ಕರ್ನಾಟಕ

karnataka

ETV Bharat / international

ಟೆಹ್ರಾನ್​: 'ಫಾದರ್ ಆಫ್ ಇರಾನಿಯನ್ ಬಾಂಬ್' ಮೊಹ್ಸೆನ್ ಫಕ್ರಿಜಾಡೆ ಹತ್ಯೆ - ಇರಾನ್​ ವಿಜ್ಞಾನಿ ಸಾವು

ಪರಮಾಣು ಇರಾನ್ ವಿಜ್ಞಾನಿ 'ಫಾದರ್ ಆಫ್ ಇರಾನಿಯನ್ ಬಾಂಬ್' ಎಂದೇ ಖ್ಯಾತಿಗಳಿಸಿದ್ದ ಮೊಹ್ಸೆನ್ ಫಕ್ರಿಜಾಡೆ ಅವರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ.

Iran scientist linked to military nuclear program killed
ಮೊಹ್ಸೆನ್ ಫಕ್ರಿಜಾಡೆ ಹತ್ಯೆ

By

Published : Nov 28, 2020, 8:03 AM IST

ಟೆಹ್ರಾನ್​​:ಇರಾನ್​ನ ಪರಮಾಣು ಯೋಜನೆಗಳ ಅತ್ಯಂತ ಉನ್ನತ ವಿಜ್ಞಾನಿ ಮೊಹ್ಸೆನ್ ಫಕ್ರಿಜಾಡೆ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಇರಾನ್​ ರಾಜಧಾನಿ ಟೆಹ್ರನ್ ವಲಯದಲ್ಲಿ ​​ಮೊಹ್ಸೆನ್ ಫಕ್ರಿಜಾಡೆ ಪ್ರಯಾಣ ಮಾಡ್ತಿದ್ದ ಕಾರಿನ ಮೇಲೆ ಗುಂಡಿನ ಮಳೆಗರೆದು ಉಗ್ರರು ಅವರನ್ನು ಕೊಲೆ ಮಾಡಿದ್ದಾರೆ. ಗುಂಡು ಹಾರಿಸಿದ ನಂತರ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೊಹ್ಸೆನ್ ಫಕ್ರಿಜಾಡೆ ಕೊನೆಯುಸಿರೆಳೆದಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಇರಾನ್ ರಕ್ಷಣಾ ಸಚಿವಾಲಯ, ಭಯೋತ್ಪಾದಕ ದಾಳಿಯಲ್ಲಿ ಮೊಹ್ಸೆನ್ ಫಕ್ರಿಜಾಡೆ ಹತ್ಯೆಗೀಡಾಗಿದ್ದಾರೆ ಎಂದು ಸ್ಪಷ್ಟಪಡಿಸಿದೆ. ಇನ್ನು ನ್ಯೂಕ್ಲಿಯರ್​​ ವಿಜ್ಞಾನಿ ಮೊಹ್ಸೆನ್ ಫಕ್ರಿಜಾಡೆ ಅವರ ಹತ್ಯೆಯನ್ನು ಖಂಡಿಸಿರುವ ಇರಾನ್ ವಿದೇಶಾಂಗ ಸಚಿವ ಮೊಹಮ್ಮದ್ ಜವಾದ್ ಜರೀಫ್, ನಮ್ಮ ಪರಮಾಣು ವಿಜ್ಞಾನಿಯ ಕೊಲೆ ಅತ್ಯಂತ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾಳಿ ಹೊಣೆಯನ್ನು ಯಾರೂ ಹೊತ್ತುಕೊಂಡಿಲ್ಲವಾದರೂ, ಮೊಹಮ್ಮದ್ ಜವಾದ್​​​ ಜರೀಫ್ ಇಸ್ರೇಲ್ ಕಡೆಗೆ ಬೆರಳು ತೋರಿಸಿ, ಈ ಹತ್ಯೆಯನ್ನು " ಸ್ಟೇಟ್​​ ಟೆರರ್​​" ಎಂದು ಕರೆದಿದ್ದಾರೆ. “ಭಯೋತ್ಪಾದಕರು ಇಂದು ಪ್ರಸಿದ್ಧ ಇರಾನಿನ ವಿಜ್ಞಾನಿಗಳನ್ನು ಕೊಲೆ ಮಾಡಿದ್ದಾರೆ. ಈ ಹೇಡಿತನ - ಇಸ್ರೇಲಿ ಪಾತ್ರದ ಗಂಭೀರ ಸೂಚನೆಗಳೊಂದಿಗೆ - ದುಷ್ಕರ್ಮಿಗಳ ಹತಾಶ ಯುದ್ಧವನ್ನು ತೋರಿಸುತ್ತದೆ ”ಎಂದು ಜರೀಫ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಈ ಕುರಿತು ಅಮೆರಿಕ ಹಾಲಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಕೂಡ ಟ್ವೀಟ್​ ಮಾಡಿದ್ದು, ಈ ಹತ್ಯೆಯನ್ನು "ಇರಾನ್​ಗೆ ದೊಡ್ಡ ಮಾನಸಿಕ ಮತ್ತು ವೃತ್ತಿಪರ ಹೊಡೆತ" ಎಂದು ಕರೆದಿದ್ದಾರೆ.

ABOUT THE AUTHOR

...view details