ಕರ್ನಾಟಕ

karnataka

ETV Bharat / international

ಹಿಂದೂ ಮಹಾಸಾಗರದಲ್ಲಿ ಶಾಶ್ವತ ನೆಲೆ ಸ್ಥಾಪಿಸಲು ಮುಂದಾಯಿತು ಈ ರಾಷ್ಟ್ರ! - ಇರಾನ್‌ನ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ

ಇರಾನ್‌ನ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಅವರು ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ ಕಾರ್ಪ್ಸ್​ಗೆ ದೇಶದಿಂದ ದೂರದಲ್ಲಿರುವ ಸಮುದ್ರದಲ್ಲಿ ಶಾಶ್ವತ ಉಪಸ್ಥಿತಿ ಸ್ಥಾಪಿಸಲು ತಿಳಿಸಿದ್ದಾರೆ. ಅದರಂತೆ ಮಾರ್ಚ್ 2021ರ ಅಂತ್ಯದ ವೇಳೆಗೆ ಹಿಂದೂ ಮಹಾಸಾಗರದಲ್ಲಿ ಶಾಶ್ವತ ನೆಲೆ ರಚಿಸಲು ಇರಾನ್ ಯೋಜಿಸುತ್ತಿದೆ.

iran
iran

By

Published : Jun 23, 2020, 1:01 PM IST

ಟೆಹರಾನ್​​ (ಇರಾನ್):ಹಿಂದೂ ಮಹಾಸಾಗರದಲ್ಲಿ ಶಾಶ್ವತ ನೆಲೆಯನ್ನು ಸ್ಥಾಪಿಸಲು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಯೋಜಿಸುತ್ತಿದೆ ಎಂದು ಪ್ರೆಸ್ ಟಿವಿ ವರದಿ ಮಾಡಿದೆ.

ಇರಾನ್‌ನ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಅವರು ಐಆರ್‌ಜಿಸಿಗೆ ದೇಶದಿಂದ ದೂರದಲ್ಲಿರುವ ಸಮುದ್ರದಲ್ಲಿ ಶಾಶ್ವತ ಉಪಸ್ಥಿತಿ ಸ್ಥಾಪಿಸುವುದಾಗಿ ತಿಳಿಸಿದ್ದಾರೆ ಎಂದು ಐಆರ್‌ಜಿಸಿ ನೌಕಾಪಡೆಯ ಕಮಾಂಡರ್ ರಿಯರ್ ಅಡ್ಮಿರಲ್ ಅಲಿರೆಜಾ ತಂಗ್ಸಿರಿ ಹೇಳಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ.

ಅದರಂತೆ ಐಆರ್‌ಜಿಸಿ ಮಾರ್ಚ್ 2021ರ ಅಂತ್ಯದ ವೇಳೆಗೆ ಹಿಂದೂ ಮಹಾಸಾಗರದಲ್ಲಿ ಶಾಶ್ವತ ನೆಲೆ ರಚಿಸಲು ಯೋಜಿಸುತ್ತಿದೆ ಎಂದು ತಂಗ್ಸಿರಿ ತಿಳಿಸಿದ್ದಾರೆ.

ABOUT THE AUTHOR

...view details