ಬಾಗ್ದಾದ್: ಕಳೆದ ವಾರ ನಡೆದ ಜನರಲ್ ಕಸ್ಸೆಮ್ ಸುಲೈಮಾನಿ ಅವರ ಹತ್ಯೆಗೆ ಪ್ರತೀಕಾರ ಎಂಬಂತೆ ಇರಾಕ್ನಲ್ಲಿದ್ದ ಅಮೆರಿಕದ ಸೈನಿಕರನ್ನು ಗುರಿಯಾಗಿಸಿಕೊಂಡು ಇರಾನ್ ಕ್ಷಿಪಣಿ ದಾಳಿ ನಡೆಸಿದೆ.
ಅಮೆರಿಕದ ತುಕಡಿಯು ಇರಾಕ್‌ನ ಅನ್ಬರ್ ಪ್ರಾಂತ್ಯದ ಅಲ್-ಅಸಾದ್ ವಾಯುನೆಲೆಗೆ ಕನಿಷ್ಠ ಒಂಬತ್ತು ಬಾರಿ ಕ್ಷಿಪಣಿ ದಾಳಿ ನಡೆಸಿದೆ ಎಂದು ಅಮೆರಿಕ ಮಿಲಿಟರಿ ಖಚಿತಪಡಿಸಿದೆ.
ಇರಾಕ್ನಲ್ಲಿನ ಅಮೆರಿಕ ಪಡೆಗಳ ಮೇಲಿನ ದಾಳಿಯ ವರದಿಗಳು ನಮಗೆ ತಿಳಿದುಬಂದಿವೆ. ಅಧ್ಯಕ್ಷರಿಗೆ ಈ ಬಗ್ಗೆ ವಿವರಿಸಲಾಗಿದೆ ಮತ್ತು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಅವರು ರಾಷ್ಟ್ರೀಯ ಭದ್ರತಾ ತಂಡದೊಂದಿಗೆ ಸಮಾಲೋಚಿಸುತ್ತಿದ್ದಾರೆ ಎಂದು ಶ್ವೇತಭವನದ ವಕ್ತಾರ ಸ್ಟೆಫನಿ ಗ್ರಿಶಮ್ ಹೇಳಿದ್ದಾರೆ.
ಅಮೆರಿಕ ಸೇನೆಯು ಇರಾನ್ ಮೇಲೆ ಡ್ರೋನ್ ದಾಳಿ ನಡೆಸಿ ಇರಾನಿನ ಉನ್ನತ ಸೇನಾಧಿಕಾರಿ ಜನರಲ್ ಕಸ್ಸೆಮ್ ಸುಲೈಮಾನಿ ಮತ್ತು ಮಿಲಿಟರಿ ಪಡೆಯ ಉಪ ಮುಖ್ಯಸ್ಥ ಅಬು ಮಹ್ದಿ ಅಲ್ ಮುಹಂಡೇಸ್ ಅವರನ್ನು ಕಳೆದ ವಾರ ಹತ್ಯೆಮಾಡಿತ್ತು. ಇದಕ್ಕೆ ಪ್ರತೀಕಾರದ ಮಾತುಗಳನ್ನು ಸಹ ಇರಾನ್ ಆಡಿತ್ತು. ಅದರಂತೆ ಪ್ರತಿ ದಾಳಿಗೆ ಇರಾನ್ ಮುಂದಾಗಿದೆ.