ಬೈರುತ್ (ಲೆಬನಾನ್) :ಗಾಜಾ ಹೋರಾಟ ಕಡಿಮೆಯಾಗುತ್ತಿದ್ದಂತೆ ಮತ್ತು ಕದನ ವಿರಾಮ ಘೋಷಣೆಯಾಗುತ್ತಿದ್ದಂತೇ, ಹಮಾಸ್ ಹಿರಿಯ ಅಧಿಕಾರಿಯೊಬ್ಬರು ಸಂದರ್ಶನವೊಂದರಲ್ಲಿ ಪ್ಯಾಲೆಸ್ತೇನಿಯನ್ ಉಗ್ರಗಾಮಿ ಗುಂಪಿಗೆ ಕ್ಷಿಪಣಿಗಳ ಕೊರತೆಯಿಲ್ಲ ಮತ್ತು ಇಸ್ರೇಲ್ ಯುದ್ಧವನ್ನು ಆಯ್ಕೆಮಾಡಿದರೆ ತಿಂಗಳುಗಟ್ಟಲೆ ಬಾಂಬ್ ದಾಳಿ ಮುಂದುವರಿಸಬಹುದು ಎಂದು ಹೇಳಿದ್ದಾರೆ.
ಹಮಾಸ್ ಉಗ್ರರ ವಿರುದ್ಧ 11 ದಿನಗಳ ಯುದ್ಧದಲ್ಲಿ ಇಸ್ರೇಲ್ ಕದನ ವಿರಾಮವನ್ನು ಘೋಷಿಸುವ ಕೆಲವೇ ಗಂಟೆಗಳ ಮೊದಲು ಒಸಾಮಾ ಹಮ್ದಾನ್ ಅಸೋಸಿಯೇಟೆಡ್ ಪ್ರೆಸ್ ಜೊತೆ ಮಾತನಾಡಿದರು.