ಟೆಲ್ ಅವಿವ್:ಇಸ್ರೇಲ್ನಲ್ಲಿ ಶನಿವಾರ 591 ಹೊಸ ಒಮಿಕ್ರಾನ್ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ದೇಶದಲ್ಲಿ ಒಟ್ಟು ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 1,118 ತಲುಪಿದೆ.
ವಿದೇಶದಿಂದ ಹಿಂದಿರುಗಿದ 723 ಪ್ರಯಾಣಿಕರಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಇನ್ನುಳಿದಂತೆ, ಅಲ್ಲಿನ ಆರೋಗ್ಯ ಇಲಾಖೆಯು 861 ಜನರ ಮಾದರಿ ಸಂಗ್ರಹಿಸಿದ್ದು, ಜೀನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆಗಳ ಫಲಿತಾಂಶಗಳನ್ನು ಸ್ವೀಕರಿಸಬೇಕಿದೆ.