ಜೆರುಸಲೇಂ: ಇಸ್ರೇಲ್ ಸಾರ್ವತ್ರಿಕ ಚುನಾವಣೆಯಲ್ಲಿ ಯಾರಿಗೂ ಸ್ಪಷ್ಟ ಬಹುಮತ ಸಿಗುವುದಿಲ್ಲ ಎಂದು ಚುನಾವಣೋತ್ತರ ಸಮೀಕ್ಷೆಗಳು ತಿಳಿಸಿದ್ದು, ಪ್ರಧಾನಿ ಬೆಂಜಮಿನ್ ನೆತನ್ಯಾಹು ಭವಿಷ್ಯ ಮತ್ತಷ್ಟು ಅತಂತ್ರಗೊಂಡಿದೆ.
ಮಂಗಳವಾರ ಇಸ್ರೇಲ್‌ನ ಮೂರು ಪ್ರಮುಖ ಟಿವಿ ಕೇಂದ್ರಗಳಲ್ಲಿ ನಡೆದ ಸಮೀಕ್ಷೆಯಲ್ಲಿ, ನೆತನ್ಯಾಹು ಅವರ ಧಾರ್ಮಿಕ ಮತ್ತು ರಾಷ್ಟ್ರೀಯವಾದಿ ಮಿತ್ರಪಕ್ಷಗಳು ಸತತವಾಗಿ ಐದನೇ ಚುನಾವಣೆಗೆ ವೇದಿಕೆ ಕಲ್ಪಿಸಬಹುದು ಎಂದು ಊಹಿಸಲಾಗಿದೆ.
ಆದಾಗ್ಯೂ, ನೆತನ್ಯಾಹು ಮಂಗಳವಾರ ತಡರಾತ್ರಿ ಫೇಸ್‌ಬುಕ್ ಪೋಸ್ಟ್‌ನಲ್ಲಿ, "ಇಸ್ರೇಲಿಗಳು ನನ್ನ ನಾಯಕತ್ವದಲ್ಲಿ ಲಿಕುಡ್‌ಗೆ ದೊಡ್ಡ ಜಯವನ್ನು ನೀಡಿದ್ದಾರೆ." ಎಂದು ಬರೆದುಕೊಂಡಿದ್ದಾರೆ.
ಚುನಾವಣೋತ್ತರ ಸಮೀಕ್ಷೆ ಬಗ್ಗೆ ವರದಿ ಮಾಡಿದ ಮೂರು ಮಾಧ್ಯಮಗಳ ಸಾರಾಂಶ ಒಂದೇ ಆಗಿದೆ. ಇಸ್ರೇಲ್ ಸಂಸತ್ತಿನ 120 ಆಸನಗಳ ಸೆನೆಟ್‌ನಲ್ಲಿ ಬೆಂಜಮಿನ್ ನೆತನ್ಯಾಹು ಲಿಕುಡ್ ಪಕ್ಷ 53 ರಿಂದ 54 ಸ್ಥಾನಗಳಲ್ಲಿ ಜಯಗಳಿಸಿದ್ರೆ, ಅವರ ಎದುರಾಳಿಗಳು 59 ಸ್ಥಾನಗಳಲ್ಲಿ ಗೆಲ್ಲುವ ನಿರೀಕ್ಷೆಯಿದೆ. ಇನ್ನು, ನೆತನ್ಯಾಹು ಪ್ರತಿಸ್ಪರ್ಧಿಯಾದ ನಫ್ತಾಲಿ ಬೆನೆಟ್ ಅವರ ಯಾಮಿನಾ ಪಕ್ಷವು 7 ರಿಂದ 8 ಸ್ಥಾನಗಳಲ್ಲಿ ಜಯಗಳಿಸಲಿದ್ದಾರೆ ಎಂದು ಸಮೀಕ್ಷೆಗಳು ಹೇಳುತ್ತಿವೆ ಅಂತ ಮಾಧ್ಯಮಗಳು ವರದಿ ಮಾಡಿವೆ.