣೆಗೆ ಜನತೆ ಸಿದ್ಧ - ಬೆನ್ನಿ ಗಾಂಟ್ಝ್ ನೇತೃತ್ವದ ಬ್ಲೂ ಅಂಡ್​ ವೈಟ್​

ಚುನಾವಣಾ ಪೂರ್ವದ ಸಮೀಕ್ಷೆಗಳೆಲ್ಲ ನೇತನ್ಯಾಹು ಪರವಾಗಿಯೇ ಬಂದಿದೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ನೇತನ್ಯಾಹು ನೇತೃತ್ವದ ಲಿಕುಡ್​ ನ್ಯಾಷನಲ್ ಲಿಬರಲ್ ಮೂವ್​ಮೆಂಟ್​ ಪಕ್ಷ ಮತ್ತು ವಿರೋಧ ಪಕ್ಷ ಬೆನ್ನಿ ಗಾಂಟ್ಝ್ ನೇತೃತ್ವದ ಬ್ಲೂ ಅಂಡ್​ ವೈಟ್​ ಮಧ್ಯೆ ತೀವ್ರ ಪೈಪೋಟಿಗೆ ನಡೆಯುವ ಸಾಧ್ಯತೆಯಿದೆ.

ಇಸ್ರೇಲ್ ಮತದಾನ
ಇಸ್ರೇಲ್ ಮತದಾನ

By

Published : Mar 2, 2020, 1:01 PM IST

ಜೆರುಸಲೇಂ: ದೇಶದ ರಾಜಕೀಯ ಬಿಕ್ಕಟ್ಟು ಕೊನೆಗೊಳಿಸಲು ಮತ್ತು ಪ್ರಧಾನಿ ಬೆಂಜಮಿನ್ ನೇತನ್ಯಾಹು ತಮ್ಮ ಅಧಿಕಾರ ಉಳಿಸಿಕೊಳ್ಳಲು ಮತ್ತೊಂದು ಚುನಾವಣೆಗೆ ಸಿದ್ಧತೆ ನಡೆಸಿದ್ದಾರೆ. ಒಂದು ವರ್ಷದಲ್ಲಿ ಈಗಾಗಲೇ ಎರಡು ಚುನಾವಣೆಗಳು ನಡೆದಿದ್ದು, ಯಾರೊಬ್ಬರಿಗೂ ಬಹುಮತ ಬಾರದ ಹಿನ್ನೆಲೆಯಲ್ಲಿ ಹಾಗೂ ಮೈತ್ರಿಗಳ ನಡುವೆ ಹೊಂದಾಣಿಕೆ ಆಗದೇ ಇರುವುದರಿಂದ ಮೂರನೇ ಬಾರಿಗೆ ಸಾರ್ವಜನಿಕ ಚುನಾವಣೆ ನಡೆಯಲಿದೆ.

ಇಸ್ರೇಲ್ ಇತಿಹಾಸದಲ್ಲೇ ಮೊದಲ ಬಾರಿ ಪ್ರಧಾನಿ ನೇತನ್ಯಾಹು ವಿರುದ್ಧ ಕೇಳಿ ಬಂದಿರುವ ಭ್ರಷ್ಟಾಚಾರ ಆರೋಪದ ವಿಚಾರಣೆ ನಡೆಯುವ ಎರಡು ವಾರ ಮುಂಚಿತವಾಗಿ ಈ ಚುನಾವಣೆ ನಡೆಯಲಿದೆ. ಆದರೂ ಚುನಾವಣಾ ಪೂರ್ವದ ಸಮೀಕ್ಷೆಗಳೆಲ್ಲ ನೇತನ್ಯಾಹು ಪರವಾಗಿಯೇ ಬಂದಿದೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ನೇತನ್ಯಾಹು ನೇತೃತ್ವದ ಲಿಕುಡ್​ ನ್ಯಾಷನಲ್ ಲಿಬರಲ್ ಮೂವ್​ಮೆಂಟ್​ ಪಕ್ಷ ಮತ್ತು ವಿರೋಧ ಪಕ್ಷ ಬೆನ್ನಿ ಗಾಂಟ್ಝ್ ನೇತೃತ್ವದ ಬ್ಲೂ ಅಂಡ್​ ವೈಟ್​ ಮಧ್ಯೆ ತೀವ್ರ ಪೈಪೋಟಿಗೆ ನಡೆಯುವ ಸಾಧ್ಯತೆಯಿದೆ.

