ಪ್ಯಾಲೆಸ್ಟೈನ್:ನವೆಂಬರ್ 29 ಅನ್ನು 1978 ರಿಂದ ಪ್ಯಾಲೇಸ್ಟಿನಿಯನ್ ಜನರೊಂದಿಗೆ ಅಂತಾರಾಷ್ಟ್ರೀಯ ಒಗ್ಗಟ್ಟಿನ ದಿನವೆಂದು ಆಚರಿಸಲಾಗುತ್ತದೆ. ಅರಬ್ ರಾಜ್ಯ ಮತ್ತು ಯಹೂದಿ ರಾಜ್ಯವನ್ನು ಸ್ಥಾಪಿಸುವ ಉದ್ದೇಶದಿಂದ ವಿಭಜನಾ ಯೋಜನೆ ಎಂದು ಕರೆಯಲ್ಪಟ್ಟಿದೆ. ಇದನ್ನು 29 ನವೆಂಬರ್ 1947 ರಂದು ಅಂಗೀಕರಿಸಲಾಯಿತು. ಇದೇ ಕಾರಣದಿಂದ 1977 ರಲ್ಲಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನವೆಂಬರ್ 29 ಅನ್ನು ಪ್ಯಾಲೇಸ್ಟಿನಿಯನ್ ಜನರೊಂದಿಗೆ ಅಂತಾರಾಷ್ಟ್ರೀಯ ಒಗ್ಗಟ್ಟಿನ ದಿನವೆಂದು ಘೋಷಿಸಲಾಯಿತು.
1947 ರ ನವೆಂಬರ್ 29 ರಂದು ಯುಎನ್ ಜನರಲ್ ಅಸೆಂಬ್ಲಿ 181 (II) ನಿರ್ಣಯವನ್ನು ಅಂಗೀಕರಿಸಿತು. ಪ್ಯಾಲೆಸ್ಟೈನ್ ಅನ್ನು ಅರಬ್ ರಾಜ್ಯ ಮತ್ತು ಯಹೂದಿ ರಾಜ್ಯವಾಗಿ ವಿಭಜಿಸಿತು. ಇಸ್ರೇಲ್ ರಾಜ್ಯವನ್ನು 1948 ರಲ್ಲಿ ಸ್ಥಾಪಿಸಲಾಯಿತು. ಆದರೆ, ಅರಬ್ ರಾಜ್ಯವು ಎಂದಿಗೂ ಅಸ್ತಿತ್ವಕ್ಕೆ ಬರಲಿಲ್ಲ. 1967ರಲ್ಲಿ ಯುದ್ಧದ ನಂತರ, ಇಸ್ರೇಲ್ ಪ್ಯಾಲೇಸ್ಟಿನಿಯನ್ ಭೂಮಿಯನ್ನು ಆಕ್ರಮಿಸಲು ಪ್ರಾರಂಭಿಸಿತು. ಅದು ಇಂದಿಗೂ ಮುಂದುವರೆದಿದೆ.
31 ವರ್ಷಗಳಿಂದ (1986 ರಿಂದ) ಯುನೆಸ್ಕೋ ಶಿಕ್ಷಣ, ಸಂಸ್ಕೃತಿ, ವಿಜ್ಞಾನ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಅಭಿವೃದ್ಧಿಯ ಮೂಲಕ ಪ್ಯಾಲೇಸ್ಟಿನಿಯನ್ ಜನರೊಂದಿಗೆ ಅಂತಾರಾಷ್ಟ್ರೀಯ ಒಗ್ಗಟ್ಟಿನ ದಿನವನ್ನು ಆಚರಿಸುತ್ತಿದೆ. ಈ ಗುರಿಗಳು ಸಂವಾದ ಮತ್ತು ವಿನಿಮಯವನ್ನು ಉತ್ತೇಜಿಸಲು ಯುನೆಸ್ಕೋದ ಎಲ್ಲ ಕ್ರಮಗಳನ್ನು ರೂಪಿಸುತ್ತವೆ. ಎಲ್ಲ ಮಹಿಳೆಯರು ಮತ್ತು ಪುರುಷರ ಮನಸ್ಸಿನಲ್ಲಿ ಶಾಂತಿಯನ್ನು ನಿರ್ಮಿಸಲು ಮತ್ತು ಸಾಮರಸ್ಯ, ಸುರಕ್ಷತೆಯಲ್ಲಿ ಒಟ್ಟಿಗೆ ವಾಸಿಸುವ ಅಡಿಪಾಯವನ್ನು ಪುನಃಸ್ಥಾಪಿಸಲು ಎಲ್ಲ ರೀತಿಯ ಅವಕಾಶ ಒದಗಿಸಿದೆ.