ಗಾಜಾ ಪಟ್ಟಿ:ಅಂತಾರಾಷ್ಟ್ರೀಯ ಮಾಧ್ಯಮಗಳು ಹೊಂದಿರುವ ಕಚೇರಿ ಹಾಗೂ ವಸತಿ ಕಟ್ಟಡವನ್ನು ಗುರಿಯಾಗಿಸಿ ಇಸ್ರೇಲಿ ವೈಮಾನಿಕ ಪಡೆ ಕ್ಷಿಪಣಿ ದಾಳಿ ನಡೆಸಿದೆ. ಇದಾದ ಗಂಟೆಯ ನಂತರ ಗಾಜಾ ಉಗ್ರ ಸಂಘಟನೆ ಹಮಾಸ್ ಸೀನಿಯರ್ ಲೀಡರ್ ಮನೆಯ ಮೇಲೆ ಬಾಂಬ್ ದಾಳಿ ನಡೆಸಿತು.
ಅಂತಾರಾಷ್ಟ್ರೀಯ ಮಾಧ್ಯಮ ಕಚೇರಿ, ವಸತಿ ಕಟ್ಟಡದ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ- ವಿಡಿಯೋ - ಇಸ್ರೇಲ್- ಗಾಜಿಯ ಸಂಘರ್ಷ
ಗಾಜಾ ನಗರದ ಎತ್ತರದ ಕಟ್ಟಡದಲ್ಲಿ ಅಸೋಸಿಯೇಟೆಡ್ ಪ್ರೆಸ್ ಮತ್ತು ಇತರ ಮಾಧ್ಯಮಗಳ ಕಚೇರಿಗಳು ಹೊಂದಿದ್ದವು. ಇಸ್ರೇಲಿ ವೈಮಾನಿಕ ಪಡೆ ಕ್ಷಿಪಣಿ ದಾಳಿ ನಡೆಸಿ ಕಟ್ಟಡವನ್ನು ಧ್ವಂಸಗೊಳಿಸಿದೆ. ಇದಾದ ಗಂಟೆಯ ನಂತರ ಉಗ್ರ ಸಂಘಟನೆ ಹಮಾಸ್ ಸೀನಿಯರ್ ಲೀಡರ್ ಮನೆಯ ಮೇಲೆ ಬಾಂಬ್ ದಾಳಿ ನಡೆಸಿತು.
![ಅಂತಾರಾಷ್ಟ್ರೀಯ ಮಾಧ್ಯಮ ಕಚೇರಿ, ವಸತಿ ಕಟ್ಟಡದ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ- ವಿಡಿಯೋ Israel](https://etvbharatimages.akamaized.net/etvbharat/prod-images/768-512-11775486-thumbnail-3x2-isreal.jpg)
Israel
ಗಾಜಾ ನಗರದ ಎತ್ತರದ ಕಟ್ಟಡದಲ್ಲಿ ಅಸೋಸಿಯೇಟೆಡ್ ಪ್ರೆಸ್ ಮತ್ತು ಇತರ ಮಾಧ್ಯಮಗಳ ಕಚೇರಿಗಳು ಹೊಂದಿದ್ದವು.
ಕ್ಷಿಪಣಿ ದಾಳಿಯ ವಿಡಿಯೋ
ಇಸ್ರೇಲಿ ಮಿಲಿಟರಿ ಪಡೆ, ಖಲೀಲ್ ಅಲ್-ಹಯೆಹ್ ಅವರ ಮನೆಯು ಉಗ್ರಗಾಮಿ ಸಂಘಟನೆಯ 'ಭಯೋತ್ಪಾದಕ ಮೂಲಸೌಕರ್ಯ' ಎಂಬುದರ ಭಾಗವಾಗಿ ಕಾರ್ಯನಿರ್ವಹಿಸಿದೆ ಎಂದು ಹೇಳಿದೆ. ಅಲ್-ಹಯೆಹ್ ಗಾಜಾದ ಹಮಾಸ್ ರಾಜಕೀಯ ನಾಯಕತ್ವದ ಹಿರಿಯ ವ್ಯಕ್ತಿಯಾಗಿದ್ದು, ಈ ದಾಳಿಯು ಈಗಿನ ಉದ್ವಿಗ್ನತೆನ್ನು ಮತ್ತಷ್ಟು ಉಲ್ಬಣಗೊಳಿಸಿದೆ.