ಕರ್ನಾಟಕ

karnataka

ETV Bharat / international

ಇಸ್ರೇಲ್​ ಸೆನೆಟ್​ನಲ್ಲಿ ಹೆಚ್ಚಾಗುತ್ತಿದೆ ಸಲಿಂಗಿ ಸಂಸದರ ಸಂಖ್ಯೆ! - ಇಸ್ರೇಲ್​ನಲ್ಲಿ ಸಲಿಂಗಿ ಸಂಸದರು

120 ಸಂಸದರ ಬಲಾಬಲ ಹೊಂದಿರುವ ಇಸ್ರೇಲ್​ ಸೆನೆಟ್​​ನಲ್ಲಿ 5 ಪಕ್ಷಗಳಿಂದ ಆರು ಸಲಿಂಗಿ ಸಂಸದರು ಸೇವೆ ಸಲ್ಲಿಸಲಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

record number of openly gay MPs
ಇಸ್ರೇಲ್​ ಸೆನೆಟ್​ನಲ್ಲಿ ಹೆಚ್ಚಾಗುತ್ತಿದೆ ಸಂಲಿಂಗಿ ಸಂಸದರ ಸಂಖ್ಯೆ

By

Published : Jun 20, 2020, 8:50 PM IST

ಜೆರುಸಲೆಮ್ (ಇಸ್ರೇಲ್): ಕ್ಯಾಬಿನೆಟ್ ಸದಸ್ಯರಿಗೆ ತಮ್ಮ ಸ್ಥಾನಗಳನ್ನು ಬಿಟ್ಟುಕೊಡಲು ಅವಕಾಶ ನೀಡುವ ಹೊಸ ನಿಯಮಗಳು ಜಾರಿಗೆ ಬಂದ ನಂತರ ಇಸ್ರೇಲ್ ಹೆಚ್ಚು ಸಲಿಂಗಿ ಸಂಸದರನ್ನು ಹೊಂದಲು ಸಿದ್ಧವಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

120 ಸಂಸದರ ಬಲಾಬಲ ಹೊಂದಿರುವ ಇಸ್ರೇಲ್​ ಸೆನೆಟ್​​ನಲ್ಲಿ 5 ಪಕ್ಷಗಳಿಂದ ಆರು ಸಲಿಂಗಿ ಸಂಸದರು ಸೇವೆ ಸಲ್ಲಿಸಲಿದ್ದಾರೆ ಎಂದು ಮಾಧ್ಯಮ ವರದಿ ಹೇಳಿದೆ.

ಯೋರಾಯ್ ಲಹವ್-ಹರ್ಟ್ಜಾನೊ ಅವರು ಮುಂದಿನ ವಾರದ ಪ್ರಮಾಣವಚನ ಸ್ವೀಕರಿಸುವ ಮೂಲಕ ಆರನೇ ಸಲಿಂಗಿ ಸಂಸದರಾಗಲಿದ್ದಾರೆ. ಸಮಾಜದ ಕೆಲವು ಸಂಪ್ರದಾಯವಾದಿ ವರ್ಗಗಳ ವಿರೋಧದ ಹೊರತಾಗಿಯೂ, ದೇಶವು ಅತ್ಯಂತ ಪ್ರಗತಿಪರ ಮನೋಭಾವವನ್ನು ಹೊಂದಿದೆ. ಕಳೆದ ವರ್ಷ, ಇಸ್ರೇಲ್ ತಾನು ಸಲಿಂಗಿ ಎಂದು ಘೋಷಿಸಿಕೊಂಡ ಸಂಸದನನ್ನು ಮಂತ್ರಿಯಾಗಿ ನೇಮಿಸಿತ್ತು.

ಕಳೆದ ವರ್ಷ, ಲಿಕುಡ್ ಪಕ್ಷದ ಅಮೀರ್ ಓಹಾನಾ ಅವರು ನ್ಯಾಯಾಂಗ ಸಚಿವರಾಗಿ ನೇಮಕಗೊಂಡಾಗ ಇಸ್ರೇಲ್ ಕ್ಯಾಬಿನೆಟ್​ನ ಮೊದಲ ಸಲಿಂಗಿ ಸದಸ್ಯರಾಗಿದ್ದರು. ಪ್ರಸ್ತುತ ಅವರು ಸಾರ್ವಜನಿಕ ಭದ್ರತಾ ಸಚಿವರಾಗಿದ್ದಾರೆ ಎಂದು ವರದಿ ತಿಳಿಸಿದೆ.

ABOUT THE AUTHOR

...view details