ಕರ್ನಾಟಕ

karnataka

ETV Bharat / international

ಉಕ್ರೇನಿಯನ್​ ವಿಮಾನ ಅಪಘಾತಕ್ಕೆ ತಾಂತ್ರಿಕ ದೋಷವೇ ಕಾರಣ: ಹಸನ್​ ರೌಹಾನಿ ಸ್ಪಷ್ಟನೆ - ಉಕ್ರೇನಿಯನ್ ಬೋಯಿಂಗ್ 737 ವಿಮಾನ ಅಪಘಾತ

ಬುಧವಾರದಂದು ಉಕ್ರೇನಿಯನ್ ಬೋಯಿಂಗ್ 737 ವಿಮಾನ ಅಪಘಾತಕ್ಕೀಡಾಗಿದ್ದು, ಈ ಅಪಘಾತಕ್ಕೆ ತಾಂತ್ರಿಕ ದೋಷವೇ ಕಾರಣ ಎಂದು ಇರಾನ್​ ಅಧ್ಯಕ್ಷ ರೌಹಾನಿ ಸ್ಪಷ್ಟಪಡಿಸಿದ್ದಾರೆ.

Ukranian plane
ಉಕ್ರೇನಿಯನ್​ ವಿಮಾನ ಅಪಘಾತ

By

Published : Jan 11, 2020, 11:27 AM IST

ತೆಹ್ರಾನ್​​(ಇರಾನ್​​):ಬುಧವಾರದಂದು ಉಕ್ರೇನಿಯನ್ ಬೋಯಿಂಗ್ 737 ವಿಮಾನ ಅಪಘಾತದಿಂದ 176 ಪ್ರಯಾಣಿಕರು ಮೃತಪಟ್ಟಿದ್ದು, ಈ ಅಪಘಾತಕ್ಕೆ ಕಾರಣಗಳೇನು ಎಂಬುದಾಗಿ ತಿಳಿಸುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದರು. ಇದರ ಬೆನ್ನಲ್ಲೇ ಇರಾನ್​ ಅಧ್ಯಕ್ಷ ಹಸನ್​ ರೌಹಾನಿ ಈ ಕುರಿತು ಮಾಹಿತಿ ನೀಡಿದ್ದಾರೆ.

ರೌಹಾನಿ, ಈ ಅಪಘಾತದ ಬಗ್ಗೆ ಮಾಹಿತಿ ನೀಡಿದ್ದು, ಉಕ್ರೇನಿಯನ್ ಬೋಯಿಂಗ್ ವಿಮಾನದ ಅಪಘಾತ ಸಂಭವಿಸಲು ತಾಂತ್ರಿಕ ದೋಷ ಹಾಗೂ ಪೈಲಟ್​​ನ ಅಜಾಗರೂಕತೆಯೇ ಕಾರಣ ಎಂದು ಇರಾನಿನ ಸಶಸ್ತ್ರ ಪಡೆಗಳ ಆಂತರಿಕ ತನಿಖೆಯು ತಿಳಿಸಿದೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಈ ಭೀಕರ ದುರಂತದ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ.

ಉಕ್ರೇನಿಯನ್ ಬೋಯಿಂಗ್ 737 ವಿಮಾನ ತೆಹ್ರಾನ್‌ನ ಇಮಾಮ್ ಖೊಮೇನಿ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿ ಕೆಲವೇ ನಿಮಿಷಗಳಲ್ಲಿ ಅಪಘಾತಕ್ಕೊಳಗಾಗಿದ್ದು, ಇರಾನ್​, ಉಕ್ರೇನಿಯನ್​, ಅಫ್ಘಾನಿಸ್ತಾನ್​, ಕೆನಡಾ, ಜೆರ್ಮನಿ, ಸ್ವೀಡನ್​ ಸೇರಿದಂತೆ ಇನ್ನಿತರ ದೇಶದ 176 ಪ್ರಯಾಣಿಕರು ಈ ಅಪಘಾತದಲ್ಲಿ ಪ್ರಾಣ ತೆತ್ತಿದ್ದರು.

ಇರಾಕ್​ನಲ್ಲಿರುವ ಅಮೆರಿಕದ ಸೇನಾನೆಲಗಳ ಮೇಲೆ ಇರಾನ್​ ಕ್ಷಿಪಣಿ ದಾಳಿ ನಡೆಸಿದ ಬೆನ್ನಲ್ಲೇ ಈ ವಿಮಾನ ದುರಾಂತ ಸಂಭವಿಸಿದ್ದು, ಉಕ್ರೇನಿಯನ್​ ವಿಮಾನ ಅಪಘಾತಕ್ಕೆ ಇರಾನ್​ ಸಿಡಿಸಿದ ಕ್ಷಿಪಣಿಗಳೆ ಕಾರಣ ಎಂದು ಅಮೆರಿಕ ಕಿಡಿಕಾರಿತ್ತು.

ABOUT THE AUTHOR

...view details