ಜೆರುಸಲೆಮ್(ಇಸ್ರೇಲ್):ಇಸ್ರೇಲ್ನಲ್ಲಿ ಚುನಾವಣೋತ್ತರ ಸಮೀಕ್ಷೆಗಳು ಸದ್ದು ಮಾಡುತ್ತಿದ್ದು, ಸೆಂಟ್ರಿಸ್ಟ್ ಮತ್ತು ಬಲಪಂಥೀಯ ಪಕ್ಷಗಳ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ.
ಇಸ್ರೇಲ್ ಚುನಾವಣೋತ್ತರ ಸಮೀಕ್ಷೆ.. ಯಾವ ಪಕ್ಷಕ್ಕೂ ಇಲ್ಲ ಬಹುಮತ! - ಇಸ್ರೇಲ್
ಇಸ್ರೇಲ್ನಲ್ಲಿ ಚುನಾವಣೋತ್ತರ ಸಮೀಕ್ಷೆಗಳು ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ದೊರಕುವುದಿಲ್ಲ ಎಂದು ಭವಿಷ್ಯ ನುಡಿದಿವೆ.
ಇಸ್ರೇಲ್ ಚುನಾವಣೋತ್ತರ ಸಮೀಕ್ಷೆ
ಮಾಜಿ ಮಿಲಿಟರಿ ಮುಖ್ಯಸ್ಥ ಬೆನ್ನಿ ಗ್ಯಾಂಟ್ಜ್ ಅವರ ಸೆಂಟ್ರಿಸ್ಟ್ ಬ್ಲೂ ಮತ್ತು ವೈಟ್ ಮೈತ್ರಿ 32 ರಿಂದ 34 ಸ್ಥಾನಗಳಲ್ಲಿ ಜಯಗಳಿಸಿದ್ರೆ, ಬೆಂಜಮಿನ್ ನೆತನ್ಯಾಹು ಅವರ ಬಲಪಂಥೀಯ ಲಿಕುಡ್ ಪಕ್ಷ 31 ರಿಂದ 33 ಸ್ಥಾನಗಳಲ್ಲಿ ಜಯಗಳಿಸಲಿದ್ದಾರೆ ಎಂದು ಸಮೀಕ್ಷೆಗಳು ಹೇಳುತ್ತಿವೆ ಅಂತ ಮಾಧ್ಯಮಗಳು ವರದಿ ಮಾಡಿವೆ.
ಇಸ್ರೇಲ್ ಬೀಟೈನು ಪಕ್ಷದ ನಾಯಕ ಅವಿಗ್ಡೋರ್ ಲೈಬರ್ಮನ್ ಕಿಂಗ್ ಮೇಕರ್ ಆಗಿ ಹೊರಹೊಮ್ಮಲಿದ್ದಾರೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಇಂದು ಪ್ರಾಥಮಿಕ ಫಲಿತಾಂಶಗಳು ಬಂದ ಕೂಡಲೇ ಹೊಸ ಒಕ್ಕೂಟದ ರಚನೆ ಕುರಿತು ಮಾತುಕತೆ ಆರಂಭವಾಗುವ ನಿರೀಕ್ಷೆಯಿದೆ.