ಕರ್ನಾಟಕ

karnataka

ETV Bharat / international

ಕತಾರ್-ಇರಾನ್​ ಅಧ್ಯಕ್ಷರ ಭೇಟಿ.. ಉದ್ವಿಗ್ನತೆ ತಗ್ಗಿಸಲು ಮಾತುಕತೆ - ಇರಾನ್​ ಅಧ್ಯಕ್ಷರ ಭೇಟಿ

ಮಧ್ಯಪ್ರಾಚ್ಯ ಮತ್ತು ಯುನೈಟೆಡ್​​ ಸ್ಟೇಟ್ಸ್​ ನಡುವೆ ವಿಷಮ ಪರಿಸ್ಥಿತಿ ಉಲ್ಬಣಗೊಳ್ಳುತ್ತಿದೆ. ಈ ಉದ್ವಿಗ್ನತೆಯನ್ನು ಮಾತುಕತೆ ಮೂಲಕ ಮಾತ್ರ ಪರಿಹರಿಸಿಕೊಳ್ಳಬಹುದು ಎಂದು ಕತಾರ್​ನ ಎಮಿರ್​ ಶೇಖ್​ ತಮಿಮ್​ ಬಿನ್​ ಅಹ್ಮದ್ ಅಲ್​ ಥಾನಿ ಭಾನುವಾರ ಇರಾನ್​ ಅಧ್ಯಕ್ಷ ಹಸನ್​ ರೋಹಾನಿ ಭೇಟಿ ಬಳಿಕ ತಿಳಿಸಿದ್ದಾರೆ.

iran-agrees-to-de-escalation-as-only-solution-to-rising-tension-in-middle-east
ಕತಾರ್, ಇರಾನ್​ ಅಧ್ಯಕ್ಷರ ಭೇಟಿ

By

Published : Jan 13, 2020, 12:46 PM IST

Updated : Jan 13, 2020, 1:27 PM IST

ತೆಹ್ರಾನ್​:ಮಧ್ಯಪ್ರಾಚ್ಯ ಮತ್ತು ಯುನೈಟೆಡ್​​ ಸ್ಟೇಟ್ಸ್​ ನಡುವೆ ವಿಷಮ ಪರಿಸ್ಥಿತಿ ಉಲ್ಬಣಗೊಳ್ಳುತ್ತಿದೆ. ಈ ಉದ್ವಿಗ್ನತೆಯನ್ನು ಮಾತುಕತೆ ಮೂಲಕ ಮಾತ್ರ ಪರಿಹರಿಸಿಕೊಳ್ಳಬಹುದು ಎಂದು ಕತಾರ್​ನ ಎಮಿರ್​ ಶೇಖ್​ ತಮಿಮ್​ ಬಿನ್​ ಅಹ್ಮದ್ ಅಲ್​ ಥಾನಿ ಭಾನುವಾರ ಇರಾನ್​ ಅಧ್ಯಕ್ಷ ಹಸನ್​ ರೋಹಾನಿ ಭೇಟಿ ಬಳಿಕ ತಿಳಿಸಿದ್ದಾರೆ.

ಇರಾನ್​ ಅಧ್ಯಕ್ಷರ ಭೇಟಿ

ಈಗ ಉದ್ಭವಿಸಿರುವ ಬಿಕ್ಕಟ್ಟಿನ ಪರಿಹಾರಕ್ಕೆ ಏಕೈಕ ಮಾರ್ಗ ಇದಾಗಿದೆ. ಸಹೋದರರೊಂದಿಗೆ ಭೇಟಿಯಾದ ಸಭೆಯಲ್ಲಿ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ. ಬಾಗ್ದಾದ್‌ನಲ್ಲಿ ಅಮೆರಿಕದ ಉನ್ನತ ಕಮಾಂಡರ್ ಸೊಲೈಮಾನಿ ಹತ್ಯೆ ಮತ್ತು ಇರಾಕ್‌ನಲ್ಲಿನ ಯುಎಸ್ ಗುರಿಗಳ ಮೇಲೆ ಇರಾನ್ ಪ್ರತೀಕಾರದ ಕ್ಷಿಪಣಿ ದಾಳಿಯ ನಂತರ ಗಲ್ಫ್‌ನಲ್ಲಿ ಉದ್ವಿಗ್ನತೆ ಹೆಚ್ಚಾದ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಶೇಖ್ ತಮೀಮ್ ಅವರು ಅಮೆರಿಕದ ಡ್ರೋನ್ ದಾಳಿ ನಂತರ ಇರಾನ್‌ಗೆ ಬಂದ ಮೊದಲ ರಾಷ್ಟ್ರೀಯ ನಾಯಕರಾಗಿದ್ದಾರೆ. ಸ್ನೇಹಪರ ರಾಷ್ಟ್ರಗಳೊಂದಿಗೆ ಸಮನ್ವಯ ಸಾಧಿಸಲು ಪ್ರಯತ್ನಿಸಲಾಗುತ್ತಿದೆ. ಸ್ನೇಹ ರಾಷ್ಟ್ರಗಳೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

Last Updated : Jan 13, 2020, 1:27 PM IST

ABOUT THE AUTHOR

...view details