ಜೆರುಸಲೆಮ್: ಗಾಜಾದಲ್ಲಿ ಇಸ್ರೇಲಿಗರನ್ನು ಹಿಡಿದಿಟ್ಟುಕೊಂಡ ಪ್ಯಾಲೆಸ್ತೇನಿಯನ್ ದಾಳಿಕೋರರ ಅವಶೇಷಗಳನ್ನು ಶೀಘ್ರ ಪತ್ತೆ ಮಾಡುವಂತೆ ಇಸ್ರೇಲ್ ರಕ್ಷಣಾ ಸಚಿವ ಬೆನ್ನಿ ಗ್ಯಾಂಟ್ಜ್ ಸೈನ್ಯಕ್ಕೆ ಸೂಚನೆ ನೀಡಿದ್ದಾರೆ.
ಪ್ಯಾಲೆಸ್ತೇನಿಯನ್ ದಾಳಿಕೋರರ ಅವಶೇಷ ಪತ್ತೆಗಾಗಿ ಸೈನ್ಯಕ್ಕೆ ಇಸ್ರೇಲ್ ರಕ್ಷಣಾ ಸಚಿವರ ಸೂಚನೆ - ಪ್ಯಾಲೇಸ್ತೇನಿಯನ್ನರ ಶವ ಪತ್ತೆ ಹಚ್ಚಲು ಆದೇಶ ನ್ಯೂಸ್
ಗಾಜಾ ದಾಟಿದ ನಂತರ ನಾಪತ್ತೆಯಾದ ಇಬ್ಬರು ಇಸ್ರೇಲಿ ನಾಗರಿಕರಾದ ಅವೆರಾ ಮೆಂಗಿಸ್ಟು ಮತ್ತು ಹಿಶಮ್ ಎ-ಸೀಡ್ ಅವರನ್ನು ಮುತ್ತಿಗೆ ಹಾಕಿ, ಹಿಡಿದು ಪ್ಯಾಲೇಸ್ಟಿನಿಯನ್ನ ಪ್ರದೇಶವೊಂದರಲ್ಲಿ ಇರಿಸಲಾಗಿದೆ ಎನ್ನಲಾಗಿದೆ..
ಇಸ್ರೇಲಿಗಳ ವಿರುದ್ಧದ ದಾಳಿಯ ಸಮಯದಲ್ಲಿ ಕೊಲ್ಲಲ್ಪಟ್ಟ ಪ್ಯಾಲೆಸ್ತೇನಿಯನ್ನರ ಶವಗಳನ್ನು ಪತ್ತೆ ಹಚ್ಚುವ ಪ್ರಯತ್ನಗಳನ್ನು ಚುರುಕುಗೊಳಿಸುವಂತೆ ಮಿಲಿಟರಿಗೆ ಆದೇಶಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇಸ್ರೇಲ್ ಮತ್ತು ಹಮಾಸ್, ಇಸ್ಲಾಮಿಸ್ಟ್ ಪ್ಯಾಲೇಸ್ಟಿನಿಯನ್ ಚಳವಳಿ ಒಪ್ಪಂದದ ಕುರಿತು ಮಾತುಕತೆ ನಡೆಸಿದ ವರದಿಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಗಾಜಾ ದಾಟಿದ ನಂತರ ನಾಪತ್ತೆಯಾದ ಇಬ್ಬರು ಇಸ್ರೇಲಿ ನಾಗರಿಕರಾದ ಅವೆರಾ ಮೆಂಗಿಸ್ಟು ಮತ್ತು ಹಿಶಮ್ ಎ-ಸೀಡ್ ಅವರನ್ನು ಮುತ್ತಿಗೆ ಹಾಕಿ, ಹಿಡಿದು ಪ್ಯಾಲೇಸ್ಟಿನಿಯನ್ನ ಪ್ರದೇಶವೊಂದರಲ್ಲಿ ಇರಿಸಲಾಗಿದೆ ಎನ್ನಲಾಗಿದೆ. ಅಲ್ಲದೆ, 2014ರಲ್ಲಿ ಗಾಜಾ ಪ್ರದೇಶದಲ್ಲಿ ನಡೆದ ಇಸ್ರೇಲ್ ಮಿಲಿಟರಿ ಕಾರ್ಯಾಚರಣೆಯಲ್ಲಿ ಕೊಲ್ಲಲ್ಪಟ್ಟ ಇಬ್ಬರು ಸೈನಿಕರ ಅವಶೇಷಗಳನ್ನು ಹಮಾಸ್ ಹೊಂದಿದೆ ಎಂದು ಹೇಳಲಾಗಿದೆ. ಮಾಹಿತಿಯೊಂದರ ಪ್ರಕಾರ ಇಸ್ರೇಲ್ ಪ್ರಸ್ತುತ ಸುಮಾರು 52 ಪ್ಯಾಲೇಸ್ಟಿನಿಯನ್ ಹಲ್ಲೆಕೋರರ ಶವಗಳನ್ನು ಹೊಂದಿದ್ದು, ಶವಗಳನ್ನು ಅವರ ಕುಟುಂಬಗಳಿಗೆ ಹಿಂದಿರುಗಿಸಲು ನಿರಾಕರಿಸುತ್ತಿದೆ.