ಕರ್ನಾಟಕ

karnataka

ETV Bharat / international

ಲೆಬನಾನ್​ನ ಬೈರುತ್​‌ ಬಂದರಿನಲ್ಲಿ ಭಯಾನಕ ಸ್ಫೋಟ; 73 ಮಂದಿ ಸಾವು, 3,700 ಜನರಿಗೆ ಗಾಯ! - ಬೈರುತ್ ಬಂದರು

ಕಳೆದ ದಶಕದಿಂದ ರಣಗಂಗವಾದ ಲೆಬನಾನ್‌ನಲ್ಲಿ ಕೆಲ ದಿನಗಳಿಂದ ಗುಂಡಿನ ಮೊರೆತ ಕೇಳಿಬರುತ್ತಿದೆ. ನಿನ್ನೆ ನಡೆದ ಬೈರುತ್ ನಗರದ ಬಂದರಿನಲ್ಲಿ ಸಂಭವಿಸಿರುವ ಭಾರೀ ಸ್ಫೋಟವು ಲೆಬನಾನ್‌ನಲ್ಲಿ ಮತ್ತೆ ಆತಂಕದ ಕಾರ್ಮೋಡಗಳನ್ನು ಹೊತ್ತು ತಂದಿದೆ. ಈ ಸ್ಫೋಟದಲ್ಲಿ ಕನಿಷ್ಠ 73 ಮಂದಿ ಸತ್ತಿದ್ದು, ಸುಮಾರು 3,700 ಜನ ಗಾಯಗೊಂಡಿದ್ದಾರೆ. ಹಲವಾರು ಮನೆಗಳು ಹಾನಿಗೊಳಗಾಗಿವೆ.

Lebanon
ಲೆಬನಾನ್

By

Published : Aug 5, 2020, 5:47 AM IST

Updated : Aug 5, 2020, 8:22 AM IST

ಬೈರತ್​:ಲೆಬನಾನ್ ರಾಜಧಾನಿ ಬೈರುತ್ ಬಂದರು ಪ್ರದೇಶದಲ್ಲಿ ಸಂಭವಿಸಿರುವ ಭಾರೀ ಸ್ಫೋಟದಿಂದಾಗಿ 73 ಮಂದಿ ಸಾವನ್ನಪ್ಪಿದ್ದು, ಸಾವಿರಾರು ಜನ ಗಾಯಗೊಂಡಿದ್ದಾರೆ ಎಂದು ನ್ಯೂಸ್ ಏಜೆನ್ಸಿ ಎಎಫ್​​ಪಿ ವರದಿ ಮಾಡಿದೆ.

ಕಳೆದ ದಶಕದಿಂದ ರಣರಂಗವಾದ ಲೆಬನಾನ್‌ನಲ್ಲಿ ಕೆಲ ದಿನಗಳಿಂದ ಗುಂಡಿನ ಮೊರೆತ ಕೇಳಿಬರುತ್ತಿದೆ. ನಿನ್ನೆ ನಡೆದ ಬೈರುತ್ ನಗರದ ಬಂದರಿನಲ್ಲಿ ಸಂಭವಿಸಿರುವ ಭಾರೀ ಸ್ಫೋಟವು ಲೆಬನಾನ್‌ನಲ್ಲಿ ಮತ್ತೆ ಆತಂಕದ ಕಾರ್ಮೋಡಗಳನ್ನು ಹೊತ್ತು ತಂದಿದೆ. ಈ ಸ್ಫೋಟದಲ್ಲಿ ಕನಿಷ್ಠ 73 ಮಂದಿ ಸತ್ತಿದ್ದು, ಸುಮಾರು 3,700 ಜನ ಗಾಯಗೊಂಡಿದ್ದಾರೆ. ಹಲವಾರು ಮನೆಗಳು ಹಾನಿಗೊಳಗಾಗಿವೆ.

ಸ್ಫೋಟದ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ದೃಶ್ಯದಲ್ಲಿ ಸ್ಫೋಟ ಸಂಭವಿಸಿದ ತಕ್ಷಣ ಕಿತ್ತಳೆ ಬಣ್ಣದಲ್ಲಿ ಗೋಪುರ ಆಕಾರದಲ್ಲಿ ಹೊಗೆ ಆಕಾಶದ ಎತ್ತರಕ್ಕೆ ಹಾರಿದೆ. ಪರಿಣಾಮ ಬಂದರು ಪ್ರದೇಶದಲ್ಲಿದ್ದ ಗೋದಾಮುಗಳು ಕಿಟಕಿ ಗಾಜುಗಳು ಮತ್ತು ಬಾಗಿಲುಗಳು ಹಾನಿಗೊಳಗಾಗಿವೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಬೈರುತ್:ಎರಡು ಭಾರಿ ಸ್ಫೋಟಗಳು ಮಂಗಳವಾರ ಬೈರುತ್ ಬಂದರನ್ನು ಧ್ವಂಸಗೊಳಿಸಿದ್ದು, ಕನಿಷ್ಠ 73 ಜನರು ಸಾವನ್ನಪ್ಪಿದ್ದರು ಮತ್ತು ಸಾವಿರಾರು ಜನರು ಗಾಯಗೊಂಡರು, ದೂರದ ಕಟ್ಟಡಗಳನ್ನು ಅಲುಗಾಡಿಸಿದರು ಮತ್ತು ಲೆಬನಾನಿನ ರಾಜಧಾನಿಯಾದ್ಯಂತ ಭೀತಿ ಮತ್ತು ಅವ್ಯವಸ್ಥೆಯನ್ನು ಹರಡಿದರು.

ಎರಡನೆಯ ಸ್ಫೋಟವು ಅಗಾಧವಾದ ಕಿತ್ತಳೆ ಬಣ್ಣದ ಫೈರ್‌ಬಾಲ್ ಅನ್ನು ಆಕಾಶಕ್ಕೆ ಕಳುಹಿಸಿತು, ಬಂದರಿನ ಪಕ್ಕವನ್ನು ಚಪ್ಪಟೆಗೊಳಿಸಿತು ಮತ್ತು ಸುಂಟರಗಾಳಿಯಂತಹ ಆಘಾತವನ್ನು ನಗರದಾದ್ಯಂತ ಓಡಿಸಿತು, ಕಿಲೋಮೀಟರ್ (ಮೈಲಿ) ದೂರದಲ್ಲಿ ಕಿಟಕಿಗಳನ್ನು ಚೂರುಚೂರು ಮಾಡಿತು.

Last Updated : Aug 5, 2020, 8:22 AM IST

ABOUT THE AUTHOR

...view details