ರೋಮ್(ಇಟಲಿ): ಚೀನಾ ಬಿಟ್ಟರೆ ಕೊರೊನಾ ಮಹಾಮಾರಿಗೆ ಅತಿ ಹೆಚ್ಚು ಜನರು ಸಾವನ್ನಪ್ಪಿರುವುದು ಇಟಲಿಯಲ್ಲಿ. ಇದೀಗ ಅಲ್ಲಿ ಭಾರತದ ಕೆಲ ವಿದ್ಯಾರ್ಥಿಗಳು ಸಿಕ್ಕಿಹಾಕಿಕೊಂಡಿದ್ದು, ತವರು ನೆಲ ಭಾರತಕ್ಕೆ ಬರಲು ಹರಸಾಹಸ ಪಡುತ್ತಿದ್ದಾರೆ.
ಇಟಲಿಯಲ್ಲಿ ಕೊರೊನಾ ಮರಣ ಮೃದಂಗ: ಭಾರತಕ್ಕೆ ಬರಲು ಸಹಾಯ ಮಾಡುವಂತೆ ಕೈಮುಗಿದ ಕನ್ನಡಿಗರು! - ಇಟಲಿಯಲ್ಲಿ ಇಂಡಿಯನ್ ವಿದ್ಯಾರ್ಥಿ
ಮಹಾಮಾರಿ ಕೊರೊನಾ ವಿಶ್ವದ ಎಲ್ಲಾ ದೇಶಗಳಲ್ಲೂ ಹಬ್ಬಿದ್ದು, ಚೀನಾ ಬಳಿಕ ಅತಿ ಹೆಚ್ಚು ಪ್ರಕರಣಗಳು ಕಂಡು ಬಂದಿರುವುದು ಇಟಲಿಯಲ್ಲಿ. ಅಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇಟಲಿಯ ರೋಮ್ನಿಂದ ಭಾರತಕ್ಕೆ ಬರಬೇಕಾದರೆ ಅವರಿಗೆ ಮಹಾಮಾರಿ ಕೊರೊನಾ ಇಲ್ಲ ಎಂಬ ಪ್ರಮಾಣಪತ್ರವನ್ನ ಅಲ್ಲಿನ ಸರ್ಕಾರ ನೀಡಬೇಕಾಗಿದೆ. ಆದರೆ ಅತಿ ಹೆಚ್ಚು ಪ್ರಕರಣಗಳು ಅಲ್ಲಿ ಕಂಡು ಬಂದಿರುವ ಕಾರಣ ಸರ್ಕಾರ ಇದನ್ನ ನೀಡಲು ತಡ ಮಾಡುತ್ತಿದೆ. ಜತೆಗೆ ಅವರು ನೀಡುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಇಲ್ಲಿನ ಭಾರತೀಯ ರಾಯಭಾರ ಕಚೇರಿ ಕೂಡ ತಲೆ ಕೆಡಿಸಿಕೊಳ್ಳುತ್ತಿಲ್ಲ ಎನ್ನಲಾಗಿದೆ. ಕಳೆದ 24 ಗಂಟೆಯಿಂದ ತಾವು ಏರ್ಪೋರ್ಟ್ನಲ್ಲಿ ವಾಸ್ತವ್ಯ ಹೂಡಿದ್ದು, ಇಲ್ಲಿನ ಸರ್ಕಾರ ಯಾವುದೇ ರೀತಿಯ ಸಹಾಯ ಮಾಡುತ್ತಿಲ್ಲ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇದರಲ್ಲಿ ಕೆಲ ಕನ್ನಡಿಗರಿದ್ದು, ತಮಗೆ ಸಹಾಯ ಮಾಡುವಂತೆ ಕೈಮುಗಿದು ಮನವಿ ಮಾಡಿಕೊಂಡಿದ್ದಾರೆ. ಸುಮಾರು 70ರಿಂದ 80 ವಿದ್ಯಾರ್ಥಿಗಳು ಏರ್ಪೋರ್ಟ್ನಲ್ಲೇ ವಾಸ್ತವ್ಯ ಹೂಡಿದ್ದು, ಸಹಾಯಕ್ಕಾಗಿ ಮನವಿ ಮಾಡಿಕೊಂಡಿದ್ದಾರೆ.