ಟೆಲ್ ಅವೀವ್: ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಮಧ್ಯೆ ಅರಬ್-ಯಹೂದಿ ನಗರದಲ್ಲಿ ತೀವ್ರ ಗಲಭೆಗಳು ಭುಗಿಲೆದ್ದಿದೆ. ಪರಿಣಾಮ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಲಾಡ್ ನಗರದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.
ಸ್ಥಳೀಯ ಮಾಧ್ಯಮಗಳನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಸ್ರೇಲ್, ಲಾಡ್‌ನಲ್ಲಿ ಮೂರು ಧಾರ್ಮಿಕ ಸ್ಥಳಗಳು ಮತ್ತು ಹಲವಾರು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ವರದಿ ಮಾಡಿದೆ.
ಇದನ್ನೂ ಓದಿ:ಇಸ್ರೇಲಿ ಸೇನೆ - ಭಯೋತ್ಪಾದಕರ ನಡುವೆ ವೈಮಾನಿಕ ದಾಳಿ: 12 ಮಂದಿ ನಾಗರಿಕರು ಸಾವು
ನಗರದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸುವಂತೆ ಪ್ರಧಾನಮಂತ್ರಿಯನ್ನು ಕೇಳಿಕೊಂಡಿದ್ದೇನೆ ಮತ್ತು ಅಸ್ತವ್ಯಸ್ತವಾಗಿರುವ ಪರಿಸ್ಥಿತಿಯನ್ನು ನಿಯಂತ್ರಿಸಲು ಮಿಲಿಟರಿಯನ್ನು ನಿಯೋಜಿಸುವಂತೆ ಕರೆ ನೀಡಿದ್ದೇನೆ ಎಂದು ಲಾಡ್ ಮೇಯರ್ ಯೇರ್ ರೆವಿವೊ ಹೇಳಿದ್ದಾರೆ.
ಇದನ್ನೂ ಓದಿ:ಗಾಜಾ ಘರ್ಷಣೆ: ರಾಕೆಟ್ ದಾಳಿಗೆ ಮೂವರು ಇಸ್ರೇಲಿಗರು ಸೇರಿ ಒಟ್ಟು 32 ಮಂದಿ ಸಾವು!
ಮಧ್ಯಪ್ರಾಚ್ಯದ ವಿಶ್ವಸಂಸ್ಥೆಯ ವಿಶೇಷ ಸಂಯೋಜಕ ಟಾರ್ ವೆನ್ನೆಸ್ಲ್ಯಾಂಡ್ ಹಿಂಸಾಚಾರವನ್ನು ತಡೆಯಲು ಎರಡೂ ಕಡೆಯವರನ್ನು ಒತ್ತಾಯಿಸಿದ್ದಾರೆ. ಪರಿಸ್ಥಿತಿ "ಪೂರ್ಣ ಪ್ರಮಾಣದ ಯುದ್ಧ" ದ ಕಡೆಗೆ ಉಲ್ಬಣಗೊಳ್ಳುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.