ಡಮಾಸ್ಕಸ್:ಪ್ಯಾಲೆಸ್ತೀನ್ ಜೊತೆ ಕದನ ವಿರಾಮ ಒಪ್ಪಂದ ಮಾಡಿಕೊಂಡಿರುವ ಇಸ್ರೇಲ್ ಇದೀಗ ರಾತ್ರೋರಾತ್ರಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದೆ. ಈ ಘಟನೆಯಲ್ಲಿ ಸಿರಿಯಾದ ಹನ್ನೊಂದು ಮಂದಿ ಮಿಲಿಟರಿ ಸಿಬ್ಬಂದಿ ಬಲಿಯಾಗಿದ್ದಾರೆಂದು ಅಲ್ಲಿನ ಮಾಧ್ಯಮಗಳು ಹಾಗೂ ವಾರ್ ಮಾನಿಟರ್ ವರದಿ ಮಾಡಿವೆ. ಆದರೆ ಸಾವು-ನೋವಿನ ಬಗ್ಗೆ ಸರಿಯಾದ ಮಾಹಿತಿ ತಿಳಿದು ಬಂದಿಲ್ಲ.
ಸಿರಿಯಾ ಹಾಗೂ ಇಸ್ರೇಲ್ಗೆ ಗಡಿಯಾಗಿರುವ ಲೆಬನಾನ್ನಿಂದ ಮಧ್ಯ ಮತ್ತು ದಕ್ಷಿಣ ಸಿರಿಯಾ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸಿದೆ ಎಂದು ಸಿರಿಯನ್ ರಾಜ್ಯ ಸುದ್ದಿ ಸಂಸ್ಥೆ 'ಸನಾ' ತಿಳಿಸಿದೆ. ಘಟನೆ ಸಂಬಂಧ ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.