ಕರ್ನಾಟಕ

karnataka

ETV Bharat / international

ಉಜ್ಬೇಕಿಸ್ತಾನದಲ್ಲಿ ಸಿಲುಕಿದ ಭಾರತೀಯರ ರಕ್ಷಣೆ ಮಾಡ್ತೀವಿ: ಮಹಾರಾಷ್ಟ್ರ ಸಚಿವರ ಭರವಸೆ - ಮುಂಬೈ

ಕೋವಿಡ್-​ 19 ಕಾರಣದಿಂದಾಗಿ ಕೆಲ ದೇಶಗಳ ನಡುವೆ ವಿಮಾನಗಳ ಹಾರಾಟ ರದ್ದಾಗಿದ್ದು, ಪ್ರವಾಸಕ್ಕೆ ತೆರಳಿದ್ದ ಕೆಲ ಭಾರತೀಯರು ಉಜ್ಬೇಕಿಸ್ತಾನದಲ್ಲಿ ಸಿಲುಕಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ವದೇಶಕ್ಕೆ ವಾಪಸ್​ ಆಗಲು ಸಾಧ್ಯವಾಗದ ಸಂತ್ರಸ್ತರು ತಮ್ಮನ್ನು ಸ್ಥಳಾಂತರಿಸುವಂತೆ ಕೇಳಿಕೊಂಡಿದ್ದು, ಅವರ ನೆರವಿಗೆ ಈಗ ಮಹಾರಾಷ್ಟ್ರ ಸಚಿವರು ಸ್ಪಂದಿಸಿದ್ದಾರೆ.

indian-tourists
ಉಜ್ಬೇಕಿಸ್ತಾನದಲ್ಲಿ ಸಿಲುಕಿದ ಭಾರತೀಯರು

By

Published : Mar 18, 2020, 7:31 PM IST

Updated : Mar 18, 2020, 8:15 PM IST

ಮುಂಬೈ:ಕೋವಿಡ್​ 19 ಸೃಷ್ಟಿಸಿದ ಭೀತಿ ಹಿನ್ನೆಲೆಯಲ್ಲಿ ಕೆಲ ದೇಶಗಳ ನಡುವೆ ವಿಮಾನ ಹಾರಾಟ ರದ್ದಾಗಿದೆ. ಈ ಕಾರಣದಿಂದ ಪ್ರವಾಸಕ್ಕೆ ತೆರಳಿದ್ದ ಕೆಲ ಭಾರತೀಯರು ಉಜ್ಬೇಕಿಸ್ತಾನದಲ್ಲಿ ಸಿಲುಕಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸಚಿವ ಜಯಂತ್ ಪಾಟೀಲ್​ರವರ ಸಹಾಯ ಕೋರಿರುವ ಸಂತ್ರಸ್ಥರು ನಮ್ಮನ್ನು ಸ್ಥಳಾಂತರಿಸುವಂತೆ ಕೇಳಿಕೊಂಡಿದ್ದಾರೆ.

ಮಹಾರಾಷ್ಟ್ರದ 39 ಮತ್ತು ಗುಜರಾತ್‌ನ 9 ಭಾರತೀಯರು ಉಜ್ಬೇಕಿಸ್ತಾನದಲ್ಲಿ ಸಿಲುಕೊಂಡಿದ್ದು ರಕ್ಷಣೆಗೆ ಮೊರೆ ಹೋಗಿದ್ದಾರೆ. ಇವರೆಲ್ಲ ಪುಣೆ, ಸಾಂಗ್ಲಿ, ನಾಸಿಕ್, ಸೋಲಾಪುರ ಮತ್ತು ಕೊಲ್ಹಾಪುರ ಮೂಲದವರು ಎಂದು ತಿಳಿದುಬಂದಿದೆ.

ಈ ಘಟನೆಗೆ ಸ್ಪಂದಿಸಿದ ಪಾಟೀಲ್​ ಅವರು, ಎನ್​​ಸಿಪಿ ಮುಖ್ಯಸ್ಥ ಶರದ್ ಪವಾರ್ ಜತೆ ಚರ್ಚಿಸಿ ನಿಮ್ಮನ್ನು ಆದಷ್ಟು ಬೇಗ ಮರಳಿ ಭಾರತಕ್ಕೆ ಕರೆ ತರುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಸಚಿವರೊಂದಿಗೆ ವಿಡಿಯೋ ಕಾಲ್ ಮೂಲಕ ಮಾತನಾಡಿದ ಅವರು, "ಮಾರ್ಚ್ 10ರಂದು ಪ್ರವಾಸ ಕೈಗೊಂಡಿದ್ದ ನಾವು, ಮಾರ್ಚ್​ 18ರಂದು ಮರಳಿ ಭಾರತಕ್ಕೆ ಮರಳುವ ತೀರ್ಮಾನ ಕೈಗೊಂಡಿದ್ದೆವು. ಆದರೆ, ಉಜ್ಬೇಕಿಸ್ತಾನ್ ಏರ್​ವೇಸ್ ವಿಮಾನವನ್ನು ರದ್ದುಗೊಳಿಸಿದ ಹಿನ್ನೆಲೆಯಲ್ಲಿ ನಾವು ಇಲ್ಲಿ ಸಿಲುಕಿಕೊಂಡಿದ್ದೇವೆ. ಅಷ್ಟೇ ಅಲ್ಲದೆ, ಕೋವಿಡ್​ 19 ಶಂಕಿತ ಪ್ರಕರಣ ವರದಿಯಾಗಿದೆ ಎಂದು ವ್ಯಕ್ತಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ ಎಂದು ಸಚಿವರು ಹೇಳಿದ್ದಾರೆ.

ಈಗಾಗಲೇ ತಾಷ್ಕೆಂಟ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಿಂದ ಸಹಾಯ ಪಡೆಯಲು ಯತ್ನಿಸಿದ್ದರೂ ಅದು ಸಾಧ್ಯವಾಗದೇ ಇದೀಗ ಅಲ್ಲಿರುವ ಹೋಟೆಲ್​​​​ ಮೂಲಕ ಸಂಪರ್ಕ ಸಾಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Last Updated : Mar 18, 2020, 8:15 PM IST

ABOUT THE AUTHOR

...view details