ಇಸ್ರೇಲ್: ಕೊರೊನಾ ಲಸಿಕೆ ಪಡೆದ ನಂತರವೂ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿವೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ವರದಿ ನೀಡಿದೆ.
ಕೊರೊನಾ ಲಸಿಕೆ ನಾವು ಅಂದುಕೊಂಡಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ. ಮತ್ತು ಸರಿಯಾದ ಸಮಯಕ್ಕೆ ನಿಖರವಾಗಿ ಕೆಲಸ ಮಾಡುತ್ತಿಲ್ಲ ಎಂದು ಅಲ್ಲಿನ ಆರೋಗ್ಯ ಸಚಿವಾಲಯಹೇಳಿದೆ.
ಕಳೆದ ಡಿಸೆಂಬರ್ 19ರಿಂದ ಇಸ್ರೇಲ್ ಕೊರೊನಾ ಲಸಿಕೆ ನೀಡಲು ಆರಂಭಿಸಿತ್ತು. ವಯಸ್ಸಾದವರಿಗೆ ಮೊದಲ ಆದ್ಯತೆ ನೀಡುವ ಗುರಿ ಸರ್ಕಾರದ್ದಾಗಿದೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ 25ರಷ್ಟು ಜನರಿಗೆ ಔಷಧ ನೀಡಲಾಗಿದೆ.
ಫೈಜರ್ ಕೋವಿಡ್ -19 ಲಸಿಕೆಯ ಮೊದಲ ಡೋಸ್ ಶೇಕಡಾ 52 ರಷ್ಟು ಪರಿಣಾಮಕಾರಿಯಾಗಿದೆ ಎಂದು ದಿ ಗಾರ್ಡಿಯನ್ ವರದಿ ತಿಳಿಸಿದೆ. ಇಸ್ರೇಲ್ ಡಿಸೆಂಬರ್ 19 ರಂದು ಲಸಿಕೆ ಹಾಕಲು ಪ್ರಾರಂಭಿಸಿತು, 2020 ರ ಅಂತ್ಯದ ವೇಳೆಗೆ ಅದರ ಜನಸಂಖ್ಯೆಯ ಶೇಕಡಾ 10ಕ್ಕೆ ಲಸಿಕೆ ತಲುಪಿತ್ತು.