ಕರ್ನಾಟಕ

karnataka

ETV Bharat / international

ಭ್ರಷ್ಟಾಚಾರದ ಆರೋಪದ ಮೇಲೆ ಪಪುವಾ ನ್ಯೂಗಿನಿಯ ಮಾಜಿ ಪ್ರಧಾನಿ ಬಂಧನ

ಪಪುವಾ ನ್ಯೂಗಿನಿಯ ಮಾಜಿ ಪ್ರಧಾನಿ ಪೀಟರ್ ಓ'ನೀಲ್ ಅವರನ್ನು ಪೋರ್ಟ್ ಮೊರೆಸ್ಬಿಯ ಜಾಕ್ಸನ್‌ರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಭ್ರಷ್ಟಾಚಾರದ ಆರೋಪದ ಮೇಲೆ ಬಂಧಿಸಿ, ಅವರನ್ನು ವಿಚಾರಣೆಗೊಳಪಡಿಸಲಾಗಿದೆ.

ಪಪುವಾ ನ್ಯೂಗಿನಿಯ ಮಾಜಿ ಪ್ರಧಾನಿ ಬಂಧನ
ಪಪುವಾ ನ್ಯೂಗಿನಿಯ ಮಾಜಿ ಪ್ರಧಾನಿ ಬಂಧನ

By

Published : May 24, 2020, 4:24 PM IST

ಪೋರ್ಟ್ ಮೊರೆಸ್ಬಿ:ಇಸ್ರೇಲ್‌ನಿಂದ ಎರಡು ಜನರೇಟರ್‌ಗಳನ್ನು ಖರೀದಿಸಿ, ಅವುಗಳನ್ನು ದುರುಪಯೋಗಪಡಿಸಿಕೊಂಡು ಭ್ರಷ್ಟಾಚಾರದ ಆರೋಪದ ಮೇಲೆ ಪಪುವಾ ನ್ಯೂಗಿನಿಯ ಮಾಜಿ ಪ್ರಧಾನಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.

ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಿಂದ ಬಂದ ಪೀಟರ್ ಓ'ನೀಲ್ ಅವರನ್ನು ಪೋರ್ಟ್ ಮೊರೆಸ್ಬಿಯ ಜಾಕ್ಸನ್ ಅಂತಾ​ರಾಷ್ಟ್ರೀಯ ವಿಮಾಣ ನಿಲ್ದಾಣದಲ್ಲಿ ಶನಿವಾರ ಪೊಲೀಸರು ಬಂಧಿಸಿದ್ದಾರೆ. ಕೊರೊನಾದಿಂದ ಲಾಕ್​ಡೌನ್​ ಮಾಡಿದ ಪರಿಣಾಮ ಇಷ್ಟು ದಿನ ಆಸ್ಟೇಲಿಯಾದಲ್ಲಿದ್ದರು.

ಇದೀಗ ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದ್ದು, ವೈರಸ್ ಭೀತಿಯಿಂದಾಗಿ ಎರಡು ವಾರಗಳ ಕಾಲ ಅವರು ಮನೆಯಲ್ಲಿ ಪ್ರತ್ಯೇಕವಾಗಿ ಇರಬೇಕಾಗಿದೆ.

ಪಪುವಾ ನ್ಯೂಗಿನಿಯ ಮಾಜಿ ಪ್ರಧಾನಿ ಬಂಧನ

ಓ'ನೀಲ್ ಅವರು ಹಲವಾರು ಬಾರೀ ರಾಜೀನಾಮೆ ನೀಡಿದ ನಂತರವೂ 2019ರಲ್ಲಿ ಏಳು ವರ್ಷಗಳ ಕಾಲ ಪಪುವಾ ನ್ಯೂಗಿನಿಯಾವನ್ನು ಆಳಿದ್ದರು. ಈ ವೇಳೆ ಅವರು ಇಸ್ರೇಲ್​ನಿಂದ ಎರಡು ವಿದ್ಯುತ್ ಉತ್ಪಾದಕಗಳನ್ನು 50 ಮಿಲಿಯನ್ ಕಿನ್ಯಾಗೆ (14.2 ಮಿಲಿಯನ್ ಅಮೆರಿಕನ್ನ ಡಾಲರ್) ಖರೀದಿಸಿರುವುದು ತನಿಖೆಯಲ್ಲಿ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಸ್ಟ್ರೇಲಿಯಾದ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್​​ ಹೇಳಿಕೆ ಪ್ರಕಾರ, ಓ'ನೀಲ್ ಅವರು ಈ ಜನರೇಟರ್​ಗಳನ್ನು ಖರೀದಿಸಲು ಸಂಸತ್ತಿನ ಮತ್ತು ಯಾವುದೇ ಟೆಂಡರ್​ ಪ್ರಕ್ರಿಯೆ ನಡೆಸಿಲ್ಲ. ಕಚೇರಿ ದುರುಪಯೋಗ ಮತ್ತು ಭ್ರಷ್ಟಾಚಾರದ ಅಪರಾಧಗಳಿಗೆ ಸಮಂಜಸವಾದ ಪುರಾವೆಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಹೇಳಿದೆ.

ABOUT THE AUTHOR

...view details