ಗಾಜಾ (ಪ್ಯಾಲೆಸ್ತೀನ್): ಇಸ್ರೇಲ್‌ನ ಉತ್ತರ ಮತ್ತು ಪೂರ್ವ ಗಡಿಗಳ ಸಮೀಪವಿರುವ ಗಾಜಾ ನಗರ ಕಳೆದೊಂದು ವಾರದಿಂದ ಸಂಪೂರ್ಣ ದಾಳಿಗೆ ತುತ್ತಾಗಿದೆ. ಇಸ್ರೇಲ್ನಿಂದ ರಾಕೆಟ್ಗಳು ಬಂದುರುಳುತ್ತಿದ್ದು, ಪ್ರತಿಯಾಗಿ ಗಾಜಾದಿಂದ ನೂರಾರು ರಾಕೆಟ್ಗಳು ಇಸ್ರೇಲ್ ಭೂಪ್ರದೇಶ ತಲುಪುತ್ತಿವೆ.
ಇದು 2008ರಿಂದ ಇಸ್ರೇಲ್ ಮತ್ತು ಹಮಾಸ್ ನಡುವಿನ 4ನೇ ಯುದ್ಧ ಅಂತಲೇ ಕರೆಯಲಾಗುತ್ತಿದೆ. ಈ ಘರ್ಷಣೆಯಿಂದಾಗಿ 2 ಮಿಲಿಯನ್‌ಗಿಂತಲೂ ಹೆಚ್ಚು ಪ್ಯಾಲೆಸ್ತೀನ್ ನಿವಾಸಿಗಳು ಸಾವು ಮತ್ತು ವಿನಾಶದ ಭೀತಿಯನ್ನು ಎದುರಿಸುತ್ತಿದ್ದಾರೆ.
ಇತ್ತೀಚಿನ ಸಂಭವಿಸುತ್ತಿರುವ ಸ್ಫೋಟವು ಮತ್ತೊಂದು ವಿನಾಶಕಾರಿ ಯುದ್ಧದ ಭೀತಿಯನ್ನು ಹುಟ್ಟುಹಾಕಿದೆ ಮತ್ತು ಮತ್ತೊಮ್ಮೆ ಅಂತಾರಾಷ್ಟ್ರೀಯ ಗಮನ ಸೆಳೆದಿದೆ.
ಇಸ್ರೇಲ್ ಹಾಗೂ ಈಜಿಪ್ಟ್ ನುಡುವೆ ಸ್ಯಾಂಡ್ವಿಚ್ನಂತೆ ಕೇವಲ 25 ಮೈಲಿ ಉದ್ದ ಹಾಗೂ 6 ಮೈಲಿ ಅಗಲದಲ್ಲಿ ಗಾಜಾ ವಿಸ್ತೀರ್ಣವಿದೆ. ಇದು 1948ರ ಯುದ್ಧದ ಮೊದಲು ಪ್ಯಾಲೆಸ್ತೀನ್ ಬ್ರಿಟಿಷ್ ಆಳ್ವಿಕೆಯ ಭಾಗವಾಗಿತ್ತು, ಅದು ಈಜಿಪ್ಟ್‌ನ ನಿಯಂತ್ರಣಕ್ಕೆ ಬಂದಾಗ ಇಸ್ರೇಲ್ ಹುಟ್ಟಿಗೆ ಕಾರಣವಾಗಿತ್ತು. ಆದರೆ, ಇಸ್ರೇಲ್ನಲ್ಲಿ ತುಳಿತಕ್ಕೊಳಕ್ಕಾಗಿ ಹೊರಬಂದ ಪ್ಯಾಲೆಸ್ತೀನಿಯರು ಗಾಜಾದಲ್ಲಿ ಬಂದು ನೆಲೆಸಿದರು. ಇವರ ಸಂಖ್ಯೆಯೂ ಗಾಜಾದಲ್ಲಿ ಹೆಚ್ಚಾಯಿತು ಹಾಗೂ ಬಲಿಷ್ಠವಾಯಿತು. ಅಲ್ಲದೇ ಗಾಜಾದ ಅರ್ಧದಷ್ಟು ಜನಸಂಖ್ಯೆ ಇಸ್ರೇಲ್ನಿಂದ ಬಂದ ನಿರಾಶ್ರಿತರೆ ಆಗಿದ್ದರು.
