ಕರ್ನಾಟಕ

karnataka

ETV Bharat / international

ಮುಂದುವರೆದ ಇಸ್ರೇಲ್​-ಗಾಜಾ ಸಂಘರ್ಷ: ಸಾವಿನ ಸಂಖ್ಯೆ 103ಕ್ಕೇರಿಕೆ - ಇಸ್ರೇಲ್

ಪೂರ್ವ ಜೆರುಸಲೇಂನ ಶೇಖ್‌ ಜರ್‍ರಾ ನಗರದಿಂದ ಪ್ಯಾಲೆಸ್ತೀನಿಯನ್ನರ ಕುಟುಂಬಗಳನ್ನು ಕಳುಹಿಸುತ್ತಿರುವ ಇಸ್ರೇಲ್‌ನ ನೀತಿಯು ಪ್ಯಾಲೆಸ್ತೀನಿಯನ್ನರ ಆಕ್ರೋಶಕ್ಕೆ ಕಾರಣವಾಗಿದೆ. ಈಗಿನ ಸಂಘರ್ಷಕ್ಕೆ ಅದೇ ಕಾರಣ ಎಂದೂ ಹೇಳಲಾಗುತ್ತಿದೆ.

Israel-Gaza
ಇಸ್ರೇಲ್​-ಗಾಜಾ ಸಂಘರ್ಷ

By

Published : May 14, 2021, 11:02 AM IST

ಗಾಜಾ: ಇಸ್ರೇಲ್ ಮತ್ತು ಪ್ಯಾಲೆಸ್ತೀನ್‌ ನಡುವಿನ ಉದ್ವಿಗ್ನತೆಯ ಪರಿಣಾಮ, ಸುಮಾರು 103 ಮಂದಿ ಈಗಾಗಲೇ ಸಾವನ್ನಪ್ಪಿದ್ದು, 580ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಇಸ್ರೇಲ್ ದೇಶ ಗಾಜಾದ ಉತ್ತರಕ್ಕೆ ಫಿರಂಗಿಗಳ ಮೂಲಕ ಗುಂಡಿನ ದಾಳಿ ನಡೆಸಲು ಪ್ರಾರಂಭಿಸಿದ್ದು, ಪರಿಣಾಮ ಅನೇಕ ಮನೆಗಳು ನಾಶವಾಗಿವೆ. ದಕ್ಷಿಣ ಲೆಬನಾನ್‌ನಿಂದ ಇಸ್ರೇಲ್ ಕಡೆಗೆ ಕನಿಷ್ಠ ಮೂರು ರಾಕೆಟ್‌ಗಳನ್ನು ಹಾರಿಸಲಾಗಿದೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ.

ಇಸ್ರೇಲ್​-ಗಾಜಾ ಸಂಘರ್ಷ

ಪೂರ್ವ ಜೆರುಸಲೇಂನ ಶೇಖ್‌ ಜರ್‍ರಾ ನಗರದಿಂದ ಪ್ಯಾಲೆಸ್ತೀನಿಯನ್ನರ ಕುಟುಂಬಗಳನ್ನು ಕಳುಹಿಸುತ್ತಿರುವ ಇಸ್ರೇಲ್‌ನ ನೀತಿಯು ಪ್ಯಾಲೆಸ್ತೀನಿಯನ್ನರ ಆಕ್ರೋಶಕ್ಕೆ ಕಾರಣವಾಗಿದೆ. ಈಗಿನ ಸಂಘರ್ಷಕ್ಕೆ ಅದೇ ಕಾರಣ ಎಂದೂ ಹೇಳಲಾಗುತ್ತಿದೆ.

ಎರಡೂ ಕಡೆಯಿಂದ ರಾಕೆಟ್ ದಾಳಿ ಮತ್ತು ವಾಯುದಾಳಿಗಳು ಹೆಚ್ಚಾಗುತ್ತಿದ್ದು, ಈ ಸಂಘರ್ಷವು ಯುದ್ಧವಾಗಿ ಪರಿವರ್ತನೆಗೊಳ್ಳುವ ಸಾಧ್ಯತೆಯಿದೆ ಎಂಬ ಆತಂಕ ವ್ಯಕ್ತವಾಗಿವೆ. ಸಂಘರ್ಷ ಉಲ್ಬಣಗೊಂಡಾಗಿನಿಂದ ಸುಮಾರು 1,750 ರಾಕೆಟ್‌ಗಳನ್ನು ಗಾಜಾ ಪಟ್ಟಿಯಿಂದ ಹಮಾಸ್‌ ತೀವ್ರವಾದಿಗಳು ಇಸ್ರೇಲ್ ಕಡೆಗೆ ಹಾರಿಸಿದ್ದಾರೆ ಎಂದು ಇಸ್ರೇಲ್ ಮಿಲಿಟರಿ ತಿಳಿಸಿದೆ.

"ಇಲ್ಲಿಯವರೆಗೆ, ಗಾಜಾ ಪಟ್ಟಿಯಿಂದ ಸುಮಾರು 1,750 ರಾಕೆಟ್‌ಗಳನ್ನು ಇಸ್ರೇಲ್‌ಗೆ ಉಡಾಯಿಸಲಾಗಿದೆ. ಅದರಲ್ಲಿ ಸುಮಾರು 300 ಉಡಾವಣೆಗಳು ವಿಫಲವಾಗಿದ್ದು, ಗಾಜಾ ಪ್ರದೇಶದಲ್ಲಿ ರಾಕೆಟ್‌ಗಳು ಸ್ಫೋಟಗೊಂಡಿವೆ" ಎಂದು ಮಿಲಿಟರಿ ಹೇಳಿಕೆಯಲ್ಲಿ ತಿಳಿಸಿದೆ.

ಗಾಜಾ ಪಟ್ಟಿಯು ಪ್ಯಾಲೆಸ್ತೀನ್‌ನ ಸಂಘಟನೆಯಾದ ಹಮಾಸ್‌ನ ನಿಯಂತ್ರಣದಲ್ಲಿದೆ. ಈ ಸಂಘಟನೆಯು ಹಲವು ಬಾರಿ ಇಸ್ರೇಲ್‌ ಜತೆಗೆ ಸಂಘರ್ಷ ನಡೆಸಿದೆ. ಅಷ್ಟೇ ಅಲ್ಲದೆ, ಹಮಸ್‌ಗೆ ಶಸ್ತ್ರಾಸ್ತ್ರ ಸರಬರಾಜಾಗುವುದನ್ನು ತಡೆಯಲು, ಗಾಜಾದ ಗಡಿಯುದ್ದಕ್ಕೂ ಇಸ್ರೇಲ್‌ ಹಾಗೂ ಈಜಿಪ್ಟ್‌ ಬಿಗಿ ಭದ್ರತಾ ವ್ಯವಸ್ಥೆಯನ್ನು ಮಾಡಿವೆ. ಇದು ಇಸ್ರೇಲ್‌–ಪ್ಯಾಲೆಸ್ತೀನ್ ನಡುವಿನ ಹೊಸ ಸಂಘರ್ಷಕ್ಕೆ ಕಾರಣ ಎನ್ನಲಾಗುತ್ತಿದೆ.

ABOUT THE AUTHOR

...view details