ಗಾಜಾ ಸಿಟಿ: ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಗಾಜಾದ 7 ವರ್ಷದ ಸುಜಿ ಇಷ್ಕಾಂಟನಾ ಎಂಬ ಬಾಲಕಿಯೊಬ್ಬಳು, ತನ್ನ ತಾಯಿ ಸೇರಿದಂತೆ ಕುಟುಂಬದವರೆಲ್ಲರನ್ನು ಕಳೆದುಕೊಂಡಿದ್ದು, ತನ್ನ ಭಗ್ನ ಮನೆಯ ಅವಶೇಷಗಳ ಅಡಿಯಲ್ಲಿ ಪತ್ತೆಯಾಗಿದ್ದಳು.
ಓದಿ: EXPLAINER: ಇಸ್ರೇಲ್ ಅಥವಾ ಹಮಾಸ್.. ಯಾರಿಂದ ಯುದ್ಧಾಪರಾಧ?
ಗಾಜಾ ಪ್ರದೇಶದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಮಕ್ಕಳು ಸೇರಿದಂತೆ ನೂರಾರು ಜನ ಈಗಾಗಲೇ ಸಾವನ್ನಪ್ಪಿದ್ದಾರೆ. ಕಳೆದ 12 ವರ್ಷಗಳಲ್ಲಿ ಇದು ನಾಲ್ಕನೇ ಬಾರಿಗೆ ಇಸ್ರೇಲ್ ಮತ್ತು ಗಾಜಾದ ಹಮಾಸ್ ಉಗ್ರರ ನಡುವೆ ಯುದ್ಧ ಪ್ರಾರಂಭವಾಗಿದೆ. ಪ್ರತಿ ಬಾರಿಯೂ ಇಸ್ರೇಲ್ ಕಡೆಗೆ ಹಮಾಸ್ ರಾಕೆಟ್ ದಾಳಿ ನಡೆಸುತ್ತಿದ್ದಂತೆ, ಇತ್ತ ಜನನಿಬಿಡ ಗಾಜಾ ಪ್ರದೇಶದಲ್ಲಿ ಇಸ್ರೇಲ್ ಭಾರಿ ವೈಮಾನಿಕ ದಾಳಿ ನಡೆಸಿದೆ.
ನಾಗರಿಕರ ಸಾವು - ನೋವುಗಳನ್ನು ತಡೆಗಟ್ಟಲು ಇಸ್ರೇಲ್ ಸಿದ್ದವಿದ್ದು, ಕಟ್ಟಡಗಳನ್ನು ಧ್ವಂಸ ಮಾಡುವ ಮುನ್ನ ಸ್ಥಳಾಂತರಿಸಲು ಜನರಿಗೆ ಎಚ್ಚರಿಕೆ ನೀಡುತ್ತಿದೆ. ಹಮಾಸ್ ಇಸ್ರೇಲ್ ಕಡೆಗೆ ನೂರಾರು ರಾಕೆಟ್ಗಳನ್ನು ಹಾರಿಸಿದ್ದರಿಂದ, ಅವುಗಳಲ್ಲಿ ಹೆಚ್ಚಿನವುಗಳನ್ನು ತನ್ನ ಐರನ್ ಡ್ರೋಮ್ನಿಂದ ಹೊಡೆದುರುಳಿಸಿದೆ.
ಹಮಾಸ್ ಸುರಂಗ ಮಾರ್ಗವನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಗಾಜಾ ನಗರದ ಡೌನ್ಟೌನ್ ಮೇಲೆ ಬಾಂಬ್ ದಾಳಿ ನಡೆಸಿದೆ. ಭಾನುವಾರ ಮುಂಜಾನೆ ಇಷ್ಕಾಂಟಾನಾ ಕುಟುಂಬ ಅವರ ಮನೆಯ ಅವಶೇಷಗಳ ಅಡಿ ಸಮಾಧಿಯಾಗಿದೆ. ಬದುಕುಳಿದ ಮನೆಯ ಯಜಮಾನ ರಿಯಾದ್ ಇಷ್ಕೊಂಟಾನಾ, ಐದು ಗಂಟೆಗಳ ಕಾಲ ಭಗ್ನಾವಶೇಷಗಳ ಅಡಿ ಸಿಲುಕಿದ್ದ ಹೆಂಡತಿ, ಮಕ್ಕಳನ್ನು ತಲುಪಲು ಸಾಧ್ಯವಾಗಲಿಲ್ಲ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಡ್ಯಾಡ್, ಡ್ಯಾಡ್ ಎಂದು ಕರೆದ ಧ್ವನಿ ಮರೆಯಾಗುವ ಮೊದಲು ಅವರು ಸತ್ತಿದ್ದಾರೆಂದು ನನಗೆ ಅರಿವಾಯಿತು ಎಂದು ತಮ್ಮ ಇಬ್ಬರು ಮಕ್ಕಳನ್ನು ನೆನೆದು ಹೇಳಿದರು. ಅವರ ಮೂವರು ಹೆಣ್ಣುಮಕ್ಕಳಲ್ಲಿ 7 ವರ್ಷದ ಸುಜಿ ಇಷ್ಕಾಂಟನಾಳನ್ನು ಮಾತ್ರ ಬದುಕಿಸಲಾಗಿದೆ. ಅವಶೇಷಗಳ ಕೆಳಗೆ ಸಿಲುಕಿದ್ದ ಬಾಲಕಿಗೆ ತೀವ್ರ ಗಾಯಗಳಾಗಿವೆ ಎಂದು ಮಕ್ಕಳ ವೈದ್ಯ ಡಾ. ಜುಹೈರ್ ಅಲ್ - ಜಾರೊ ಹೇಳಿದರು.
ಈ ಎಲ್ಲಾ ಘಟನೆಗಳಿಂದ ಬಾಲಕಿ ತೀವ್ರ ಆಘಾತಗೊಂಡಿದ್ದು, ತನ್ನ ಕುಟುಂಬದ ಕೆಲವರನ್ನು ನೋಡಿದ ನಂತರ ಆಹಾರ ಸೇವಿಸುತ್ತಿದ್ದಾಳೆ. ಭಾನುವಾರ ಗಾಜಾ ನಗರದಲ್ಲಿರುವ ಹಮಾಸ್ ಸುರಂಗಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಮಿಲಿಟರಿ ದಾಳಿ ನಡೆಸಿದೆ. ಯುದ್ಧ ವಿಮಾನಗಳು ನಗರದ ಅತ್ಯಂತ ಜನನಿಬಿಡ ವಾಣಿಜ್ಯ ಮಾರ್ಗಗಳಲ್ಲಿ ಒಂದಾದ ಅಲ್-ವಹ್ದಾ ಸ್ಟ್ರೀಟ್ ಅನ್ನು ಹೊಡೆದುರುಳಿಸಿದೆ.