ಕರ್ನಾಟಕ

karnataka

ETV Bharat / international

ಸಿರಿಯಾ ಮೇಲೆ ಇಸ್ರೇಲ್​ ಕ್ಷಿಪಣಿ ದಾಳಿ : 4 ಬಂದೂಕುಧಾರಿ, 3 ನಾಗರಿಕರು ಹತ - ಸಿರಿಯಾ ಮೇಲೆ ಇಸ್ರೇಲ್​ ದಾಳಿ

ಇಸ್ರೇಲಿ ಕ್ಷಿಪಣಿಗಳಿಂದ ಬಂದ ಶ್ರಾಪ್ನಲ್ ಡಮಾಸ್ಕಸ್, ಉಪನಗರಗಳಾದ ಹಾಜಿರಾ ಮತ್ತು ಆಡ್ಲೀಹ್ ಮನೆಗಳಿಗೆ ಅಪ್ಪಳಿಸಿತು. ಈ ದಾಳಿಯಲ್ಲಿ ನಾಲ್ವರು ಬಂದೂಕುಧಾರಿಗಳು ಹಾಗೂ 3 ನಾಗರಿಕರು ಮೃತಪಟ್ಟಿದ್ದಾರೆ ಎಂದು ಸಿರಿಯಾದ ಮಾಧ್ಯಮಗಳು ವರದಿ ಮಾಡಿವೆ.

ಸಿರಿಯಾ ಮೇಲೆ ಇಸ್ರೇಲ್​ ದಾಳಿ
ಸಿರಿಯಾ ಮೇಲೆ ಇಸ್ರೇಲ್​ ದಾಳಿ

By

Published : Apr 27, 2020, 8:18 PM IST

ಬೈರುತ್: ಲೆಬನಾನ್ ಮೇಲೆ ಹಾರುತ್ತಿರುವ ಇಸ್ರೇಲಿ ಯುದ್ಧ ವಿಮಾನಗಳು ಸೋಮವಾರ ಮುಂಜಾನೆ ಡಮಾಸ್ಕಸ್ ಸಮೀಪದ ಪ್ರದೇಶಗಳತ್ತ ಕ್ಷಿಪಣಿಗಳು ಹಾರಿಸಿದ ಪರಿಣಾಮ ಮೂವರು ನಾಗರಿಕರು ಮತ್ತು ನಾಲ್ವರು ಬಂದೂಕುಧಾರಿಗಳು ಸಾವನ್ನಪ್ಪಿದ್ದಾರೆ ಎಂದು ಸಿರಿಯನ್ ಮಿಲಿಟರಿ ಮತ್ತು ರಾಜ್ಯ ಮಾಧ್ಯಮಗಳು ತಿಳಿಸಿವೆ.

ದಾಳಿಯಲ್ಲಿ ಸಿರಿಯನ್ ವಾಯು ರಕ್ಷಣಾ ಪಡೆ ಕೆಲವು ಕ್ಷಿಪಣಿಗಳನ್ನು ಹೊಡೆದುರುಳಿಸಲಾಗಿದೆ ಎಂದು ಮಿಲಿಟರಿ ಅಧಿಕಾರಿಗಳು ಹೇಳಿದ್ದಾರೆ. ಕ್ಷಿಪಣಿಗಳು ಇರಾನ್ ಮತ್ತು ಅದರ ಪ್ರಾದೇಶಿಕ ಪ್ರಾಕ್ಸಿಗಳಿಗೆ ಸೇರಿದ ಸ್ಥಾನಗಳನ್ನು ಹೊಡೆದು ನಾಲ್ಕು ಯೋಧರನ್ನು ಕೊಂದು ಡಮಾಸ್ಕಸ್‌ನ ದಕ್ಷಿಣಕ್ಕೆ ಹಾನಿಯನ್ನುಂಟುಮಾಡಿವೆ ಎಂದು ಸಿರಿಯನ್ ಅಂತರ್ಯುದ್ಧವನ್ನು ಪತ್ತೆಹಚ್ಚುವ ಗುಂಪು ಬ್ರಿಟನ್ ಮೂಲದ ಸಿರಿಯನ್ ಅಬ್ಸರ್​ವೇಟರಿ ಫಾರ್ ಹ್ಯೂಮನ್ ರೈಟ್ಸ್ ಹೇಳಿದೆ.

ಇಸ್ರೇಲಿ ಕ್ಷಿಪಣಿಗಳಿಂದ ಬಂದ ಶ್ರಾಪ್ನಲ್ ಡಮಾಸ್ಕಸ್, ಉಪನಗರಗಳಾದ ಹಾಜಿರಾ ಮತ್ತು ಆಡ್ಲೀಹ್ ಮನೆಗಳಿಗೆ ಅಪ್ಪಳಿಸಿತು. ಅಲ್ಲಿ ಮೂರು ಜನರು ಸಾವನ್ನಪ್ಪಿದರು ಮತ್ತು ನಾಲ್ವರು ಗಾಯಗೊಂಡಿದ್ದಾರೆ ಎಂದು ಸಿರಿಯಾದ ಮಾಧ್ಯಮಗಳು ವರದಿ ಮಾಡಿವೆ.

ಸಿರಿಯನ್ ವರದಿಯ ಬಗ್ಗೆ ಇಸ್ರೇಲ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹಿಂದೆ, ಇಸ್ರೇಲ್ ಹಲವು ವೈಮಾನಿಕ ದಾಳಿಗಳನ್ನು ನಡೆಸಿದೆ ಎಂದು ಒಪ್ಪಿಕೊಂಡಿದೆ.

ABOUT THE AUTHOR

...view details