ಇಸ್ರೇಲ್ ರಾಜಕೀಯದಲ್ಲಿ ಸಾಮಾನ್ಯವಾಗಿ ಯಾವುದೇ ಪಕ್ಷಗಳು ಬಹುಮತ ಪಡೆಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಸರ್ಕಾರ ರಚಿಸಲು ಸಣ್ಣಪುಟ್ಟ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಅನಿವಾರ್ಯತೆಯಿದೆ. ಕಳೆದ ಏಪ್ರಿಲ್ ಮತ್ತು ಸೆಪ್ಟೆಂಬರ್​ನಲ್ಲಿ ನಡೆದ ಸಂಸದೀಯ ಚುನಾವಣೆಯಲ್ಲಿ ಬಹುಮತವಿಲ್ಲದ ಕಾರಣ ಯಾವುದೇ ಪಕ್ಷಕ್ಕೂ ಸರ್ಕಾರ ರಚಿಸಲು ಸಾಧ್ಯವಾಗಿಲ್ಲ. ಹೀಗಾಗಿ ರಾಜಕೀಯ ಅಸ್ತಿರತೆ ಉಂಟಾಗಿತ್ತು.

2009ರಿಂದ ಬೆಂಜಮಿನ್ ನೇತನ್ಯಾಹು ಇಸ್ರೇಲ್ ಪ್ರಧಾನಿ ಸ್ಥಾನದಲ್ಲಿದ್ದು, ಧೀರ್ಘ ಕಾಲದ ಪ್ರಧಾನಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಈ ಚುನಾವಣೆ ದೇಶದ ರಾಜಕೀಯ ಅಸ್ಥಿರತೆ ಕೊನೆಗೊಳಿಸುವುದರೊಂದಿಗೆ, ನೇತನ್ಯಾಹು ರಾಜಕೀಯ ಭವಿಷ್ಯ ನಿರ್ಧರಿಸಲಿದೆ.

ಈಗಾಗಲೇ ಎರಡೂ ಪ್ರಬಲ ಪಕ್ಷಗಳು ಚುನಾಚಣಾ ಅಖಾಡಕ್ಕೆ ಧುಮುಕಿದ್ದು, ನಾವು ಜಯಕ್ಕೆ ತುಂಬಾ ಸನಿಹದಲ್ಲಿದ್ದೇವೆ. ಎಲ್ಲರೂ "ಮನೆಯಿಂದ ಹೊರ ಬನ್ನಿ ಲಿಕುಡ್​ಗೆ ಮತ ಚಲಾಯಿಸಿ" ಎಂದು ಬೆಂಜಮಿನ್ ನೇತನ್ಯಾಹು ಜನತೆಯಲ್ಲಿ ಮನವಿ ಮಾಡಿದ್ದಾರೆ. ಮತ್ತೊಂದೆಡೆ, ಮಾಜಿ ಸೇನಾಧಿಪತಿ ಮತ್ತು ಬ್ಲೂ ಅಂಡ್​ ವೈಟ್​ ಪಕ್ಷದ ಮುಖ್ಯಸ್ಥ ಬೆನ್ನಿ ಗಾಂಟ್ಝ್​ ದೀರ್ಘ ಕಾಲದ ನೇತನ್ಯಾಹು ಆಡಳಿತವನ್ನು ಕೊನೆಗೊಳಿಸಲು ಜನರ ಸಹಾಯ ಯಾಚಿಸಿದ್ದಾರೆ.

ABOUT THE AUTHOR

...view details