ಕರ್ನಾಟಕ

karnataka

ETV Bharat / international

2021ರ ನೊಬೆಲ್ ಶಾಂತಿ ಪ್ರಶಸ್ತಿಗೆ ಇಸ್ರೇಲ್ ಪ್ರಧಾನಿ, ಅಬುಧಾಬಿ ಕ್ರೌನ್ ಪ್ರಿನ್ಸ್ ನಾಮನಿರ್ದೇಶನ - 2021ರ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಇಸ್ರೇಲ್ ಪ್ರಧಾನಿ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅಬುಧಾಬಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ 2021ರ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ

2021ರ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ
2021ರ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ

By

Published : Nov 25, 2020, 3:57 PM IST

ಟೆಲ್ ಅವೀವ್: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅಬುಧಾಬಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ತಮ್ಮ ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಕಾರಣ 2021ರ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ ಎಂದು ಇಸ್ರೇಲ್ ಪ್ರಧಾನ ಕಚೇರಿ ಮಂಗಳವಾರ ತಿಳಿಸಿದೆ.

ಉತ್ತರ ಐರ್ಲೆಂಡ್‌ನ ಮೊದಲ ಮಂತ್ರಿಯಾಗಿದ್ದ ಟ್ರಿಂಬಲ್ 1998 ರಲ್ಲಿ ಉತ್ತರ ಐರ್ಲೆಂಡ್‌ನಲ್ಲಿನ ಸಂಘರ್ಷಕ್ಕೆ ಶಾಂತಿಯುತ ಪರಿಹಾರ ಕಂಡುಕೊಳ್ಳುವ ಪ್ರಯತ್ನಕ್ಕಾಗಿ ಶಾಂತಿ ನೊಬೆಲ್ ಪ್ರಶಸ್ತಿ ಗೆದ್ದಿದ್ದಾರೆ ಎಂದು ಸ್ಪುಟ್ನಿಕ್ ಹೇಳಿದೆ.

ನೊಬೆಲ್ ಪ್ರಶಸ್ತಿ ಸಮಿತಿಯು ನೆತನ್ಯಾಹು ಮತ್ತು ಅಲ್ ನಹ್ಯಾನ್ ಅವರ ಉಮೇದುವಾರಿಕೆಗಳನ್ನು ಪರಿಶೀಲಿಸಲಿದೆ. ಸೆಪ್ಟೆಂಬರ್ 15 ರಂದು, ಇಸ್ರೇಲ್, ಬಹ್ರೇನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನಡುವೆ ಶಾಂತಿ ಒಪ್ಪಂದಗಳ ಅಡಿಪಾಯ ಸ್ಥಾಪಿಸಲು ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲಿ ಸಹಿ ಹಾಕುವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಇಸ್ರೇಲ್ ಪ್ರಧಾನಿ ನೆತನ್ಯಾಹು, ಬಹ್ರೇನ್‌ನ ವಿದೇಶಾಂಗ ಸಚಿವ ಅಬ್ದುಲ್ಲಾತಿಫ್ ಬಿನ್ ರಶೀದ್ ಅಲ್ ಜಯಾನಿ ಮತ್ತು ಕ್ರೌನ್ ಪ್ರಿನ್ಸ್ ನಹ್ಯಾನ್ ಅವರು ಅಬ್ರಹಾಂ ಒಪ್ಪಂದಕ್ಕೆ ಸಹಿ ಹಾಕಿದ ನಂತರ, ಟ್ರಂಪ್ ಇತರ ಅರಬ್ ಮತ್ತು ಮುಸ್ಲಿಂ ರಾಷ್ಟ್ರಗಳಿಗೆ ಯುಎಇ ಮುನ್ನಡೆ ಅನುಸರಿಸಲು ಕರೆ ನೀಡಿದರು.

ಇಸ್ರೇಲ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಡುವಿನ ಶಾಂತಿಗಾಗಿ ಮಧ್ಯಸ್ಥಿಕೆ ವಹಿಸಿದ್ದಕ್ಕಾಗಿ ಅಮೆರಿಕದ ಅಧ್ಯಕ್ಷ ಟ್ರಂಪ್ ಅವರನ್ನು 2021 ರ ಶಾಂತಿ ನೊಬೆಲ್ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ ಎಂದು ಸೆಪ್ಟೆಂಬರ್‌ನಲ್ಲಿ ಘೋಷಿಸಲಾಯಿತು.

ABOUT THE AUTHOR

...view details