1967ರ ಮಧ್ಯಪೂರ್ವ ಯುದ್ಧದಲ್ಲಿ ಇಸ್ರೇಲ್ ಗಾಜಾವನ್ನ ವಶಕ್ಕೆ ಪಡೆದಿತ್ತು. ಇದರ ಜೊತೆ ಪೂರ್ವ ಜೆರುಸಲೆಮ್, ಪಶ್ಚಿಮ ಭಾಗವನ್ನ ತನ್ನದಾಗಿಸಿಕೊಂಡಿತ್ತು. ಇದರ ಬೆನ್ನ ಹಿಂದೆಯೇ ಗಾಜಾದಲ್ಲಿ ಆಕ್ರೋಶದ ಕಿಚ್ಚು ಹೊತ್ತಿಕೊಂಡಿತ್ತು. ಇದಾಗಿ 1987ರಲ್ಲಿ ಮೊದಲ ಬಾರಿಗೆ ಪ್ಯಾಲೆಸ್ತೀನ್ ದಂಗೆಗೆ ಕಾರಣವಾಯಿತು. ಇದೇ ವರ್ಷ ಹಮಾಸ್ ಎಂಬ ರಾಜಕೀಯ ಸಂಘಟನೆ ಅಥವಾ ಪಕ್ಷದ ಉದಯವೂ ಆಯಿತು. ಆದರೆ, ಓಸ್ಲೋ ಶಾಂತಿ ಪ್ರಕ್ರಿಯೆ 1990ರಲ್ಲಿ ಆರಂಭಗೊಂಡು ಪ್ಯಾಲೆಸ್ತೀನ್ ನಿರಾಶ್ರಿತರಿಗೆ ಪಶ್ಚಿಮ ಭಾಗದಲ್ಲಿ ನಿಯಮಿತ ಅಧಿಕಾರ ವಾಪಸ್ ನೀಡುವಲ್ಲಿ ಯಶಸ್ವಿಯಾಗಿತ್ತು.
ಹಮಾಸ್ ಹಿಡಿತ ಆರಂಭ
ದಂಗೆ ಮತ್ತು ಹಿಂಸಾಚಾರದ ಬಳಿಕ 2005ರಲ್ಲಿ ಇಸ್ರೇಲ್ ಗಾಜಾದಿಂದ ತನ್ನ ಸೈನ್ಯ ಹಾಗೂ ಯಹೂದಿಗಳ ವಸಾಹತುಗಳ ಹಿಂತೆಗೆದುಕೊಂಡಿತು. ಇದು ಹಮಾಸ್ ಸಂಘಟನೆ ತನ್ನ ಜನರೊಂದಿಗೆ ಹೋರಾಡಿ ಗೆದ್ದ ಆರಂಭಿಕ ಯಶಸ್ಸು ಎಂದು ಪರಿಗಣಿಸಿತು. ಇಲ್ಲಿಂದ ಹಮಾಸ್ ಸಂಘಟನೆ ರಾಜಕೀಯ ಅಸ್ತ್ರವಾಗಿಯೂ ಬಳಕೆಗೆ ಬಂದಿತು.
ಬಳಿಕ 2006ರಲ್ಲಿ ಪ್ಯಾಲೆಸ್ತೀನ್ ಚುನಾವಣೆಯಲ್ಲಿ ಹಮಾಸ್ ಸಂಘಟನೆ ಭರ್ಜರಿ ಜಯ ದಾಖಲಿಸಿತು. ಅದು ಪ್ಯಾಲೆಸ್ತೀನಿಯನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರ ಫತಾಹ್ ಪಕ್ಷದೊಂದಿಗೆ ಅಧಿಕಾರ ಹೋರಾಟಕ್ಕೆ ನಾಂದಿ ಹಾಡಿತು, ಇದು 2007ರಲ್ಲಿ ಒಂದು ವಾರಗಳ ಕಾಲದ ಘರ್ಷಣೆಯಲ್ಲಿ ಗಾಜಾವು ಹಮಾಸ್ ನಿಯಂತ್ರಣಕ್ಕೆ ಒಳ ಪಡಬೇಕಾಯಿತು.